More

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಮುಂಬೈ: ನಗರದ ಅಕ್ಷ ಬೀಚ್​ ಬಳಿ ಪ್ಲಾಸ್ಟಿಕ್​ ಚೀಲದಲ್ಲಿ ಮಹಿಳೆಯ ಮೃತ ದೇಹ ಸಿಕ್ಕಿದ್ದ ಪ್ರಕರಣವನ್ನು ಮುಂಬೈ ಪೊಲೀಸರು ಇದೀಗ ಬೇಧಿಸಿದ್ದಾರೆ. ತನಿಖೆ ನಡೆಸಿದಾಗ ಮಹಿಳೆಯ ಮಾವನ ನಿಜ ರೂಪ ಬಯಲಾಗಿದೆ.

    ಇದನ್ನೂ ಓದಿ: ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

    ನಂದಿನಿ ಮತ್ತು ಪಂಕಜ್​ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಈ ಮದುವೆ ಪಂಕಜ್​ನ ಅಪ್ಪ ಕಮಲ್​ ರೈ (55)ಗೆ ಇಷ್ಟವಿರಲಿಲ್ಲವಂತೆ. ಮದುವೆ ತಡೆಯಲು ಸಾಕಷ್ಟು ಪ್ರಯತ್ನವನ್ನು ಆತ ಮಾಡಿದ್ದನಂತೆ. ಮದುವೆಯಾದ ಮೇಲೂ ಸೊಸೆಯನ್ನು ಯಾವಾಗಲೂ ಅನುಮಾನದಿಂದಲೇ ನೋಡುತ್ತಿದ್ದನಂತೆ. ಡಿಸೆಂಬರ್​ 9ರಂದು ಮಗ ಹೊರಗಡೆ ಕೆಲಸಕ್ಕೆ ಹೋದಾಗ ಸೊಸೆ ರೂಮಿನಲ್ಲಿ ಮಲಗಿದ್ದಳು. ಆ ಸಮಯದಲ್ಲಿ ಮನೆಗೆ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡ ಕಮಲ್​, ಸೊಸೆಯ ರೂಮಿಗೆ ತೆರಳಿ ಆಕೆಯ ಕೈ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಪ್ಲಾಸ್ಟಿಕ್​ ಚೀಲವೊಂದರಲ್ಲಿ ಕಟ್ಟಿ ಪ್ಯಾಕ್​ ಮಾಡಿ ಮನೆ ಹತ್ತಿರದ ನಾಲೆಯಲ್ಲಿ ಬಿಸಾಕಿದ್ದಾರೆ.

    ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್‌ಡಿಪಿಐ ಬೆಂಬಲಿಗರು

    ಡಿಸೆಂಬರ್​ 9ರಂದು ನಾಲೆ ಸೇರಿದ್ದ ಶವ ಡಿಸೆಂಬರ್​ 24ರಂದು ಅಕ್ಷ ಬೀಚ್​ ತಲುಪಿದೆ. ಬೀಚ್​ನ ದಡದಲ್ಲಿದ್ದ ಚೀಲದಲ್ಲಿ ಶವವಿರುವುದನ್ನು ಗುರುತಿಸಿದ ದಾರಿಹೋಕನೊಬ್ಬ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಂಡುಹಿಡಿದಿದ್ದಾರೆ. ಇದೀಗ ಕಮಲ್​ ರೈ ಮತ್ತು ಆತನಿಗೆ ಸಹಾಯ ಮಾಡಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts