More

    ದೇಶದ ರಕ್ಷಣೆಗೆ ಮೋದಿ ಗೆಲ್ಲಿಸೋಣ

    ಮಹಾಲಿಂಗಪುರ: ದೇಶದ ರಕ್ಷಣೆಗಾಗಿ ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಲು ಗೆಲ್ಲಿಸೋಣ ಎಂದು ಬನಹಟ್ಟಿಯ ಹಿಂದು ಮುಖಂಡ ನಂದು ಗಾಯಕವಾಡ ಹೇಳಿದರು.

    ಪಟ್ಟಣದ ಸಾಧು ನಿರಂಜನಾಶ್ರಮದಲ್ಲಿ ಭಾನುವಾರ ಸಂಜೆ ನಡೆದ ನಮೋ ಬ್ರಿಗೇಡ್ 2.0 ಮಹಾಲಿಂಗಪುರ ನಗರ ಘಟಕದ ರಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಇದು ಎಂಪಿ ಚುನಾವಣೆಯಲ್ಲ, ಪಿಎಂ ಚುನಾವಣೆಯಾಗಿದ್ದು, ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು 30 ದಿನಗಳ ಶ್ರಮವಹಿಸಿ ಪ್ರಚಾರ ಮಾಡಿ, ಮೇ7 ರಂದು ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತಹಾಕಿರಿ, ಅಕ್ಕಪಕ್ಕದ ಮನೆಯವರನ್ನು ಕರೆದುಕೊಂಡು ಬಂದು ಮತಹಾಕಿಸಿ ಎಂದರು.

    ನೇಕಾರ ಮುಖಂಡ ಮನೋಹರ ಶಿರೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಚುನಾವಣೆಗಳಲ್ಲಿನ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಮರೆತು ದೇಶದ ಹಿತಕ್ಕಾಗಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿರಿ ಎಂದರು.
    ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ, ಸದಸ್ಯ ಶೇಖರ ಅಂಗಡಿ ಮಾತನಾಡಿದರು.

    ನಮೋ ಬ್ರಿಗೇಡ್ ನಗರ ಘಟಕ ಪದಾಧಿಕಾರಿಗಳು

    ನಮೋ ಬ್ರಿಗೇಡ್ 2.0 ಮಹಾಲಿಂಗಪುರ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿ ವಹಿಸಿಕೊಡಲಾಯಿತು.
    ಮಹಾಲಿಂಗ ಶಿವಣಗಿ(ಗೌರವಾಧ್ಯಕ್ಷ),ರಾಘವೇಂದ್ರ ಗರಗಟ್ಟಿ(ಅಧ್ಯಕ್ಷ), ಚನ್ನು ಆರೇಗಾರ, ಮಹಾಲಿಂಗ ಜಮಖಂಡಿ, ರಾಕೇಶ ಕೆಸರಗೊಪ್ಪ(ಉಪಾಧ್ಯಕ್ಷ), ಭೈರೇಶ ಆದೆಪ್ಪನ್ನವರ, ಶ್ರೀನಿಧಿ ಕುಲಕರ್ಣಿ, ಅಕ್ಷಯ ಜಳ್ಳಿ, (ಪ್ರಧಾನ ಕಾರ್ಯದರ್ಶಿ), ಮಹಾಲಿಂಗ ದೇಸಾಯಿ(ಸಂಘಟನಾ ಕಾರ್ಯದರ್ಶಿ), ಬಸವರಾಜ ಮುರಾರಿ, ಶಿವಾನಂದ ಕಲ್ಮಡಿ, ಈರಣ್ಣ ಹುಣಶ್ಯಾಳ, ವಿನೋದ ಹುಣಶ್ಯಾಳ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಲಾಯಿತು.

    ನಮೋ ಬ್ರಿಗೇಡ್ ಸಾಮಾಜಿಕ ಜಾಲತಾಣ ವಿಭಾಗ

    ಕಿರಣ ದಲಾಲ, ಅನೀಲ ಖವಾಸಿ, ಅಭಿಷೇಕ ಗುಮಟೆ, ಸಾಗರ ಫರೀಟ್, ಸಂದೀಪ ಸೂರಗೊಂಡ, ರಾಜು ನಾವ್ಹಿ, ನಾಗಲಿಂಗ ಸುತಾರ, ಶಿವಾನಂದ ಸಣ್ಣಕ್ಕಿ, ಅಭಿಷೇಕ ಸೊನ್ನದ, ಜಗದೀಶ ಜಕ್ಕನ್ನವರ ಅವರನ್ನು ಆಯ್ಕೆ ಮಾಡಲಾಯಿತು.

    ಅಲ್ಲದೆ, ಅಭಿಷೇಕ ಲಮಾಣಿ ಅವರನ್ನು ನಮೋ ಬ್ರಿಗೇಡ್ ರಬಕವಿ-ಬನಹಟ್ಟಿ ತಾಲೂಕು ಸಹ ಸಂಚಾಲಕರನ್ನಾಗಿ ನೇಮಕಗೊಳಿಸಲಾಯಿತು.
    ಪುರಸಭೆ ಸದಸ್ಯ ರವಿ ಜವಳಗಿ, ಮುಖಂಡರಾದ ಅಪ್ಪು ಹಿಟ್ಟಿನಮಠ, ಚನ್ನಪ್ಪ ರಾಮೋಜಿ, ಪುಂಡಲೀಕ ಗಡೆಕಾರ, ವಿಜಯಕುಮಾರ ಸಬಕಾಳೆ, ಶಿವಾನಂದ ಅಂಗಡಿ, ಸುರೇಶ ಶಿಂಧೆ, ಹಣಮಂತ ಜಮಾದಾರ ಅತಿಥಿಗಳಾಗಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts