ಕುಡಿಯುವ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ..!

water fetch from well
Published on

ಕೊಶಿಂಪಾಡಾ​: ಮಹಿಳೆಯೊಬ್ಬಳು ಕುಡಿಯುವ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಕೊಶಿಂಪಾಡಾ ಗ್ರಾಮದಲ್ಲಿ ನಡೆದಿದೆ. ನಾಸಿಕ್‌ನ ದೂರದ ಗುಡ್ಡಗಾಡು ಹಳ್ಳಿಗಳ ಜತೆಗೆ ರಾಯಗಢ, ಔರಂಗಾಬಾದ್ ಜಿಲ್ಲೆಗಳಲ್ಲಿಯೂ ತೀವ್ರ ನೀರಿನ ಕೊರತೆ ಉಂಟಾಗಿದೆ.

ಕೊಶಿಂಪಾಡಾ ಗ್ರಾಮದ ಮಹಿಳೆಯೊಬ್ಬಳು ಕುಡಿಯುವ ನೀರಿನ ಸಲುವಾಗಿ ಹಗ್ಗದ ಸಹಾಯದಿಂದ ಸುಮಾರು 20 ಅಡಿ ಬಾವಿಗೆ ಇಳಿದು, ಕಲುಷಿತ ನೀರನ್ನು ಸಂಗ್ರಹಿಸಿದ್ದಾಳೆ. ಗ್ರಾಮದಲ್ಲಿ ನೀರಿಲ್ಲದ ಕಾರಣ ಇಲ್ಲಿನ ನಿವಾಸಿಗಳು ಬಾವಿಗೆ ಇಳಿಯ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ನೀರಿನ ಸಮಸ್ಯೆ ಗ್ರಾಮದ ಜನರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬಾವಿಯಿಂದ ನೀರು ತರಲು ನಿವಾಸಿಗಳು ಪ್ರತಿದಿನ ಗಂಟೆಗಟ್ಟಲೆ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ, ಹೀಗೆ ಸಂಗ್ರಹಿಸಿದ ಕಲುಷಿತ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡಲು ಫಿಲ್ಟರ್ ಸಹ​ ಮಾಡುತ್ತಿದ್ದಾರೆ.

ಬರ ಹಾಗೂ ಮಳೆಯ ಕೊರತೆಯಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ನೀರು ಪೂರೈಕೆಗೆ ತೊಂದರೆಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net