More

    ಹೊಂಗಳ್ಳಿ ಶಾಲೆಯಲ್ಲಿ ವಿಶ್ವ ಗುಬ್ಬಿ ದಿನ ಆಚರಣೆ

    ಗುಂಡ್ಲುಪೇಟೆ: ತಾಲೂಕಿನ ಹೊಂಗಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು.


    ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು ಅವರು ಗುಬ್ಬಿ ಕೊಳಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಗುಬ್ಬಿಯ ವಿಶೇಷತೆಗಳನ್ನು ತಾವೇ ಸೆರೆಹಿಡಿದ ಹಕ್ಕಿ ಚಿತ್ರಗಳನ್ನು ಪ್ರದರ್ಶಿಸಿ ವಿವರಿಸಿದರು.


    ಭಾರತದಲ್ಲಿ 10 ಬಗೆಯ ಗುಬ್ಬಿಗಳಿದ್ದು, ಮನೆಗುಬ್ಬಿ, ರಾಕ್ ಗುಬ್ಬಿ, ಮರಗುಬ್ಬಿ, ರಸೆಟ್ ಗುಬ್ಬಿ, ಸಿಂಧ್ ಗುಬ್ಬಿ, ಸೊಮಾಲಿ ಗುಬ್ಬಿ, ಕಪ್ಪು ಕತ್ತಿನ ಗುಬ್ಬಿ, ಕೇಪ್ ಗುಬ್ಬಿ, ಶೆಲಿ ಗುಬ್ಬಿ, ಸಹೇಲ್ ಗುಬ್ಬಿ ಪ್ರಭೇದಗಳಿವೆ. ಗುಬ್ಬಚ್ಚಿಯ ವಾಸಸ್ಥಳದ ಏರುಪೇರಿನಿಂದ ಅವು ದಯನೀಯ ಸ್ಥಿತಿಯಲ್ಲಿವೆ. ಅತಿಯಾದ ಕ್ರಿಮಿನಾಶಕ ಬಳಕೆಯಿಂದ ಅವುಗಳ ಸಂತತಿ ವಿನಾಶದಂಚಿನಲ್ಲಿವೆ ಎಂದರು.


    ಸಲೀಂ ಅಲಿ ಅವರು ಗುಬ್ಬಿಯಿಂದಾಗಿ ಪಕ್ಷಿತಜ್ಞರಾಗಿ ಪ್ರಖ್ಯಾತರಾದ ರೋಚಕ ಕಥೆ ತಿಳಿಸಿ, ಚೀನಾ ದೇಶದಲ್ಲಿ ಗುಬ್ಬಿಯ ವಿನಾಶದ ಕರುಣಾಜನಕ ಕಥೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮಹದೇಶ್ವರಸ್ವಾಮಿ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts