More

    ಬೆಂಗಳೂರು, ದೆಹಲಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ?

    ನವದೆಹಲಿ: ಮಹಿಳಾ ಐಪಿಎಲ್ ಖ್ಯಾತಿಯ ‘ವುಮೆನ್ಸ್ ಪ್ರೀಮಿಯರ್ ಲೀಗ್’ (ಡಬ್ಲುೃಪಿಎಲ್) 2ನೇ ಆವೃತ್ತಿಯ ಆತಿಥ್ಯವನ್ನು ಉದ್ಯಾನನಗರಿ ಬೆಂಗಳೂರು ಜತೆಗೆ ರಾಷ್ಟ್ರ ರಾಜಧಾನಿ ದೆಹಲಿಗೆ ನೀಡುವ ಸಾಧ್ಯತೆಗಳಿವೆ. ಉದ್ಘಾಟನಾ ಆವೃತ್ತಿ ಸಂಪೂರ್ಣವಾಗಿ ಮುಂಬೈ ನಗರದಲ್ಲಿ ನಡೆಸಲಾಗಿತ್ತು. ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಒಂದು ತಿಂಗಳು ಮುಂಚಿತವಾಗಿ ಟೂರ್ನಿಯನ್ನು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಜತೆಗೆ ಟೂರ್ನಿಯನ್ನು ಮುಂಬೈನಿಂದ ಹೊರಗೆ ಒಂದೇ ತಾಣದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಮೊದಲ ಆಯ್ಕೆ ಆಗಿತು ಎನ್ನಲಾಗಿತ್ತು. ೆಬ್ರವರಿಯಲ್ಲಿ ಟೂರ್ನಿ ಆರಂಭವಾಗುವ ನಿರೀಕ್ಷೆ ಇದೆ.

    ನೇಪಾಳ ಕ್ರಿಕೆಟಿಗ ಸಂದೀಪ್‌ಗೆ 8 ವರ್ಷ ಜೈಲುಶಿಕ್ಷೆ: ಕಾಠ್ಮಂಡು: ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ನೇಪಾಳ ತಂಡದ ಸ್ಪಿನ್ನರ್ ಸಂದೀಪ್ ಲಮಿಚೇನ್‌ಗೆ ಎಂಟು ವರ್ಷಗಳ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಜತೆಗೆ ಮೂರು ಲಕ್ಷ ರೂಪಾಯಿಗಳ ದಂಡ ಹಾಗೂ ಸಂತ್ರಸ್ತೆಗೆ 2 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡುವಂತೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. 18 ವರ್ಷದ ಮಹಿಳೆಯ ಮೇಲಿನ ರೇಪ್ ಕೇಸ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ ಸಂದೀಪ್ ಪರ ವಕೀಲೆ ಸರೋಜ್, ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅತ್ಯಾಚಾರ ಆರೋಪದಿಂದಾಗಿ ನೇಪಾಳ ಕ್ರಿಕೆಟ್ ತಂಡದ ನಾಯಕನ ಹುದ್ದೆ ಕಳೆದುಕೊಂಡಿದ್ದ 23 ವರ್ಷದ ಸಂದೀಪ್, ಸೀಮಿತ ಮಾದರಿಯ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts