More

    ಸಾಮಾಜಿಕ ಕ್ಷೇತ್ರದಲ್ಲಿ ನಾರಿ ಸಾಧನೆ ಅಪಾರ

    ಮಹಾಲಿಂಗಪುರ: ಮಹಿಳೆಯರ ಸಾಧನೆ ಸ್ಮರಿಸುವ ದಿನ ಇದಾಗಿದೆ ಎಂದು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಉಪಾಧ್ಯಕ್ಷೆ ಅಕ್ಕಾತಾಯಿ ಕಿಚಡಿ ಹೇಳಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಂಚಮಸಾಲಿ ಸಮಾಜದ ಮಹಿಳಾ ಘಟಕದಿಂದ ಸ್ಥಳೀಯ ಚನ್ನಗಿರೀಶ್ವರ ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಾನ ರಕ್ಷಣೆಗೆ ಏಕಕಾಲದಲ್ಲಿ 700 ಸೀಯರು ಚಿತೆಗೆ ಹಾರಿದ್ದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ಮಹಿಳೆಯರ ಪಾವಿತ್ರೃ ಬಗ್ಗೆ ಈ ಘಟನೆ ಸಾರಿ ಹೇಳುತ್ತದೆ. ದೌರ್ಜನ್ಯ, ಶೋಷಣೆ ವಿರುದ್ಧ ಧ್ವನಿ ಎತ್ತುವ ಮಹಿಳೆಯರು ಸಂಭ್ರಮಿಸುವ ದಿನ ಇದಾಗಿದೆ. ಸಮಾಜ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದರು. ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿದ್ಯಾ ದಿನ್ನಿಮನಿ ಅಧ್ಯಕ್ಷತೆ ವಹಿಸಿದ್ದರು.

    ಖ್ಯಾತ ವೈದ್ಯೆ ಡಾ. ಉಷಾ ಬೆಳಗಲಿ, ಅಧ್ಯಾತ್ಮ ಚಿಂತಕಿ ಕಾಶಿಬಾಯಿ ಪುರಾಣಿಕ ಮಾತನಾಡಿ, ಎರಡು ಭೂಮಿ ತೂಕದ ವ್ಯಕ್ತಿತ್ವ ಮಹಿಳೆಯರದ್ದು, ಅವಳ ಸಾಮರ್ಥ್ಯ, ಶ್ರಮ ಮತ್ತು ಸಾಧನೆಗೆ ಧೈರ್ಯ ತುಂಬುವ ಈ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ ಎಂದರು. ಉಪನ್ಯಾಸಕಿ ಸುವರ್ಣಾ ಮುದ್ಲಾಪುರ, ಕಾಶಿಬಾಯಿ ಕೊಣ್ಣೂರ ಮಾತನಾಡಿದರು. ಸಾಧಕ ಮಹಿಳೆಯರಾದ ಡಾ. ಶಿವಾನಿ ಬೆಳಗಲಿ, ಮಂಜುಳಾ ಭದ್ರಶೆಟ್ಟಿ, ರೇಣುಕಾ ಸಿದ್ನಾಳ ಅವರನ್ನು ಸನ್ಮಾನಿಸಲಾಯಿತು.

    ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಅಮೃತಾ ಉಳ್ಳಾಗಡ್ಡಿ ಪ್ರಥಮ, ಲಕ್ಷ್ಮೀ ಮುಕುಂದ ದ್ವಿತೀಯ, ಎಸ್.ಎಸ್. ದಾಶ್ಯಾಳ ತೃತೀಯ ಹಾಗೂ ಜಾನಪದ ಗಾಯನ ಸ್ಪರ್ಧೆಯಲ್ಲಿ ಸುವರ್ಣಾ ಪಾಟೀಲ ಪ್ರಥಮ, ನೀಲಾಂಬಿಕಾ ಪಾಟೀಲ ದ್ವಿತೀಯ, ಕಸ್ತೂರಿ ಪೂಜಾರಿ ತೃತೀಯ ಸ್ಥಾನ ಗಳಿಸಿ ಬಹುಮಾನ ಪಡೆದರು.

    ಶಿಕ್ಷಕಿ ಸರೋಜಿನಿ ಕುಳಲಿ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಸರೋಜಿನಿ ಶಿರೋಳ ಸ್ವಾಗತಿಸಿದರು. ಖಜಾಂಚಿ ರೇಣುಕಾ ಹುಬ್ಬಳ್ಳಿ ನಿರೂಪಿಸಿದರು. ಸುಮಾ ಉಳ್ಳಾಗಡ್ಡಿ ವಂದಿಸಿದರು.

    ಸಮಾಜದ ಮಹಿಳಾ ಘಟಕದ ಸಹಕಾರ್ಯದರ್ಶಿ ಡಾ. ಶಶಿರೇಖಾ ಹುದ್ದಾರ, ಸದಸ್ಯರಾದ ಭಾರತಿ ದಲಾಲ, ಶಶಿಕಲಾ ವಜ್ರಮಟ್ಟಿ, ಶಕುಂತಲಾ ವಜ್ರಮಟ್ಟಿ, ಮಂಜುಳಾ ದಿನ್ನಿಮನಿ, ಮೀನಾಕ್ಷಿ ಉಳ್ಳಾಗಡ್ಡಿ, ನೀಲವ್ವ ಖೋತ, ಜಯಶ್ರೀ ಪಟ್ಟಣಶೆಟ್ಟಿ, ಅನಿತಾ ಸುಣಧೋಳಿ, ಕಾಶಿಬಾಯಿ ಉಮರಾಣಿ, ಬಸವ್ವ ಅಮ್ಮಣಗಿ, ಮಹಾನಂದಾ ಮುನ್ಯಾಳ, ಪೂರ್ಣಿಮಾ ನಂದೆಪ್ಪನವರ, ರತ್ನಬಾಯಿ ದಲಾಲ, ಮಾಲಾ ಶಿರೋಳ, ಭಾರತಿ ಸೂರಗೊಂಡ, ರೇಖಾ ಪೂಜಾರಿ, ಜಯಶ್ರೀ ಖೋತ, ಭಾಗವ್ವ ಮೇಟಿ, ಶಾರದಾ ಬಿಜ್ಜರಗಿ, ಭಾರತಿ ಮುತ್ತಪ್ಪಗೋಳ, ಡಾ. ಎ.ಆರ್. ಬೆಳಗಲಿ, ಈರಪ್ಪ ದಿನ್ನಮನಿ, ಎಸ್.ಎಂ. ಉಳ್ಳಾಗಡ್ಡಿ, ಹನುಮಂತ ಕೊಣ್ಣೂರ, ಬಸಪ್ಪ ಕೊಪ್ಪದ, ಡಾ. ಅಶೋಕ ದಿನ್ನಿಮನಿ, ಹನುಮಂತ ಶಿರೋಳ, ವಿಜಯಕುಮಾರ ಕುಳಲಿ, ಬಸವರಾಜ ದಲಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts