More

    ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..

    ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿ ಇಂಜೆಕ್ಷನ್​ ತೆಗೆದುಕೊಳ್ಳಲು ಅದೆಷ್ಟು ಭಯ ಪಡುತ್ತಿದ್ದಿರಿ ಎನ್ನುವುದು ನೆನಪಿದೆಯೇ? ದೊಡ್ಡವರಾದ ಮೇಲೆ ಇಂಜೆಕ್ಷನ್​ ಯಾವ ಮಹಾ ಎಂದೆನಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಇಂಜೆಕ್ಷನ್​ ತೆಗೆದುಕೊಳ್ಳಲು ಮಾಡಿದ ಸಾಹಸವನ್ನು ನೀವು ನೋಡಲೇಬೇಕು.


    ಸುಕೃತಿ ತಲ್ವಾರ್​ ಹೆಸರಿನ ಮಹಿಳೆ ಕರೊನಾ ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಬಂದಿರುತ್ತಾರೆ. ಆ ವೇಳೆ ನರ್ಸ್​ ಅವರಿಗೆ ಲಸಿಕೆ ನೀಡಲು ಮುಂದಾಗುತ್ತಾರೆ. ಆದರೆ ಇಂಜೆಕ್ಷನ್​ ಎಂದರೆ ಸಾಕಷ್ಟು ಹೆದರಿಕೆಯಿದ್ದ ಸುಕೃತಿ ಕುತ್ತಲ್ಲಿದ್ದ ಎದ್ದು ನಿಲ್ಲುತ್ತಾರೆ. ಒಂದು ನಿಮಿಷ ಕೊಡಿ ಎಂದು ಬೇಡುತ್ತಾರೆ. ಅದನ್ನು ಕೇಳದ ನರ್ಸ್​ ಕೂರಲು ಹೇಳುತ್ತಾರೆ. ಕೂತ ಮೇಲೂ ಸುಕೃತಿ ಮಮ್ಮೀ ಎಂದು ಕೂಗಲಾರಂಭಿಸುತ್ತಾರೆ.


    ಮಮ್ಮೀ ಎಂದು ಕೂಗಿದ ತಕ್ಷಣ ನರ್ಸ್​ ಹೀಗೆ ಮಾಡುವುದಾದರೆ ಇಲ್ಲಿಂದ ಎದ್ದು ಹೋಗಿ, ನಾನು ಇಂಜೆಕ್ಷನ್ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇಲ್ಲ, ಸಾರಿ ಎಂದು ಕೇಳುವ ಸುಕೃತಿ ಕನಿಷ್ಠ ಮಮ್ಮೀ ಎಂದು ಹೇಳಲು ಅವಕಾಶ ಕೊಡಿ ಎನ್ನುತ್ತಾರೆ. ಇಲ್ಲ ಒಂದೂ ಪದವನ್ನೂ ಹೇಳಬಾರದು ಎಂದ ನರ್ಸ್​ ಹಾಗೆಯೇ ನಿಧಾನವಾಗಿ ಇಂಜೆಕ್ಷನ್​ ಕೊಟ್ಟು ಬಿಡುತ್ತಾರೆ.


    ಸುಕೃತಿ ಇಂಜೆಕ್ಷನ್​ ಪಡೆಯಲು ಮಾಡಿದ ಒದ್ದಾಟವನ್ನು ಆಕೆಯ ಜತೆ ಹೋದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ನೆಟ್ಟಿಗರು ತಾವು ಬಾಲ್ಯದಲ್ಲಿ ಇಂಜೆಕ್ಷನ್​ಗೆ ಹೆದರುತ್ತಿದ್ದದ್ದನ್ನು ನೆನಪಿಸಿಕೊಂಡು ನಗು ಬೀರಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts