More

    ಮಹಿಳೆಯ ಮೇಲೆ ಕೈ ಮಾಡಿದ್ದ ಬಿಜೆಪಿ ನಾಯಕ ಅರೆಸ್ಟ್​: ಪತ್ನಿಗೆ ಫೋನ್​ ಮಾಡಿ ಸಿಕ್ಕಿಬಿದ್ದ ಆರೋಪಿ

    ಲಖನೌ: ನೋಯ್ಡಾದ ಹೌಸಿಂಗ್​ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ ಬಿಜೆಪಿ ನಾಯಕ ಶ್ರೀಕಾಂತ್​ ತ್ಯಾಗಿ ಎಂಬುವವರನ್ನು ನೋಯ್ಡಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಶ್ರೀಕಾಂತ್​ ತ್ಯಾಗಿ ಅವರು ಬಿಜೆಪಿ ಕಿಶಾನ್​ ಮೊರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿದ್ದಾರೆ. ಶ್ರೀಕಾಂತ್​ ಜೊತೆ ಇತರೆ ಮೂವರು ಆರೋಪಿಗಳನ್ನು ಮೀರತ್​ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

    ಘಟನೆ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿ, ಆರೋಪಿಯ ವಿರುದ್ಧ ಎಫ್​ಐಆರ್​ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಿತ್ತು. ಎಲ್ಲೆಡೆ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆ ತ್ಯಾಗಿ ಪರಾರಿಯಾಗಿದ್ದ. ಅವರ ಟವರ್​​ ಲೊಕೇಶನ್​ ಆಗಾಗ ಪತ್ನಿ ಮತ್ತು ವಕೀಲರನ್ನು ಸಂಪರ್ಕಿಸುತ್ತಿದ್ದನ್ನು ಗಮನಿಸಿದ ಪೊಲೀಸರು, ಅದರ ಜಾಡು ಹಿಡಿದು ಸೋಮವಾರ ರಾತ್ರಿ ಶಹರಾನ್ಪುರ್​ ತಲುಪಿದ್ದರು. ಮಂಗಳವಾರ ಬೆಳಗ್ಗೆ ತ್ಯಾಗಿ ಮೀರತ್​ಗೆ ಬಂದಾಗ ಅವರನ್ನು ಬಂಧಿಸಲಾಗಿದೆ. ತ್ಯಾಗಿ ಬುಧವಾರ ನ್ಯಾಯಾಲಯದ ಮುಂದೆ ಶರಣಾಗಲು ನಿರ್ಧಿರಿಸಿದ್ದರು ಎಂದು ತಿಳಿದುಬಂದಿದೆ.

    ನೋಯ್ಡಾದ ಸೆಕ್ಟರ್ -93 ಬಿ ಯಲ್ಲಿನ ಗ್ರ್ಯಾಂಡ್ ಓಮ್ಯಾಕ್ಸ್ ಹೌಸಿಂಗ್ ಸೊಸೈಟಿಯಲ್ಲಿ ಅವರ ಮನೆಯ ಹೊರಗಿನ ಅಕ್ರಮ ನಿರ್ಮಾಣವನ್ನು ಬುಲ್ಡೋಜರ್‌ಗಳು ಕಿತ್ತುಹಾಕಿದ ಒಂದು ದಿನದ ನಂತರ ಅವರ ತ್ಯಾಗಿ ಬಂಧನವಾಗಿದೆ. ಅದಕ್ಕೂ ಮುನ್ನ ಇಂದು ಬೆಳಗ್ಗೆ ತ್ಯಾಗಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.

    ಭಾನುವಾರ ಸಂಜೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ಪ್ರವೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿದ್ದಕ್ಕಾಗಿ ಮತ್ತು ತ್ಯಾಗಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯ ವಿಳಾಸವನ್ನು ಕೇಳಿದ್ದಕ್ಕಾಗಿ ತ್ಯಾಗಿಯ ಆರು ಬೆಂಬಲಿಗರನ್ನು ಪೊಲೀಸರು ಸೋಮವಾರ, ಬಂಧಿಸಿದ್ದಾರೆ.

    ಘಟನೆ ಹಿನ್ನೆಲೆ ಏನು?
    ಗ್ರಾಂಡ್​ ಒಮ್ಯಾಕ್ಸಿ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಅವರು ಕೆಲವು ಮರಗಳನ್ನು ನೆಡುವುದನ್ನು ಮಹಿಳೆ ಆಕ್ಷೇಪಿಸಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಮಹಿಳೆ ಹೇಳಿದರೂ, ಹೀಗೆ ಮಾಡಲು ನನಗೂ ಹಕ್ಕಿದೆ ಎಂದು ಬಿಜೆಪಿ ನಾಯಕ ವಾದಿಸಿದ್ದ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತಿಗೆ ಬೆಳೆದು ವಾಗ್ವಾದವೇ ಶುರುವಾಯಿತು. ತಾಳ್ಮೆ ಕಳೆದುಕೊಂಡು ತ್ಯಾಗಿ ಮಹಿಳೆಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದರು. ಅಲ್ಲದೆ, ಮಹಿಳೆ ತ್ಯಾಗಿ ವಿರುದ್ಧ ಪ್ರತಿಭಟಿಸಲು ಆರಂಭಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ತ್ಯಾಗಿ ವಿರುದ್ಧ ಆಕ್ರೋಶಗಳ ಸುರಿಮಳೆ ಬಂದಿತ್ತು. ಮಹಿಳೆಯ ಜೊತೆ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಖಂಡಿಸಿದ್ದರು. ವಿಡಿಯೋ ವೈರಲ್​ ಆದ ಬೆನ್ನಲ್ಲೇ ತ್ಯಾಗಿ ವಿರುದ್ಧ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಬಂಧಿಸುವಂತೆ ಸೂಚನೆ ನೀಡಿತ್ತು.

    ಶ್ರೀಕಾಂತ್ ತ್ಯಾಗಿ ಸೊಸೈಟಿ ಪಾರ್ಕ್ ಅನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಇದರಿಂದ ಇತರ ನಿವಾಸಿಗಳಿಗೆ ಅನಾನುಕೂಲವಾಗಿದೆ. ಉದ್ಯಾನವನವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಬಗ್ಗೆ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಶ್ರೀಕಾಂತ್ ತಮ್ಮ ನಿಲುವು ಬದಲಿಸಲು ನಿರಾಕರಿಸಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಪಾರ್ಕ್​ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. (ಏಜೆನ್ಸೀಸ್​)

    ಟ್ರಾಲಿ ಬ್ಯಾಗ್​ ಎಳ್ಕೊಂಡು ಬರ್ತಿದ್ದವಳ ಮೇಲೆ ಸಂಶಯಗೊಂಡು ಬ್ಯಾಗ್ ಓಪನ್​ ಮಾಡಿಸಿದ ಪೊಲೀಸರಿಗೆ ಕಾದಿತ್ತು ಶಾಕ್​!

    ಹಾಲು ಮಾರುವ ಸೋಗಿನಲ್ಲಿ ಖೋಟಾನೋಟು ಚಲಾವಣೆ: ಬಿಜೆಪಿ ಮುಖಂಡನೇ ಕಿಂಗ್​ಪಿನ್​

    ಕೂದಲು ಹರಡಿಕೊಂಡಿದ್ದ ಸುಂದರಿ ಸಿಕ್ಕಿದ್ಲು… ಕೆಳಗೆ ನೋಡಿದ್ರೆ… ಸ್ಪರ್ಧಿಗಳನ್ನು ಬೆಚ್ಚಿಬೀಳಿಸಿದ ಆರ್ಯವರ್ಧನ್ ಗುರೂಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts