More

    ಚೆಕ್ ಪೋಸ್ಟ್ಗಳಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿ

    ಚಿತ್ತಾಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಸಂಪೂರ್ಣ ನಿಲ್ಲಬೇಕು. ಎಲ್ಲ ಚೆಕ್ ಪೋಸ್ಟ್ಗಳಲ್ಲಿ ನಿಯೋಜಿಸಿರುವ ಸಿಬ್ಬಂದಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ತಾಕೀತು ಮಾಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಕ್ರಮ ಮರಳು ನಿಯಂತ್ರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆಕ್ ಪೋಸ್ಟ್ಗಳಲ್ಲಿ ಎಷ್ಟು ವಾಹನ ತಪಾಸಣೆ ಮಾಡಿದ್ದೀರಿ ? ಎಷ್ಟು ದಂಡ ವಸೂಲಿ ಹಾಗೂ ದೂರು ದಾಖಲು ಮಾಡಿದ್ದೀರಿ ಎಂಬುದರ ಮಾಹಿತಿ ಶೀಘ್ರ ಸಲ್ಲಿಸಿ ಎಂದು ಸೂಚನೆ ನೀಡಿದರು.

    ಮರಳು ತುಂಬಿದ ಲಾರಿಯ ಜಿಪಿಎಸ್ ಚಿತ್ರ ದಾಖಲೆ ಮಾಡಬೇಕು. ಪ್ರಮಾಣ ಮೀರಿ ಹೆಚ್ಚು ಮರಳು ಸಾಗಣೆ ಮಾಡುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ ಸರ್ಕಾರದ ನಿಯಮ ಮೀರಿ ಅತ್ಯಧಿಕ ಮರಳು ಕೊಂಡೊಯ್ಯುವ ವಾಹಗಳ ಮೇಲೆ ನಿಗಾವಹಿಸಿ. ತಹಸೀಲ್ದಾರ್, ಪೋಲಿಸ್ ಅಧಿಕಾರಿಗಳು, ಆರ್‌ಟಿಒ, ಭೂ ವಿಜ್ಞಾನಿ ಇಲಾಖೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

    ತಹಸೀಲ್ದಾರ್ ಸೈಯ್ಯದ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಚಂದ್ರಶೇಖರ ತಿಗಡಿ, ಕಂದಾಯ ಇಲಾಖೆಯ ಮಧುಸೂದನ ಘಾಳೆ, ವಸಂತರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts