More

    ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ


    ಕಾರವಾರ: ಜನರ ಜತೆ ಸರ್ಕಾರ ಇದೆ ಎಂದು ವಿಶ್ವಾಸ ಹುಟ್ಟುವ ರೀತಿಯಲ್ಲಿ ಕೆಲಸ ಮಾಡಿ ಎಂದು ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
    ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಣದ ಕೊರತೆ ಇಲ್ಲ. ಯಾವುದೇ ಸಮಸ್ಯೆಯಾದಲ್ಲಿ ತುರ್ತು ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ., ಎಸ್​ಪಿ ಶಿವಪ್ರಕಾಶ ದೇವರಾಜು, ಎಸಿ ವಿದ್ಯಾಶ್ರೀ ಚಂದರಗಿ, ಕ್ರಿಮ್್ಸ ಡೀನ್ ಡಾ. ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್, ಡಿಎಚ್​ಒ ಡಾ. ಶರದ್ ನಾಯಕ ಇದ್ದರು.
    ಭಯ ಬೇಡ ಎಚ್ಚರ ವಹಿಸಿ: ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉಸ್ತವಾರಿ ಸಚಿವ ಶಿವರಾಮ ಹೆಬ್ಬಾರ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಕೋವಿಡ್ ಹರಡುವ ಪ್ರಮಾಣ ಕಡಿಮೆ ಇದೆ. ಬೇರೆ ಕೆಲ ಜಿಲ್ಲೆಗಳಲ್ಲಿ 10 ದಿನದಲ್ಲಿ ಶೇ. 18 ರಿಂದ 22ರಷ್ಟು ಪಾಸಿಟಿವ್ ಪ್ರಮಾಣವಿದೆ. ಜಿಲ್ಲೆಯ ಶಿರಸಿಯಲ್ಲಿ ಗರಿಷ್ಠ ಎಂದರೆ ಶೇ.8.57ರಷ್ಟು ಪಾಸಿಟಿವ್ ಪ್ರಮಾಣವಿದೆ. ಅಂಕೋಲಾದಲ್ಲಿ 5.8, ಕಾರವಾರದಲ್ಲಿ 5.24 ರಷ್ಟು ಪಾಸಿಟಿವ್ ಪ್ರಮಾಣವಿದೆ. ಇದರಿಂದ ಜನ ಆತಂಕಪಡುವ ಅಗತ್ಯವಿಲ್ಲ ಆದರೆ, ಎಚ್ಚರ ತಪ್ಪಬಾರದು. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಧಾರ್ವಿುಕ ಕಾರ್ಯಕ್ರಮಗಳನ್ನು, ಸಂತೆಗಳನ್ನು ಬಂದ್ ಮಾಡಲು ಸೂಚಿಸಿದ್ದೇವೆ. ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಎಸಿಗಳ ನೇತೃತ್ವದಲ್ಲಿ ಪ್ರತಿ ಉಪವಿಭಾಗ ಮಟ್ಟದಲ್ಲಿ ತಂಡ ರಚಿಸಲಾಗಿದೆ. ಅಲ್ಲದೆ, 9 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. 115 ಸೆಕ್ಟರ್ ತಂಡಗಳನ್ನು ರಚಿಸಲಾಗಿದೆ. ಹೊರಗಿನಿಂದ ಬರುವವರ ಮೇಲೆ ನಿಗಾ ಇರಿಸಲು ಸೂಚಿಸಲಾಗಿದೆ. ಕಳೆದ ವರ್ಷದ ಲಾಕ್​ಡೌನ್ ಪರಿಸ್ಥಿತಿ ಬಾರದಂತೆ ನಡೆದುಕೊಳ್ಳುವುದು ಜನರ ಕೈಯಲ್ಲಿದೆ ಎಂದರು.
    ನಮ್ಮನ್ನು ಕ್ಷಮಿಸಿ: ಸಾಕಷ್ಟು ಮದುವೆ ಸಮಾರಂಭಗಳು ಇನ್ನು ಏಳು ದಿನಗಳಲ್ಲಿ ಇರುವುದು ಗಮನಕ್ಕಿದೆ. ಈಗಾಗಲೇ ಸಾವಿರಾರು ಮಂಗಲ ಪತ್ರ ಹಂಚಿಕೆಯಾಗಿದೆ. ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಜನರ ಹಿತ ದೃಷ್ಟಿಯಿಂದ ನಾವು ಮದುವೆಗಳಲ್ಲಿ 50ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳಬಾರದು ಎಂದು ನಿಯಂತ್ರಣ ಹೇರದೇ ಬೇರೆ ದಾರಿ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವೀಕೆಂಡ್ ಕರ್ಫ್ಯೂ ಇದ್ದಾಗಲೂ ಕೇವಲ 50 ಜನರ ಸಮ್ಮುಖದಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ನಮ್ಮನ್ನು ಕ್ಷಮಿಸಿ ಸಹಕರಿಸಿ ಎಂದು ಶಿವರಾಮ ಹೆಬ್ಬಾರ ವಿನಂತಿ ಮಾಡಿಕೊಂಡರು.
    ಹೆಬ್ಬಾರ ಹೇಳಿದ್ದೇನು?
    ಜಿಲ್ಲೆಯಲ್ಲಿ ಇದುವರೆಗೆ 45 ವರ್ಷ ಮೇಲ್ಪಟ್ಟ 2 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.
    ಸದ್ಯ ಜಿಲ್ಲೆಯಲ್ಲಿ 17 ಸಾವಿರ ಡೋಸ್ ಲಸಿಕೆ ಇದೆ. ಇನ್ನೂ 10 ಸಾವಿರ ಡೋಸ್ ಸದ್ಯವೇ ಬರಲಿದೆ.
    ಗಡಿ ತಾಲೂಕಿನ ಕೋವಿಡ್ ರೋಗಿಗಳನ್ನು ಹೊರ ಜಿಲ್ಲೆಗೆ ಕಳಿಸದೇ ಕಾರವಾರ ಕ್ರಿಮ್ಸ್​ಗೆ ರವಾನಿಸಲು ಸೂಚಿಸಿದ್ದೇನೆ.
    ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ವರ್ತಿಸಬೇಕು. ಜನರ ರಕ್ತ ಹೀರುವ ಕಾರ್ಖಾನೆಗಳಾಗಬಾರದು. ಕೋವಿಡ್ ಪರಿಸ್ಥಿತಿಯಲ್ಲಿ ಲಾಭ ಮಾಡಲು ಹೋದರೆ ಕ್ರಮ ವಹಿಸಲಾಗುವುದು.

    ಯಾವುದೇ ಕಾರಣಕ್ಕೂ ಲಾಕ್​ಡೌನ್ ಆಗುವುದಿಲ್ಲ. ಕಾರ್ವಿುಕರು ಊರು ಬಿಟ್ಟು ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ಊರಿನಲ್ಲಿಯೂ ಕೋವಿಡ್ ಇದೆ. ಇದ್ದಲ್ಲಿಯೇ ಸುರಕ್ಷಿತವಾಗಿರಿ. ಕಾರ್ವಿುಕರ ಬೆಂಬಲಕ್ಕೆ ನಮ್ಮ ಸರ್ಕಾರವಿದೆ.
    | ಶಿವರಾಮ ಹೆಬ್ಬಾರ
    ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts