More

    ‘ಅವ್ನು ನನ್ ಗಂಡ’ ಎನ್ನುತ್ತ ಕಿತ್ತಾಡಿಕೊಂಡ್ರು 75ರ ಅಮ್ಮ, 56ರ ಮಗಳು

    ರಷ್ಯಾ: ಇದೊಂದು ವಿಚಿತ್ರ ಘಟನೆ. ಒಂದೇ ಯುವಕನಿಗಾಗಿ ಅಮ್ಮ-ಮಗಳು ಇಬ್ಬರೂ ಜಗಳ ಶುರುಮಾಡಿದ್ದಾರೆ. ಇವರಿಬ್ಬರ ಗಲಾಟೆ ಬೀದಿಗೆ ಬಂದಿದ್ದು, ಇಬ್ಬರೂ ಕಾದಾಟಕ್ಕೂ ಇಳಿದಿದ್ದಾರೆ. ಕಾರಣ ಏನೆಂದರೆ, ಆ ಯುವಕ ಅಮ್ಮನ ಗಂಡನೂ ಹೌದು, ಮಗಳ ಗಂಡನೂ ಹೌದು!

    ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ. ಅಮ್ಮ ಎಲಿನಾ ಝೂಕೋವಾಸ್ಕಯಾ ಹಾಗೂ ಮಗಳು ಗಲಿನಾ ವಿರುದ್ಧದ ಕಾದಾಟವಿದು. ಇವರಿಬ್ಬರ ಗಂಡ ವ್ಯಾಚೆಸ್ಲವ್

    ಅಷ್ಟಕ್ಕೂ ಆಗಿರುವುದು ಏನೆಂದರೆ, ಮಗಳು ಎಲಿನಾ 2007ರಲ್ಲಿ ವ್ಯಾಚೆಸ್ಲವ್‌ನನ್ನು ಮದುವೆಯಾಗಿದ್ದಳು. ಆದರೆ ದಂಪತಿ ನಡುವೆ ವಿರಸ ಉಂಟಾಗಿದೆ. ಇಬ್ಬರೂ ವಿಚ್ಛೇದನ ತೆಗೆದುಕೊಂಡರು. ಆದರೆ ಎಲಿನಾ ತನ್ನ ಗಂಡನನ್ನು ಮನೆಯಿಂದ ಒದ್ದು ಹೊರಕ್ಕೆ ಹಾಕಿದಳು. ತನಗೆ ಇನ್ನುಮುಂದೆ ಮುಖ ತೋರಿಸಬೇಡ ಎಂದು ಹೇಳಿದಳು.

    ವ್ಯಾಚೆಸ್ಲವ್‌ಗೆ ಇದನ್ನು ಬಿಟ್ಟರೆ ಬೇರೆ ಮನೆ ಇರಲಿಲ್ಲ. ಏನು ಮಾಡಬೇಕು ಎಂದು ತೋರದೆ ಆತ ತನ್ನ ಅತ್ತೆ 75 ವರ್ಷದ ಗಲೀನಾ ಮನೆಗೆ ಬಂದಿದ್ದಾನೆ. ಅಳಿಯನ ಕಥೆ ಕೇಳಿ ಅತ್ತೆಗೂ ಬೇಸರವಾಗಿದೆ. ಇಬ್ಬರೂ ಒಂದೇ ಮನೆಯಲ್ಲಿ ನೆಲೆಸಿದ್ದಾರೆ. ಈ ನಡುವೆಯೇ ಅತ್ತೆ ಮತ್ತು ಅಳಿಯನ ನಡುವೆ ಪ್ರೇಮ ಹುಟ್ಟಿದೆ.
    ಗಂಡನನ್ನು ಕಳೆದುಕೊಂಡಿದ್ದ ಗಲೀನಾ ಅಳಿಯನನ್ನೇ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಅತ್ತೆ ತನ್ನ ಮೇಲೆ ತೋರಿರುವ ಪ್ರೀತಿಯಿಂದ ವ್ಯಾಚೆಸ್ಲವ್‌ ಕೂಡ ಒಪ್ಪುತ್ತಾನೆ. ಇಬ್ಬರ ಮದುವೆಯೂ ಆಗುತ್ತದೆ.

    ಇವರಿಬ್ಬರ ಸಂಸಾರ ಶುರುವಾದಾಗ, ಅತ್ತ ಮಗಳು ಎಲಿನಾಗೆ ಗಂಡನ ಬಗ್ಗೆ ಒಲವು ಶುರುವಾಗುತ್ತದೆ. ತಾನು ಆತನಿಗೆ ವಿಚ್ಛೇದನ ಕೊಟ್ಟು ತಪ್ಪು ಮಾಡಿದೆ ಎಂದುಕೊಳ್ಳುತ್ತಾಳೆ. ನಂತರ ತನ್ನ ಗಂಡ ಅಮ್ಮನ ಮನೆಯಲ್ಲಿ ಇರುವುದು ತಿಳಿಯುತ್ತದೆ.

    ಇದನ್ನೂ ಓದಿ:  ಗಂಡನಿಗೆ ಡಿವೋರ್ಸ್​ ನೀಡಿ ಮಗನನ್ನೇ ವರಿಸಿದ ಮಹಿಳೆ: ಆಕೆಯ ಉತ್ತರ ಕೇಳಿದ್ರೆ ಶಾಕ್​ ಆಗ್ತೀರಾ!

    ನೇರವಾಗಿ ಅಮ್ಮನ ಮನೆಗೆ ಬಂದು ಗಂಡನನ್ನು ಕೊಡುವಂತೆ ಹೇಳಿದ್ದಾಳೆ. ಅದಾಗಲೇ ತಾವು ಆತನನ್ನು ಮದುವೆಯಾಗಿದ್ದು, ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾಳೆ ಅಮ್ಮ. ಇದಕ್ಕಾಗಿ ಅಮ್ಮ- ಮಗಳ ನಡುವೆ ಭಾರಿ ರಂಪಾಟ ಶುರುವಾಗಿದೆ. ಇಬ್ಬರೂ ಅವನು ತನಗೆ ಬೇಕು ಎಂದು ಜಗಳ ಶುರುಮಾಡಿದ್ದಾರೆ. ಮಗಳ ವಿರುದ್ಧ ಅಮ್ಮ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ಇದೀಗ ಪೊಲೀಸರು ಕೇಸು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

    ಅಷ್ಟಕ್ಕೂ ವ್ಯಾಚೆಸ್ಲವ್‌ ಸ್ಟೋರಿಯೂ ವಿಚಿತ್ರವಾಗಿದೆ. ತನ್ನ ಮಾಲೀಕ ಸಂಬಳ ನೀಡಲಿಲ್ಲ ಎಂದು ಅವನನ್ನು ಕೊಲೆ ಮಾಡಿ ಜೈಲು ಸೇರಿದ್ದ ಈತ. ನಂತರ ಬಿಡುಗಡೆ ಸಮಯದಲ್ಲಿ ತನಗೆ ಮದುವೆಯಾಗಲು ಹುಡುಗಿ ಬೇಕು ಎಂದು ಪ್ರಕಟಣೆ ಕೊಟ್ಟಿದ್ದ. ಇದನ್ನು ನೋಡಿ ಎಲಿನಾ ಅವನನ್ನು ಮದುವೆಯಾಗಿದ್ದಳು. ನಂತರ ವಿಚ್ಛೇದನ ನೀಡಿದಳು. (ಏಜೆನ್ಸೀಸ್‌)

    ಯುವತಿಯ ಮಾತು ಕೇಳಿ ಬೆತ್ತಲಾದ- ಮುಂದೆ ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts