More

    ಪ್ರತಿಭಟನೆ ಹಿಂಪಡೆದ ಮಹಿಳೆಯರು

    ಬ್ಯಾಡಗಿ: ಮೂರು ದಿನಗಳಿಂದ ನಿವೇಶನ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಪುರಸಭೆ ಎದುರು ನಡೆಸುತ್ತಿದ್ದ ಪ್ರತಿಭಟನೆ ಉಪವಿಭಾಗಾಧಿಕಾರಿ ಭರವಸೆ ಮೇರೆಗೆ ಶುಕ್ರವಾರ ಹಿಂಪಡೆಯಲಾಯಿತು.

    ಇಲ್ಲಿನ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಿವೇಶನಗಳ ಹಕ್ಕುಪತ್ರ ವಿತರಿಸಲು ಪುರಸಭೆ ವಿಳಂಬ ಧೋರಣೆ ತಾಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಆಗಮಿಸುವರೆಗೂ ಕದಲುವುದಿಲ್ಲ ಎಂದು ನೂರಾರು ಮಹಿಳೆಯರು ಎರಡು ದಿನಗಳಿಂದ ಪಟ್ಟು ಹಿಡಿದಿದ್ದರು.

    ಶುಕ್ರವಾರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ದಿಲ್ಲೇಶ ಶರ್ವ, ‘ಸ್ಥಳೀಯರ ನಿವೇಶನ ಹಕ್ಕುಪತ್ರ ನೀಡುವ ಪ್ರಕ್ರಿಯೆ, ಆಧಾರ ಕಾರ್ಡ್ ಲಿಂಕ್ ಪೂರ್ಣಗೊಂಡಿಲ್ಲ. ಹೀಗಾಗಿ ಆಯ್ಕೆಪಟ್ಟಿ ಪ್ರಕಟಿಸುವುದು ಬಾಕಿ ಉಳಿದಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಾಗೂ ಆಶ್ರಯ ಸಮಿತಿ ರಚಿಸಿದ ಬಳಿಕ ಕಾಯಂ ಪರಿಹಾರ ಸಿಗಲಿದೆ. ಪುರಸಭೆ ಆಡಳಿತ ಮಂಡಳಿ ವಿಶೇಷ ಸಭೆ ಏರ್ಪಡಿಸಿ ಇತ್ಯರ್ಥಪಡಿಸಲು ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ಸಮಿತಿ ಸಂಚಾಲಕ ಎಂ.ಡಿ. ಚಿಕ್ಕಣ್ಣನವರ, ಸಿಪಿಐ ಭಾಗ್ಯವತಿ ಬಂಟೆ, ಕರುನಾಡು ವೇದಿಕೆ ಅಧ್ಯಕ್ಷೆ ಪರೀದಾಭಾನು ನದಿಮುಲ್ಲಾ, ಸುರೇಶ ಡಂಬಳ, ಗುತ್ತೆವ್ವ ಮಾಳಗಿ, ವಿದ್ಯಾ ವಡ್ಡರ, ರೂಪಾ ಮಡಿವಾಳರ, ಅಂಜನಾ ದೊಡ್ಡಮನಿ, ರಾಧಾ ಶಿರಾಳಕೊಪ್ಪ, ಕುಸುಮಾ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts