More

    ಯುವತಿ ಮನೆಯಿಂದ ಹೊರಬರುತ್ತಿದ್ದಂತೆಯೇ ಗುಂಡಿನ ದಾಳಿ ನಡೆಸಿ ಮಾಜಿ ಪ್ರಿಯಕರ ಪರಾರಿ

    ಕೋಲ್ಕತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದ ದಕ್ಷಿಣ ಭಾಗದಲ್ಲಿ ಶನಿವಾರ ಬೆಳಗ್ಗೆ 20 ವರ್ಷದ ಯುವತಿಯೊಬ್ಬಳು ಮಾಜಿ ಪ್ರಿಯಕರನ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೃತ ಯುವತಿಯನ್ನು ಅಂತಿಮ ವರ್ಷದ ಡಿಗ್ರಿ ಸ್ಟೂಡೆಂಟ್​ ಪ್ರಿಯಾಂಕ ಪುರುಕಯಾಸ್ತಾ ಎಂದು ಗುರುತಿಸಲಾಗಿದೆ. ಮಾಜಿ ಪ್ರಿಯಕರ ಜಯಂತ ಹಲ್ದಾರ್​ ಎಂಬಾತ ಕೋಲ್ಕತದ ರೆಜೆಂಟ್​ ಪಾರ್ಕ್ ಏರಿಯಾದಲ್ಲಿ ಯುವತಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಡ್ರಗ್ಸ್​ ಚಟಕ್ಕೆ ಬಿದ್ದು ಹೆತ್ತ ಮಗುವನ್ನೇ ಭಾರಿ ಬೆಲೆಗೆ ಮಾರಿದ ದಂಪತಿ: ಆದ್ರೆ ದೇವರ ಆಟವೇ ಬೇರೆ ಇತ್ತು!

    ಬೆಳಗ್ಗೆ 8 ಗಂಟೆ ಸುಮಾರಿಗೆ ಯುವತಿಯನ್ನು ಅವಳ ಮನೆಯ ಸಮೀಪವೇ ತಡೆದು ಏನೂ ಪ್ರಚೋದನೆ ನೀಡಿದ ಬಹಳ ಹತ್ತಿರದಿಂದಲೇ ಶೂಟ್​ ಮಾಡಿ ಪರಾರಿಯಾಗಿದ್ದಾನೆ.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ ಆದರೆ, ಆರೋಪಿ ಜಯಂತ ಮೊದಲೇ ಮದುವೆಯಾಗಿರುವ ವಿಚಾರವನ್ನು ತಿಳಿದ ಯುವತಿ ಆತನೊಂದಿಗಿನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದ್ದಾಳೆ. ಇದೇ ಕೊಲೆಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

    ಆರೋಪಿಯನ್ನು ಬಂಧಿಸಲು ಪೊಲೀಸ್​ ಕಾರ್ಯಾಚರಣೆ ಆರಂಭಿಸಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್​) ಇದನ್ನೂ ಓದಿ: ಕಟ್ಟಿಗೆ ತರಲು ಕಾಡಿಗೆ ಹೋದ ಯುವಕನ ತಲೆ-ಕಾಲು ಬಿಟ್ಟು ಅರ್ಧ ದೇಹವನ್ನೇ ತಿಂದ ಸ್ಥಿತಿಯಲ್ಲಿ ಶವಪತ್ತೆ

    ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆ: ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಯುವತಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts