More

    ವರದಕ್ಷಿಣೆ ಕೇಸು ಹಾಕಿದ ಮಹಿಳೆಯನ್ನು ಹಾಡುಹಗಲೇ ಗುಂಡಿಕ್ಕಿ ಕೊಂದರು

    ಬಿಜನೋರ್​: ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ 35 ವರ್ಷ ವಯಸ್ಸಿನ ಮಹಿಳೆಯೊಬ್ಬಳನ್ನು ಹಾಡುಹಗಲೇ ಗುಂಡಿಕ್ಕಿ ಕೊಂದಿರುವ ಪ್ರಕರಣ ವರದಿಯಾಗಿದೆ. ಹಿಂದಿನ ದಿನವಷ್ಟೇ ಪತಿ ಮತ್ತು ಅವನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದ ಆಕೆಯ ಸಾವಿಗೆ ಅದೇ ಕಾರಣವಾಯಿತು ಎಂದು ಶಂಕಿಸಲಾಗಿದೆ.

    ಉತ್ತರಪ್ರದೇಶದ ಬಿಜನೋರ್​ನ ಸುರೇಂದ್ರ ನಗರ ಕಾಲೊನಿ ನಿವಾಸಿಯಾಗಿದ್ದ ಪ್ರಿಯಾ ಶರ್ಮಾ ಮೃತ ಮಹಿಳೆ. ಅ.29ರ ಶುಕ್ರವಾರ ಬೆಳಿಗ್ಗೆ 11:30 ರ ವೇಳೆಗೆ ಆಕೆ ಕೆಲಸ ಮುಗಿಸಿ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅವಳನ್ನು ಶೂಟ್​ ಮಾಡಲಾಯಿತು. ಗುಂಡಿನ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ಹೊರಬಂದು ನೋಡಿದಾಗ ಅವಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಬೈಕಿನ ಮೇಲೆ ಇಬ್ಬರು ಹಲ್ಲೆಕೋರರು ಸ್ಥಳದಿಂದ ಪರಾರಿಯಾದರು ಎನ್ನಲಾಗಿದೆ. ಮಾಹಿತಿ ಸಿಕ್ಕ ಪೊಲೀಸರು ಅವಳನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಅವಳು ಆ ಮುನ್ನವೇ ಮೃತಪಟ್ಟಳು ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಪುನೀತ್‌ ಸಾವಿನ ನಂತರ ಎಚ್ಚೆತ್ತುಕೊಂಡ ಕೇರಳ ಸರ್ಕಾರ: ಜಿಮ್‌ಗಳಲ್ಲಿ ಹೊಸ ನಿಯಮ

    “ಮೃತ ಪ್ರಿಯಾ ಶರ್ಮ ಪಿಎಚ್​ಡಿ ಮಾಡಿದ್ದು, ಕೆಲವು ವರ್ಷಗಳ ಹಿಂದೆ ಎನ್​ಇಟಿ ಪಾಸಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಎಂಟು ವರ್ಷಗಳಿಂದ ಇಂಗ್ಲಿಷ್​ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಕೆಲ ವರ್ಷಗಳ ಹಿಂದೆ ಭಟವಾಲಿ ಗ್ರಾಮದ ಕಮಲ್​ ದತ್​ ಶರ್ಮ ಎಂಬುವನನ್ನು ಮದುವೆ ಆಗಿದ್ದಳು. ಅ.28 ರ ಗುರುವಾರ ತನ್ನ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ಸಲ್ಲಿಸಿದ್ದಳು ಎಂದು ಬಿಜನೋರ್​ ಎಸ್ಪಿ ಧರಂವೀರ್ ಸಿಂಗ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಮೃತಳ ಪಾಲಕರು, ಈ ಹಿಂದೆಯೂ ಅಳಿಯ ಕಮಲ್​ ಶರ್ಮ ಅವಳ ಮೇಲೆ ಕಂಟ್ರಿ ಪಿಸ್ತೋಲಿನಿಂದ ಗುಂಡು ಹಾರಿಸಿದ್ದ ಎಂದೂ, ಅವನೇ ಅವಳನ್ನು ಸಾಯಿಸಿದ್ದಾನೆಂದೂ ಆರೋಪಿಸಿದ್ದಾರೆ. ಕಮಲ್​ ಶರ್ಮ ಮತ್ತು ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪ ದಾಖಲಿಸಿರುವ ಪೊಲೀಸರು, ಮೂರು ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)

    ಎನ್​​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ

    ‘ನಾಟಿಕೋಳಿ ಸಾಂಬಾರ್​, ಮಟನ್​ ಫ್ರೈ ಅಂದ್ರೆ ಪಂಚಪ್ರಾಣ’; ಗಾಜನೂರಿನಲ್ಲಿ ಅಪ್ಪು ನೆನಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts