More

    ಮನೆಯಲ್ಲಿ ಕ್ರಿಸ್​​ಮಸ್​ ಆಚರಿಸಲಿಕ್ಕೂ ಕೋರ್ಟ್​ ಮೊರೆ ಹೋದ ಮಹಿಳೆ; ಷರತ್ತುಬದ್ಧ ಅನುಮತಿ ನೀಡಿದ ನ್ಯಾಯಾಲಯ..

    ಉಡುಪಿ: ದೇವರ ಹಾಗೂ ದೇವಸ್ಥಾನಗಳ ವಿಚಾರವಾಗಿ ಜನರು ನ್ಯಾಯಾಲಯದ ಮೆಟ್ಟಿಲೇರಿದ ಪ್ರಸಂಗಗಳೇನೂ ಹೊಸದಲ್ಲ. ಆದರೆ ಇಲ್ಲೊಬ್ಬರು ಮಹಿಳೆ ಹಬ್ಬವನ್ನು ಆಚರಿಸುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾತ್ರವಲ್ಲ, ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರದ ಎಸ್ತಲಾ ಲೂಯಿಸ್​ ಹೀಗೆ ಕೋರ್ಟ್ ಮೆಟ್ಟಿಲೇರಿದ ಮಹಿಳೆ. ಇವರು ತಮ್ಮ ಮನೆಯಲ್ಲಿ ಕ್ರಿಸ್​ಮಸ್​ ಆಚರಿಸಲು ಅನುಮತಿ ಕೋರಿ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು. ಏಕೆಂದರೆ, ಪ್ರಾರ್ಥನೆ ಹೆಸರಲ್ಲಿ ಮತಾಂತರ ನಡೆಯುವ ಸಾಧ್ಯತೆ ಇರುತ್ತದೆ ಎಂದು ಸರ್ಕಾರಿ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಮಹಿಳೆಯ ಕೋರಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಕ್ರಿಸ್​ಮಸ್​ ಆಚರಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಅಲ್ಲದೆ ಶಬ್ದಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಬಾರದು, ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಬಾರದು ಎಂಬ ಷರತ್ತುಗಳೊಂದಿಗೆ ನ್ಯಾ. ಕೃಷ್ಣ ದೀಕ್ಷಿತ್​ ಆದೇಶ ನೀಡಿದ್ದಾರೆ.

    ಸಾರ್ವಜನಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರಷ್ಟೇ ಹೋಟೆಲ್​ಗೆ ಪ್ರವೇಶ!; ಕ್ರಿಸ್​ಮಸ್​​-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊಸ ಆದೇಶ

    ಹೃದ್ರೋಗಕ್ಕೆ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರ ಹೃದಯವನ್ನೇ ಗೆದ್ದ ರೋಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts