More

    ಕಾಮಗಾರಿ ಗುಣಮಟ್ಟಕ್ಕೆ ಧಕ್ಕೆ ಆಗದಿರಲಿ: ದಾವಣಗೆರೆ ಪಾಲಿಕೆ ಸದಸ್ಯೆ ಉಮಾ ಸೂಚನೆ

    ದಾವಣಗೆರೆ: ಕಾಮಗಾರಿ ಗುಣಮಟ್ಟದ ಧಕ್ಕೆ ಆಗದಂತೆ ಕೆಲಸ ನಿರ್ವಹಿಸಬೇಕು. ಸ್ವಲ್ಪ ಲೋಪ ಕಂಡುಬಂದರೂ ಸಹಿಸುವುದಿಲ್ಲ ಎಂದು 32ನೇ ವಾರ್ಡ್ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ್ ಹೇಳಿದರು.

    ಜಯನಗರ ಸಿ ಬ್ಲಾಕ್‌ನ ಕದಂಬ ಪಾರ್ಕ್ ಮುಂಭಾಗದ ರಸ್ತೆ ಹಾಗೂ ಪಾರ್ಕ್‌ನಿಂದ ರಾಜಕಾಲುವೆವರೆಗೆ ಪಾಲಿಕೆ ಸಾಮಾನ್ಯ ನಿಧಿಯಡಿ 52 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಿದ ಸಂದರ್ಭ ಗುತ್ತಿಗೆದಾರರಿಗೆ ಸೂಚಿಸಿದರು.

    ಭೂಮಿಕಾ ನಗರ 2ನೇ ಹಂತದ ಜನರಿಗೆ ಅನುಕೂಲವಾಗುವಂತೆ ಮುಖ್ಯರಸ್ತೆಗೆ ಸಂಪರ್ಕ ರಸ್ತೆ ಇಲ್ಲದೆ ದೊಡ್ಡ ಸಮಸ್ಯೆಯಾಗಿತ್ತು. ಶಾಸಕರು ಈ ಭಾಗದಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಶಾಸಕರ ಸಲಹೆಯಂತೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೆರೆಯನ್ನು ವಿಸ್ತರಿಸಲು ಮಣ್ಣು ತೆಗೆಯಲಾಗುತ್ತಿದೆ. ಅದೇ ಮಣ್ಣನ್ನು ಬಳಸಿಕೊಂಡು, ನಮ್ಮ ವಾರ್ಡ್‌ನ ಅಂಬಿಕಾ ಬಡಾವಣೆ, ಭೂಮಿಕಾ ನಗರ ಲಿಂಕ್ ರಸ್ತೆಗಳಿಗೆ ಹಾಕಿಸಿ, ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಿ, ಜನರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು.

    ಬಿಜೆಪಿ ಹಿರಿಯ ಮುಖಂಡ, ವಕೀಲ ಎ.ವೈ.ಪ್ರಕಾಶ, ಸ್ಥಳೀಯ ನಿವಾಸಿಗಳಾದ ಶಂಕರ ರಾವ್, ಶಂಕರ ನಾಯ್ಕ, ಪಂಚಾಕ್ಷರಯ್ಯ, ಕರಿಬಸಪ್ಪ, ನಿವೃತ್ತ ಅಂಚೆ ಮಾಸ್ಟರ್ ಪ್ರಕಾಶ, ಪೊಲೀಸ್ ಇಲಾಖೆಯ ರವಿ, ಪಾಲಿಕೆ ಇಇ ಮನೋಹರ, ಎಇಇಗಳಾದ ಪ್ರವೀಣ, ಜಗದೀಶ, ಎಇ ಸುಮಾ, ಗುತ್ತಿಗೆದಾರ ಸಂತೋಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts