More

    ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕೊಡುಗೆ ನೀಡಿದ ವಂಡರ್‌ಲಾ; ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಗೆ ಮತ್ತೊಂದು ಟಿಕೆಟ್‌ ಉಚಿತ

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಿಶೇಷ ಪ್ರವೇಶ ಘೋಷಿಸಿರುವ ವಂಡರ್‌ಲಾ, ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡುವ ಮೊದಲ ಸಾವಿರ ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತ ನೀಡಲಿದೆ.

    ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್‌ 8ರಂದು ವಂಡರ್‌ಲಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಇರಲಿದೆ. ಈ ದಿನವನ್ನು ಮಹಿಳೆಯರಿಗಾಗಿ ಮೀಸಲಿಡುವ ಉದ್ದೇಶದಿಂದ 10 ವರ್ಷಕ್ಕಿಂತ ಮೇಲ್ಪಟ್ಟ ಗಂಡು ಮಕ್ಕಳಿಗೂ ಪ್ರವೇಶ ಇರುವುದಿಲ್ಲ.

    ಇದನ್ನೂ ಓದಿ: ಸಾವಿನಲ್ಲೂ ಒಂದಾದ ತಾಯಿ-ಮಗ; ಬಾಗಲಕೋಟೆಯಲ್ಲಿ ನಡೆಯಿತು ಹೃದಯ ಹಿಂಡುವ ಘಟನೆ!

    ಮಾ.8 ರಂದು ಬೆಂಗಳೂರಿನಿಂದ ವಂಡರ್​ಲಾಗೆ ಬರುವ ಮಹಿಳೆಯರಿಗೆ ವೋಲ್ವೋ ಬಸ್ ಸೇವೆಯನ್ನು ಒದಗಿಸಲು ಬಿಎಂಟಿಸಿ ಸಹಯೋಗವನ್ನು ಘೋಷಿಸಿದೆ. ಹೆಚ್ಚುವರಿಯಾಗಿ ಅದೇ ದಿನ ಪಾರ್ಕ್ ಟಿಕೆಟ್ ಕೌಂಟರ್‌ನಲ್ಲಿ ವೋಲ್ವೋ ಬಸ್ ಟಿಕೆಟ್ ಪ್ರಸ್ತುತಪಡಿಸುವ ಮಹಿಳಾ ಪ್ರಯಾಣಿಕರಿಗೆ ವಂಡರ್ಲಾ ಪಾರ್ಕ್ ಟಿಕೆಟ್‌ಗಳ ಮೇಲೆ 15% ರಿಯಾಯಿತಿ ನೀಡುತ್ತಿದೆ.

    “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮಾರ್ಚ್ 8ರಂದು ವಂಡರ್‌ಲಾ ಪಾರ್ಕ್‌ಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವುದರ ಮೂಲಕ ಮಹಿಳೆಯರಿಗೆ ಅವಿಸ್ಮರಣೀಯ ದಿನವನ್ನಾಗಿಸಲಿದ್ದೇವೆ ಎಂದು ವಂಡರ್‌ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ .ಕೆ. ಚಿಟ್ಟಿಲಪ್ಪಿಳ್ಳಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಹುಬ್ಬಳ್ಳಿ | ಸಿಸಿಬಿ ಪೊಲೀಸರ ಕಾರ್ಯಾಚರಣೆ; ಪತ್ತೆಯಾಯ್ತು ಬರೋಬ್ಬರಿ 3 ಕೋಟಿ ರೂ. ಕಪ್ಪು ಹಣ

    ಬಿಎಂಟಿಸಿ ಈ ಹಿಂದೆಯೂ ವಂಡರ್‌ಲಾ ಹಾಲಿಡೇಸ್‌ನೊಂದಿಗೆ ಸಹಯೋಗ ಹೊಂದಿದ್ದು, ಇದರ ಫಲಿತಾಂಶವು ಪರಿಣಾಮಕಾರಿಯಾಗಿದೆ. ಸಾರ್ವಜನಿಕರಿಗೆ ಸಹಾಯವಾಗುವ ಇಂತಹ ಅನೇಕ ವ್ಯವಸ್ಥೆಯನ್ನು ಆಯೋಜಿಸಲು ಬಿಎಂಟಿಸಿ ಸಂಸ್ಥೆಯು ಎದುರುನೋಡುತ್ತಿದೆ ಎಂದು ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಸಿ ನಾಗರಾಜ್ ಮೂರ್ತಿ ತಿಳಿಸಿದ್ದಾರೆ.

    ಕೊಡುಗೆಯ ಕುರಿತು ಹೆಚ್ಚಿನ ವಿವರಗಳಿಗಾಗಿ, https://www.wonderla.com/offers/womens-day-offer-at-wonderla-parks.html ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು. ಸಂಪರ್ಕ.ಸಂ. 91 80372 30333, 91 80350 73966. ವಂಡರ್​ಲಾ ಕುರಿತು ಹೆಚ್ಚಿನ ಮಾಹಿತಿಗಾಗಿ, http://www.wonderla.comಗೆ ಭೇಟಿ ನೀಡಬಹುದು.

    ಇದನ್ನೂ ಓದಿ: ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕಿಯರಿಂದ ಕಿರುಕುಳ! ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts