More

    ರಫೇಲ್​ ಜೆಟ್​ಗಳು ಗೇಮ್​ ಚೇಂಜರ್​​ ಆಗುವುದು ನಿಶ್ಚಿತ: ಅಮಿತ್​ ಷಾ

    ರಫೇಲ್​ ಯುದ್ಧ ವಿಮಾನಗಳು ಭಾರತ ನೆಲವನ್ನು ಪ್ರವೇಶಿಸಿದ ಈ ದಿನ ಒಂದು ಐತಿಹಾಸಿಕ ದಿನ ಎಂದು ಗೃಹ ಸಚಿವ ಅಮಿತ್​ ಷಾ ಹೇಳಿದ್ದಾರೆ.

    ಭಾರತ ಮತ್ತು ಫ್ರಾನ್ಸ್​ ನಡುವಿನ ಒಪ್ಪಂದದ ಮೊದಲ ಭಾಗವಾಗಿ ಇಂದು ಐದು ರಫೇಲ್ ಯುದ್ಧವಿಮಾನಗಳು ಭಾರತವನ್ನು ಪ್ರವೇಶಿಸಿವೆ. ಹರಿಯಾಣದ ಅಂಬಾಲ ವಾಯುನೆಲೆಗೆ ಆಗಮಿಸಿದ ಯುದ್ಧವಿಮಾನಗಳನ್ನು ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ವಾಯುಪಡೆ ಸಂಭ್ರಮದಿಂದ ಬರಮಾಡಿಕೊಂಡಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೇ ಗೃಹ ಸಚಿವ ಅಮಿತ್​ ಷಾ ಅವರು ಸರಣಿ ಟ್ವೀಟ್​ ಮೂಲಕ ರಫೇಲ್​ ಜೆಟ್​ನ್ನು ಹೊಗಳಿದ್ದಾರೆ. ಇದೊಂದು ಐತಿಹಾಸಿಕ ದಿನ. ಭಾರತಕ್ಕೆ ಹೆಮ್ಮೆಯ ದಿನ. ಇವು ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ಶ್ರೇಷ್ಠವಾದ ಯುದ್ಧ ವಿಮಾನಗಳಾಗಿವೆ. ಆಕಾಶ ಮಾರ್ಗದಲ್ಲಿ ಶತ್ರುಗಳಿಂದ ಎದುರಾಗುವ ಯಾವುದೇ ತೊಂದರೆಯನ್ನೂ ಇವು ನಿವಾರಿಸಬಲ್ಲವು ಎಂಬ ನಂಬಿಕೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​…!

    ವೇಗದಿಂದ ಸಾಮರ್ಥ್ಯದವರೆಗೆ ಎಲ್ಲದರಲ್ಲೂ ರಫೇಲ್​ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಖಂಡಿತ ಗೇಮ್​ ಚೇಂಜರ್​ ಆಗಲಿವೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಅಭಿನಂದನೆಗಳು ಎಂದು ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.
    ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಭಾರತವನ್ನು ನರೇಂದ್ರ ಮೋದಿಯವರು ಅತ್ಯಂತ ಶಕ್ತಿಶಾಲಿ ಹಾಗೂ ಸುರಕ್ಷ ರಾಷ್ಟ್ರವನ್ನಾಗಿ ಪರಿವರ್ತಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಅವರಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    LIVE| ಭಾರತಕ್ಕೆ ಪಂಚ ಬ್ರಹ್ಮಾಸ್ತ್ರ: ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್ ರಣಧೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts