More

    ಚುನಾವಣೆ ಬಹಿಷ್ಕಾರ ಹಿಂದಕ್ಕೆ

    ಮಹಾಲಿಂಗಪುರ: ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ.ಜಾನಕಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಹಿಂಪಡೆಯುವುದಾಗಿ ಮಹಾಲಿಂಗಪುರ ತಾಲೂಕು ರಚನಾ ಹೋರಾಟಗಾರರು ತಿಳಿಸಿದರು.

    ಈಗ ಲೋಕಸಭೆ ಚುನಾವಣೆ ಇರುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಆತುರದ ನಿರ್ಧಾರ ಬೇಡ. ಚುನಾವಣೆ ಮುಗಿದ ತರುವಾಯ ಜಮಖಂಡಿ ಉಪವಿಭಾಗಾಧಿಕಾರಿಗಳು ನೀಡಿದ ಆಶ್ವಾಸನೆ ಮೇರೆಗೆ ಮಹಾಲಿಂಗಪುರ ಪಟ್ಟಣವನ್ನು ಹೋಬಳಿ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂಬ ಭರವಸೆಯನ್ನು ನೀಡಿದ ಡಿಸಿ, ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ಹಕ್ಕಿನಿಂದ ಕೇಳಿ ಎಂದು ಹೋರಾಟಗಾರರಿಗೆ ಸಲಹೆ ನೀಡಿದರು.

    ಮಹಾಲಿಂಗಪುರ ತಾಲೂಕು ರಚನೆಗಾಗಿ ಇಲ್ಲಿಯರೆಗೆ ನಡೆದಿರುವ ಹೋರಾಟ ಮತ್ತು ಅದಕ್ಕೆ ಸರ್ಕಾರದಿಂದ ಬಂದ ಪ್ರತಿಕ್ರಿಯೆಗಳ ಕುರಿತು ಸಮಗ್ರ ವರದಿ ತಯಾರಿಸಿ ತಮಗೆ ಸಲ್ಲಿಸುವಂತೆ ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಡಿಸಿ ಸೂಚಿಸಿದರು.

    ಜಿಲ್ಲಾಧಿಕಾರಿಗಳು ನೀಡಿದ ಭರವಸೆಯಿಂದ ಸಂತಸಗೊಂಡ ಹೋರಾಟಗಾರರು ಚುನಾವಣೆ ಬಹಿಷ್ಕಾರವನ್ನು ಹಿಂದಕ್ಕೆ ಪಡೆದುಕೊಳ್ಳವುದಾಗಿ ಆಶ್ವಾಸನೆ ನೀಡಿದರು. ನಾವು ಮತದಾನ ಮಾಡುತ್ತೇವೆ. ಆದರೆ, ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.

    ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಕಾರ್ಯಾಧ್ಯಕ್ಷ ಧರೆಪ್ಪ ಸಾಂಗಲೀಕರ, ಹೋರಾಟಗಾರರಾದ ರಫೀಕ ಮಾಲದಾರ, ಮಹಾದೇವ ಮಾರಾಪೂರ, ಸಿದ್ದು ಶಿರೋಳ, ಶಿವಲಿಂಗ ಟಿರ್ಕಿ, ವಿರೇಶ ಆಸಂಗಿ, ಜಯರಾಮಶೆಟ್ಟಿ, ಜಿಪಂ ಸಿಇಒ ಹಾಗೂ ಎಸ್ಪಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts