More

    ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

     

    ಬೆಳಗಾವಿ: ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣದಿಂದ ನಿರ್ಮಾಣವಾದ ಬೆಳಗಾವಿ ಸುವರ್ಣ ಸೌಧ, ಯಾವ ಉದ್ದೇಶಕ್ಕಾಗಿ ನಿರ್ಮಿಸಲ್ಪಟ್ಟಿತ್ತೋ ಅದು ಪೂರ್ಣಪ್ರಮಾಣದಲ್ಲಿ ಈಡೇರದೆ ನನೆಗುದಿಗೆ ಬಿದ್ದಿದ್ದರೂ ಇದೀಗ ಸಂಡಿಗೆ-ಶಾವಿಗೆ ಕಾರಣಕ್ಕಾಗಿ ನಾಡಿನ ಗಮನ ಸೆಳೆದಿದೆ.

    ವಿಧಾನಸೌಧದ ಮೇಲಿನ ಒತ್ತಡ ತಗ್ಗಿಸಲು, ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಲು, ಉತ್ತರ ಕರ್ನಾಟಕ ಭಾಗಕ್ಕೂ ಶಕ್ತಿಕೇಂದ್ರವನ್ನು ಸಮೀಪಗೊಳಿಸುವಂಥ ಹಲವು ಉದ್ದೇಶಗಳೊಂದಿಗೆ ನಿರ್ಮಾಣವಾದ ಬೆಳಗಾವಿಯ ಸುವರ್ಣಸೌಧ ಕೇವಲ ಸಂಡಿಗೆ-ಶಾವಿಗೆ ಕಾರಣಕ್ಕೆ ಟಾಕ್​ ಆಫ್​ ದ ಟೌನ್​ ಆಗಿದೆ. ಅಂದರೆ ಈ ಸಾರ್ವಜನಿಕ ಕಟ್ಟಡವನ್ನು ಶಾವಿಗೆ-ಸಂಡಿಗೆಯನ್ನು ಒಣಗಿಸಲು ಬಳಸಲಾಗಿದೆ.

    ಬೆಳಗಾವಿ ಸುವರ್ಣಸೌಧದಲ್ಲಿ ಹೀಗೆ ಶಾವಿಗೆ-ಸಂಡಿಗೆ ಒಣಗಿಸಿರುವ ಚಿತ್ರಗಳು ವೈರಲ್​ ಆಗಿ, ಜನರ ಆಕ್ರೋಶ ವ್ಯಕ್ತವಾಗಲು ಆರಂಭಿಸಿದ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಗುತ್ತಿಗೆದಾರರು ಶಾವಿಗೆ-ಸಂಡಿಗೆ ಒಣಗಿಸಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಮುಂದೆ ಇಂಥ ಘಟನೆಗಳು ಆಗದಂತೆ ಜಾಗ್ರತೆ ವಹಿಸಬೇಕು ಎಂಬ ಎಚ್ಚರಿಕೆಯನ್ನೂ ನೀಡಿ, ಪ್ರಕರಣವನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದೆ.

    ಮತ್ತೊಂದೆಡೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುವರ್ಣ ಸೌಧಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸುವರ್ಣ ವಿಧಾನಸೌಧದ ಘನತೆ ಗೌರವ ಗಮನದಲ್ಲಿ ಇಟ್ಟುಕೊಂಡು ಭದ್ರತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿ ಎಂಬುದಾಗಿ ಹೇಳಿದರು.

    ಸುವರ್ಣ ಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕರ ಜತೆ ಮಾತನಾಡಿ ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯನ್ನು ನೀಡಿದರು. ಅಲ್ಲದೆ ಸುವರ್ಣ ಸೌಧದ ಭದ್ರತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲು ಸೂಚನೆ ನೀಡಿದರು.
    ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ಕುಮಾರ್ ಹುಲಕಾಯಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಾ ನಾಯ್ಕ, ಪೊಲೀಸ್ ಅಧಿಕಾರಿಗಳು ಜತೆಗಿದ್ದರು.

    ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​.. ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​.. ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

    ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ್ರು ಐದು ರೂಪಾಯಿ ಡಾಕ್ಟರ್​ ಶಂಕರೇಗೌಡ ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts