More

    ತುಟಿಯ ಮೇಲಿದೆ.. ತುಂಟ ಕಿರುನಗೆ…. ಅಲ್ಲಲ್ಲ ವಿಶ್ವದಾಖಲೆ

    ಕೌಲಾಲಂಪುರ: ಚೆನ್ನಾಗಿ ಕಾಣಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ಇದಕ್ಕೆ ಒಂದು ಮಿತಿ ಇದ್ದರೆ ಅದು ಒಳ್ಳೆಯದು. ಮನಸ್ಸಿಗೆ ಖುಷಿ ನೀಡುತ್ತದೆ. ಆದರೆ ಅದೇ ಮಿತಿ ಮೀರಿದರೆ ಜನ ಅದನ್ನು ಹುಚ್ಚು ಎಂದೇ ಪರಿಗಣಿಸುತ್ತಾರಲ್ಲವೆ?

    ಇಲ್ಲೂ ಒಬ್ಬಾಕೆ ಇದ್ದಾಳೆ ನೋಡಿ, ಬಲ್ಗೇರಿಯಾದ 22 ವರ್ಷದ ಈಕೆ ಇನ್​ಸ್ಟಾ ಗ್ರಾಂ ಮಾಡೆಲ್, ಹೆಸರು ಆಂಡ್ರಿಯಾ ಇವನೊವಾ. ಇವಳದೂ ಇದೇ ಹಾದಿಯೇ. ಈಕೆ ತಾನು ಎಲ್ಲರಿಗಿಂತ ಭಿನ್ನವಾಗಿ ಕಾಣಬೇಕು ಆ ಮೂಲಕವೇ ವಿಶ್ವ ದಾಖಲೆ ಬರೆಯಬೇಕೆಂಬ ಹೆಬ್ಬಯಕೆ ಇಟ್ಟುಕೊಂಡಿದ್ದಾಳೆ. ಅದಕ್ಕಾಗಿ ಇವಳು ಇಟ್ಟುಕೊಂಡದ್ದು ತುಟಿಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುವ ಗುರಿ….! ಈ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುವ ಹುಚ್ಚು ಹವ್ಯಾಸಕ್ಕೆ ಬಿದ್ದು ಒಂದಲ್ಲ, ಎರಡಲ್ಲ ಒರೊಬ್ಬರಿ 20 ಬಾರಿ ಲಿಪ್ ಇಂಜೆಕ್ಷನ್ ತೆಗೆದುಕೊಂಡಿದ್ದಾಳೆ ಅಷ್ಟೇ ಅಲ್ಲದೆ 21 ನೇ ಚುಚ್ಚುಮದ್ದಿಗೂ ಮುಂದಾಗಿದ್ದಾಳೆ. ಇದೇ ಹುಚ್ಚು ಹವ್ಯಾಸಕ್ಕೆ ಆಕೆ ನೀರಿನಂತೆ ಹಣ ವ್ಯಯಿಸುತ್ತಿದ್ದಾಳೆ.

    ಇದನ್ನೂ ಓದಿ:

    ಒಂದು ತಾಸಿನಲ್ಲೇ ಪತ್ತೆ ಹಚ್ಚಬಹುದು ಕರೊನಾ ಸೋಂಕು, ಸಿಎಸ್​ಐಆರ್​​​​ನ ತಂತ್ರಜ್ಞಾನ ಅಭಿವೃದ್ಧಿ

    ಇತ್ತೀಚೆಗೆ ಈಕೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ತನ್ನ ವಿಚಿತ್ರ ತುಟಿಗಳ ಫೋಟೋ ಹಂಚಿಕೊಂಡಿದ್ದಾಳೆ. ಇದರಲ್ಲಿ ಆಕೆಯ ತುಟಿ ನಾಲ್ಕು ಪಟ್ಟು ಹಿರಿದಾಗಿರುವಂತೆ ಕಾಣುತ್ತಿದೆ. ಇಷ್ಟಾಗಿಯೂ ತುಟಿ ಹಿರಿದಾಗಿಸಿಕೊಳ್ಳುವಲ್ಲಿ ಪಡೆಯುತ್ತಿರುವ ಚಿಕಿತ್ಸೆಯನ್ನು ಆಕೆ ನಿಲ್ಲಿಸಿಲ್ಲ. ಅತಿ ದೊಡ್ಡ ತುಟಿ ಹೊಂದಿರುವ ಮಹಿಳೆ ಎಂದು ಅಧಿಕೃತವಾಗಿ ವಿಶ್ವ ದಾಖಲೆ ಬರೆಯುವವರೆಗೂ ಚುಚ್ಚುಮದ್ದು ಪಡೆಯುವುದನ್ನು ನಿಲ್ಲುಸುವುದಿಲ್ಲವಂತೆ ಆಂಡ್ರಿಯಾ.

    ಯಾವಾಗಿನಿಂದ ಈ ಹುಚ್ಚು ಹವ್ಯಾಸ? : 2018ರಿಂದಲೇ ಈ ಹುಚ್ಚಿಗೆ ಬಿದ್ದಿದ್ದಾಳೆ ಈಕೆ. ಕಳೆದ ವರ್ಷ 15 ಸುತ್ತುಗಳ ತುಟಿಯ ಚುಚ್ಚುಮದ್ದನ್ನು ಪಡೆದಿದ್ದಳಂತೆ. ನನ್ನ ಹೊಸ ತುಟಿಗಳನ್ನು ನಾನು ತುಂಬ ಇಷ್ಟಪಡುತ್ತೇನೆ. ಇಂಜೆಕ್ಷನ್ ಪಡೆದ ನಂತರ ತಿನ್ನಲು ಕಿರಿಕಿರಿ ಎನಿಸುತ್ತಿತ್ತು. ಹೀಗಾಗಿ ಆರಂಭದ ತುಸು ತುಂಬಾ ಕಷ್ಟವಾಗುತ್ತಿತ್ತು. ಆದರೂ ನನ್ನ ತುಟಿಗಳ ಗಾತ್ರ ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂಬ ಬಯಕೆ ಇದೆ. ನನ್ನ ವೈದ್ಯರೂ ಮತ್ತಷ್ಟು ಲಿಪ್ ಇಂಜೆಕ್ಷನ್ ನೀಡುವುದಾಗಿ ಹೇಳಿದ್ದಾರೆ. ಆದರೆ ಅದಕ್ಕೆ ನಾನು ಕನಿಷ್ಠ ಎರಡ್ಮೂರು ತಿಂಗಳಾದರೂ ಕಾಯಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ಆಕೆ ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
    ಚೆನ್ನಾಗಿ ಕಾಣಬೇಕೆಂದು ಹುಚ್ಚು ಇರುವವರು ಏನೆಲ್ಲ ಸಾಹಸ, ತ್ಯಾಗ ಮಾಡುತ್ತಾರೆ.

    ದರ್ಯವರ್ಧಕಗಳಿಗಾಗಿಯೇ ಹೆಚ್ಚು ಖರ್ಚು ಮಾಡುತ್ತಾರೆ. ಸೌಂದರ್ಯಕ್ಕಾಗಿಯೇ ಲಕ್ಷಾನುಗಟ್ಟಲೆ ದುಡ್ಡು ಸುರಿಸಿ ಚಿಕಿತ್ಸೆ ಪಡೆಯುತ್ತಾರೆ. ಗಂಟೆಗಟ್ಟಲೆ ಪಾರ್ಲರ್​ಗಳಲ್ಲಿ ಕಾಲ ಕಳೆಯುತ್ತಾರೆ. ಆ ಮೂಲಕವೇ ಹೆಚ್ಚು ಸುದ್ದಿಯಾಗುತ್ತಾರೆ. ಈಕೆಯದೂ ಅದೇ ಕತೆ. (ಏಜನ್ಸೀಸ್).

    ಮಾಸ್ಕ್ ಧರಿಸಲು ನಿರಾಕರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts