More

    ಮಹಿಳೆಯರೇ ಕಿರುಕುಳಕ್ಕೆ ಒಳಗಾಗಿದ್ದೀರಾ?- ನೇರ ನನಗೆ ಕರೆ ಮಾಡಿ- ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು

    ಬೆಂಗಳೂರು: ದೇಶಾದ್ಯಂತ ಲಾಕ್​ಡೌನ್​ ಅವಧಿಯಲ್ಲಿ ಅಗತ್ಯ ಸೇವೆಗೆ ಸಂಬಂಧಿಸಿದವರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ರಜೆ ಪಡೆದು ಮನೆಯಲ್ಲಿದ್ದಾರೆ. ಆದರೆ ಗೃಹಿಣಿಯರಿಗೆ ಅವರ ಕರ್ತವ್ಯದಿಂದ ಮುಕ್ತಿಯಿಲ್ಲ. ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಅವರಿಗೆ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಕೆಲವರು ಮನೆಯಿಂದಲೇ ಕಚೇರಿಯ ಕೆಲಸವನ್ನು ಮಾಡಬೇಕಿರುವುದರಿಂದ ಕಾರ್ಯಭಾರ ದುಪ್ಪಟ್ಟಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಖಿನ್ನತೆ ಅಥವಾ ಕಿರುಕುಳಕ್ಕೆ ಒಳಗಾಗುವ ಸಂದರ್ಭಗಳು ಇಲ್ಲದಿಲ್ಲ. ಇಂಥವರ ನೆರವಿಗೆ ರಾಜ್ಯ ಮಹಿಳಾ ಆಯೋಗ ಮುಂದಾಗಿದೆ ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

    ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿರುವ ಆಯೋಗ, ಮಹಿಳೆಯರು ಕಿರುಕುಳಕ್ಕೆ ಒಳಗಾದಲ್ಲಿ ಅಥವಾ ಸಂಕಷ್ಟಕ್ಕೆ ಗುರಿಯಾದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು. ಮಹಿಳೆಯರೊಂದಿಗೆ ಹಿರಿಯರು ಹಾಗೂ ಪುರುಷರು ಸಂವೇದನೆಯೊಂದಿಗೆ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಯೋಗದ ಮೂಲಕ ಮನವಿ ಮಾಡಿದ್ದಾರೆ.

    ಒಂದು ವೇಳೆ ಸಮಸ್ಯೆಗಳು ಎದುರಾದಲ್ಲಿ ಈಮೇಲ್​ [email protected] ​ ಮೂಲಕ ಆಪ್ತ ಸಮಾಲೋಚನೆ ಅಥವಾ ಕಾನೂನು ಸಲಹೆ ಪಡೆದುಕೊಳ್ಳಬಹುದು ಎಂದು ಸೂಚಿಸಿದೆ.  ಇದರ ಹೊರತಾಗಿಯೂ ತುರ್ತು ಅಗತ್ಯವಿದ್ದಲ್ಲಿ ಮೊ: 9481004361 ಮೂಲಕ ತಮ್ಮನ್ನು ಸಂಪರ್ಕಿಸಬಹುದು ಎಂದು ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

    ಲಾಕ್​ಡೌನ್​ ಅವಧಿಯಲ್ಲೂ ಅಪ್ರೆಂಟಿಸ್​ಗಳಿಗೆ ಸ್ಟೈಪಂಡ್​ ನಿರಾಕರಿಸುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts