More

    12 ಪುರುಷರನ್ನು ವಿವಾಹವಾಗಿ ಕೈಕೊಟ್ಟ ಚಾಲಾಕಿ ಮಹಿಳೆ; ದೂರುಗಳನ್ನು ಕಂಡು ದಂಗಾದ ಪೊಲೀಸರು

    ಜಮ್ಮು ಮತ್ತು ಕಾಶ್ಮೀರ: 12ಕ್ಕೂ ಅಧಿಕ ಪುರುಷರನ್ನು ಮದುವೆಯಾದ ಚಾಲಾಕಿ ಮಹಿಳೆ, ಅವರಿಂದ ಅಪಾರ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ, ಸ್ಥಳದಿಂದ ಪಲಾಯನ ಮಾಡಿರುವ ಘಟನೆ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಕೇಂದ್ರಗಳಾಗಲಿ; ತಾಪಂ ಇಒ ಮಹಾಂತಗೌಡ ಪಾಟೀಲ್

    30 ವರ್ಷದ ಮಹಿಳೆಯನ್ನು ಶಾಹೀನ್ ಅಖ್ತರ್ ಎಂದು ಗುರುತಿಸಲಾಗಿದ್ದು, ಕಳೆದ ವಾರ ರಾಜೌರಿಯ ನೌಶೆರಾ ಪಟ್ಟಣದಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದರು. ಮದುವೆಯ ನಂತರ ಶಾಹೀನ್ ತನ್ನನ್ನು ವಂಚಿಸುತ್ತಿದ್ದಳು ಎಂದು ಆರೋಪಿಸಿ ಆಕೆಯ ಪತಿ ಮೊಹಮ್ಮದ್ ಅಲ್ತಾಫ್ ಮಾರ್ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಜುಲೈ 5 ರಂದು ಆರೋಪಿ ಶಾಹೀನ್ ವಿರುದ್ಧ ಹಲವಾರು ದೂರು ಕೇಳಿಬಂದ ಬೆನ್ನಲ್ಲೇ ಪೊಲೀಸರು ಗಾಬರಿಗೊಂಡಿದ್ದಾರೆ.

    ಶಾಹೀನ್ ವಿರುದ್ಧ ಸರಣಿ ದೂರುಗಳು ಒಂದೇ ವಿಷಯವನ್ನು ಹೇಳುತ್ತಿರುವುದು ಪೊಲೀಸರ ಗಮನಕ್ಕೆ ಬಂದದ್ದೇ ತಡ! ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಬದ್ಗಾಮ್‌ನ ಸಂತ್ರಸ್ತರಲ್ಲಿ ಒಬ್ಬರಾದ ಮೊಹಮ್ಮದ್ ಅಲ್ತಾಫ್ ಮಿರ್ ಎಂಬುವವರು ನೀಡಿರುವ ದೂರು ಹೀಗಿದೆ, “ವಧುವನ್ನು ಮಧ್ಯವರ್ತಿಯೊಬ್ಬರು ತನಗೆ ಪರಿಚಯಿಸಿದ್ದರು. ತದನಂತರ ನಾವು ಮದುವೆಯಾದೆವು ಮತ್ತು ನಾಲ್ಕು ತಿಂಗಳ ಕಾಲ ಒಟ್ಟಿಗೆ ಜೀವನ ಮಾಡಿದೆವು. ಬಳಿಕ ಮನೆಯಲ್ಲಿದ್ದ ನಗದು ಮತ್ತು ಚಿನ್ನದೊಂದಿಗೆ ಆಕೆ ಪರಾರಿಯಾದಳು” ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ’72 ಗಂಟೆಯೊಳಗೆ ಭಾರತ ತೊರೆಯಬೇಕು, ಇಲ್ಲದಿದ್ದರೆ…’ ಪಾಕ್‌ನ ಸೀಮಾ ಹೈದರ್​​​ಗೆ ಹಿಂದೂ ಸಂಘಟನೆಯಿಂದ ಎಚ್ಚರಿಕೆ

    ಮಿರ್ ಅವರ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 120 ಬಿ ಅಡಿಯಲ್ಲಿ ಮಧ್ಯ ಕಾಶ್ಮೀರದ ಬುದ್ಗಾಮ್‌ನಲ್ಲಿ ಶಾಹೀನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜುಲೈ 14 ರಂದು ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆದ್ರೆ, ಅದೇ ದಿನವೇ ಶಾಹೀನ್ ನಿರೀಕ್ಷಣಾ ಜಾಮೀನು ಕೋರುತ್ತಿರುವುದನ್ನು ಕಂಡ ಆಕೆಯ ಪತಿಯರ ಗುಂಪು ಬುದ್ಗಾಮ್ ಕೋರ್ಟ್ ಸಂಕೀರ್ಣದಲ್ಲಿ ಜಮಾಯಿಸಿ, ಜಾಮೀನು ಕೊಡದಂತೆ ವಿರೋಧ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ’72 ಗಂಟೆಯೊಳಗೆ ಭಾರತ ತೊರೆಯಬೇಕು, ಇಲ್ಲದಿದ್ದರೆ…’ ಪಾಕ್‌ನ ಸೀಮಾ ಹೈದರ್​​​ಗೆ ಹಿಂದೂ ಸಂಘಟನೆಯಿಂದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts