More

    ಕಾಂಗ್ರೆಸ್ ಕಾರ್ಯಕರ್ತನ ಮೇಲೆ ‘ರೇಪ್ ಕೇಸ್​’ ! ಮಹಿಳೆಗೆ ದಂಡ ವಿಧಿಸಿದ ಹೈಕೋರ್ಟ್

    ಚಂಡೀಗಢ : ಕಾಂಗ್ರೆಸ್ ಕಾರ್ಯಕರ್ತನೊಬ್ಬ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದು, ಈ ವಿಚಾರವಾಗಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದ ಮಹಿಳೆಯ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿದೆ. ಅಷ್ಟೇ ಅಲ್ಲ, ಸುಳ್ಳು ಮತ್ತು ಕ್ಷುಲ್ಲಕವಾದ ಮೊಕದ್ದಮೆ ಹೂಡಿದ್ದಕ್ಕೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ.

    ಪಂಜಾಬ್​ನ ಮೋಗ ಜಿಲ್ಲೆಯ ಡಿಸ್ಪೆನ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಪರಪುರುಷರೊಂದಿಗೆ ಇದ್ದ ತನ್ನ ಕೆಲವು ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. 4 ಲಕ್ಷ ರೂ. ಹಣ ನೀಡಿದ್ದರೂ, ಇನ್ನೂ ಹಣ ಕೇಳುತ್ತಾ ಏಪ್ರಿಲ್ 25, 2020 ರಂದು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ರೇಪ್ ಮಾಡಿದ ಎಂದು ಆರೋಪಿಸಿ ನಿಹಾಲ್ ಸಿಂಗ್​ ವಾಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಆರೋಪಿಯು ಆಡಳಿತಾರೂಢ ಪಕ್ಷಕ್ಕೆ ಸೇರಿದವನಾದ್ದರಿಂದ ತನಿಖೆ ನಡೆಸುತ್ತಿರುವ ಎಸ್​ಐಟಿ ನ್ಯಾಯಯುತವಾಗಿ ವರದಿ ನೀಡುತ್ತಿಲ್ಲ ಎಂದು ಆರೋಪಿಸಿ, ಸಿಬಿಐ ತನಿಖೆ ಕೋರಿದ್ದಳು.

    ಇದನ್ನೂ ಓದಿ: ರವಿಕೆ ಖರೀದಿಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯೆ ಪರ್ಸ್ ಕಳವು!

    ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್​ ಅವರು, ಮಹಿಳೆ ಮತ್ತು ಆರೋಪಿ ಇಬ್ಬರೂ ಪರಿಚಯಸ್ಥರಾಗಿದ್ದರು. ಆಕೆಯ ಗಂಡನ ಮೇಲೆ ಪಂಚಾಯ್ತಿಯಲ್ಲಿ ಆರೋಪಿಯು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಸುಳ್ಳು ಆಪಾದನೆ ಮಾಡಿದ್ದಳು ಎಂಬ ಪೊಲೀಸ್ ವರದಿಯನ್ನು ಪರಿಗಣಿಸಿ, ಅರ್ಜಿಯನ್ನು ವಜಾಗೊಳಿಸಿದರು. ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಪ್ರಯತ್ನ ನಡೆದಿದೆ ಎಂದು ಅಭಿಪ್ರಾಯಪಟ್ಟು, 1 ಲಕ್ಷ ರೂ.ಗಳನ್ನು ದಂಡವಾಗಿ ಚಂಡೀಗಢದ ಇನ್ಸ್​ಟಿಟ್ಯೂಟ್ ಆಫ್ ಬ್ಲೈಂಡ್​ಗೆ ಜಮಾ ಮಾಡಬೇಕೆಂದು ಆದೇಶಿಸಿದರು. (ಏಜೆನ್ಸೀಸ್)

    ಎಸ್​ಐಟಿ ವಿರುದ್ಧ ಸಿಡಿದೆದ್ದ ಸಿಡಿ ಲೇಡಿ: ವಿಚಾರಣೆ ನಡುವೆಯೇ ಕಮಿಷನರ್​ಗೆ ದೂರು ಪತ್ರ ಬರೆದಿದ್ದೇಕೆ?

    ಬಾಲಿವುಡ್​ ನಟರ ಬೆನ್ನು ಹತ್ತಿದ ಕರೊನಾ : ಗೋವಿಂದ ಪಾಸಿಟೀವ್

    ಹಠಾತ್ತನೇ ಭಾಷಣ ನಿಲ್ಲಿಸಿದ ಮೋದಿ! ವೈದ್ಯರ ತಂಡವನ್ನು ಕರೆದಿದ್ದೇಕೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts