More

    ಪರಿಸರ ತಜ್ಞರ ಸಲಹೆ ಪಡೆದು ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಆಗ್ರಹ

    ಬೆಂಗಳೂರು: ಪರಿಸರ ತಜ್ಞರ ಸಲಹೆಗಳನ್ನು ಪಡೆದು ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿ ಬಿಡುಗಡೆ ಮಾಡಬೇಕೆಂದು ಪರಿಸರವಾದಿ ಡಾ. ಅ.ನ.ಯಲ್ಲಪ್ಪರೆಡ್ಡಿ ರಾಜಕೀಯ ಪಕ್ಷಗಳಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಒತ್ತಾಯಿಸಿದ್ದಾರೆ.

    ರಾಜಕೀಯ ಪಕ್ಷಗಳು ಕೇವಲ ಆರ್ಥಿಕ ತಜ್ಞರ ಸಲಹೆ, ಅಭಿಪ್ರಾಯ ಪಡೆದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿವೆ. ಕೇವಲ ಜಿಡಿಪಿ ಅಭಿವೃದ್ಧಿಯಾದರೆ ಸಾಕೆ? ಪರಿಸರ ಸಮತೋಲನ ಬೇಡವೇ? ಎಲ್ಲೆಡೆ ನೀರಿಗೆ ಹಾಹಾಕಾರ ಎದುರಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳಿಗೂ ತತ್ವಾರ ಎದುರಾಗಲಿದೆ. ಪ್ರಾಣಿ ಪಕ್ಷಿ ಸಂಕುಲ ಸೇರಿ ಇಡೀ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ಪರಿಸರ ತಜ್ಞರ ಸಲಹೆ ಪಡೆದು ಪರಿಸರ ರಕ್ಷಣೆ ಮತ್ತು ಅಭಿವೃದ್ಧಿ ಕುರಿತ ಅಂಶಗಳ ಆಧಾರದ ಮೇಲೆ ಪ್ರಣಾಳಿಕೆ ಸಿದ್ಧಪಡಿಸಬೇಕು. ಆ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಯಲ್ಲಪ್ಪರೆಡ್ಡಿ ಆಗ್ರಹಿಸಿದ್ದಾರೆ.

    ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನದಿಗಳನ್ನು ಅಭಿವೃದ್ಧಿಪಡಿಸುವುದಿಲ್ಲ, ಜಲಮೂಲ ರಕ್ಷಿಸುತ್ತಿಲ್ಲ, ಕಾಡು, ಬೆಟ್ಟಗುಡ್ಡಗಳು ಹಾಗೂ ಮರಗಳನ್ನು ಉಳಿಸುವುದನ್ನು ಬಿಟ್ಟಿ ಮನುಕುಲದ ಅಭಿವೃದ್ಧಿಗೆ ಪೂರಕವಲ್ಲದ ದೇವಾಲಯಗಳು, ಪ್ರತಿಮೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು ಪ್ರಕೃತಿ ರಕ್ಷಣೆಯತ್ತ ರಾಜಕೀಯ ಪಕ್ಷಗಳು ಗಮನ ಹರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts