More

    ಹೇಗಿದೆ ಈ ಸಲದ ವಿಶ್ವಕಪ್​ ಲೀಗ್​ ಸ್ವರೂಪ? ಸೆಮಿಫೈನಲ್​ಗೇರಲು ಎಷ್ಟು ಪಂದ್ಯ ಗೆಲ್ಲಬೇಕು?

    ಅಹಮದಾಬಾದ್​: ಕಳೆದ ಆವೃತ್ತಿಯ ಟೂರ್ನಿ ಸ್ವರೂಪವನ್ನೇ ಈ ಬಾರಿಯೂ ಏಕದಿನ ವಿಶ್ವಕಪ್​ನಲ್ಲಿ ಮುಂದುವರಿಸಲಾಗುತ್ತಿದೆ. ಇದರನ್ವಯ, ಯಾವುದೇ ಗುಂಪುಗಳು ಇರದೆ ಎಲ್ಲ 10 ತಂಡಗಳು ರೌಂಡ್​ ರಾಬಿನ್​ ಲೀಗ್​ ಮಾದರಿಯಲ್ಲಿ ಆಡಲಿದ್ದು, ಲೀಗ್​ ಹಂತದಲ್ಲಿ ತಲಾ 9 ಪಂದ್ಯಗಳನ್ನು ಆಡಲಿವೆ. 45 ಪಂದ್ಯಗಳ ಲೀಗ್​ ಹಂತದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿದ್ದು, ಅಲ್ಲಿ ಗೆದ್ದ ತಂಡಗಳು ಫೈನಲ್​ನಲ್ಲಿ ಎದುರಾಗಲಿವೆ. ಲೀಗ್​ನಲ್ಲಿ 7 ಪಂದ್ಯ ಗೆದ್ದ ತಂಡಕ್ಕೆ ಅಗ್ರ 2ರೊಳಗೆ ಸ್ಥಾನ ಲಭಿಸಿದರೆ, 6 ಪಂದ್ಯ ಗೆದ್ದರೆ ಸೆಮಿಫೈನಲ್​ ಟಿಕೆಟ್​ ನಿರೀಸಬಹುದು. ಇಲ್ಲದಿದ್ದರೆ, ಕೆಲ ಪಂದ್ಯಗಳಿಗೆ ಮಳೆ ಕಾಡುವ ಭೀತಿಯೂ ಇರುವುದರಿಂದ ರನ್​ರೇಟ್​ ಲೆಕ್ಕಾಚಾರವೂ ನಾಕೌಟ್​ಗೇರುವ ತಂಡವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

    ಕಾಡಲಿದೆ ಮಳೆ, ಇಬ್ಬನಿ ಭೀತಿ
    ಭಾರತದಲ್ಲಿ ಈ ಮುನ್ನ 1996 ಮತ್ತು 2011ರಲ್ಲಿ ಮಾರ್ಚ್​-ಏಪ್ರಿಲ್​ನಲ್ಲಿ ವಿಶ್ವಕಪ್​ ಟೂರ್ನಿ ಆಯೋಜನೆಗೊಂಡಿದ್ದರೆ, ಈ ಬಾರಿ ನವರಾತ್ರಿ-ದೀಪಾವಳಿ ಹಬ್ಬದ ಸಮಯ ಅಂದರೆ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯುತ್ತಿದೆ. ಇದು ದೇಶದ ಹೆಚ್ಚಿನ ಭಾಗದಲ್ಲಿ ಮಳೆಗಾಲ ಕಳೆದ ಚಳಿಗಾಲ ಬರುವ ಸಮಯ. ಈ ಬಾರಿ ಹೆಚ್ಚಿನ ಕಡೆ ಬರ ಇದ್ದರೂ, ವಿಶ್ವಕಪ್​ ಪಂದ್ಯಗಳಿಗೆ, ಅದರಲ್ಲೂ ದಣ ಭಾರತದಲ್ಲಿ ಮಳೆ ಕಾಡುವ ಭೀತಿ ಇದ್ದೇ ಇದೆ. ಚೆನ್ನೈನಲ್ಲಿ ಅಕ್ಟೋಬರ್​ನಲ್ಲಿ ಕ್ರಿಕೆಟ್​ ಪಂದ್ಯಕ್ಕೆ ಮಳೆ ಅಡಚಣೆ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಇನ್ನು ಚಳಿ ಶುರುವಾಗುವ ಸಮಯವಾಗಿರುವುದರಿಂದ ಅಹರ್ನಿಶಿ ಪಂದ್ಯಗಳಿಗೆ ಇಬ್ಬನಿಯೂ ದೊಡ್ಡ ತಲೆನೋವಾಗುವ ಅಪಾಯವಿದೆ. ಇಬ್ಬನಿ ನಿಯಂತ್ರಣಕ್ಕಾಗಿ ಸಂಘಟಕರು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಟೂರ್ನಿಯುದ್ದಕ್ಕೂ 2ನೇ ಸರದಿಯಲ್ಲಿ ಬ್ಯಾಟಿಂಗ್​ ಮಾಡುವ ತಂಡಗಳಿಗೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು.

    ಏಷ್ಯಾಡ್​ನಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಂದ ಪದಕ ಸಾಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts