More

    ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಕೇಂದ್ರಗಳಾಗಲಿ; ತಾಪಂ ಇಒ ಮಹಾಂತಗೌಡ ಪಾಟೀಲ್

    ಗಂಗಾವತಿ: ಮಕ್ಕಳ ಕಲಿಕೆಗೆ ಗ್ರಂಥಾಲಯಗಳು ಪೂರಕವಾಗಿದ್ದು, ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಕೇಂದ್ರಗಳಾಗಬೇಕಿದೆ ಎಂದು ತಾಪಂ ಇಒ ಮಹಾಂತಗೌಡ ಪಾಟೀಲ್ ಹೇಳಿದರು.

    ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಗ್ರಂಥಾಲಯ ಇಲಾಖೆ ಮತ್ತು ಅಬ್ದುಲ್ ನಜೀರ್ ಸಾಬ್ ಸಂಸ್ಥೆ ಸೋಮವಾರ ಆಯೋಜಿಸಿದ್ದ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಎಲ್ಲ ಲೈಬ್ರರಿಗಳು ಮಾದರಿ ಗ್ರಂಥಾಲಯಗಳಾಗಬೇಕು. ಗ್ರಂಥಾಲಯ ಮೇಲ್ವಿಚಾರಕರು ಸಮಯ, ಶಿಸ್ತು ಪಾಲನೆ, ಮಕ್ಕಳ ಆಕರ್ಷಣೆಗೆ ತಕ್ಕಂತೆ ಪುಸ್ತಕ ಜೋಡಿಸುವುದು, ನಿತ್ಯ ಮಕ್ಕಳ ನೋಂದಣಿ ಮಾಡುವುದು, ಲೈಬ್ರರಿಯಲ್ಲಿ ಭಯಮುಕ್ತ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕಿದೆ ಎಂದರು.

    ಪುಸ್ತಕಗಳ ಪರಿಚಯ, ಗಟ್ಟಿ ಓದು ಅಭಿಯಾನ, ಸಣ್ಣಕಥೆಗಳ ಓದುವ ಹವ್ಯಾಸ, ಕ್ರೀಡೆಗಳನ್ನು ಆಯೋಜಿಸಿ ಮಕ್ಕಳನ್ನು ಓದಿನತ್ತ ಗಮನ ಸೆಳೆಯುವುದರ ಜತೆಗೆ ಕಂಪ್ಯೂಟರ್ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವ ಜವಾಬ್ದಾರಿ ಗ್ರಂಥಾಲಯ ಮೇಲ್ವಿಚಾರಕ ಮೇಲಿದೆ ಎಂದು ತಿಳಿಸಿದರು.

    ತಾಪಂ ತರಬೇತಿ ವಿಷಯ ನಿರ್ವಾಹಕ ಶಿವಮೂರ್ತಯ್ಯ, ಗಂಗಾವತಿ ಶಾಖಾ ಗ್ರಂಥಾಲಯ ಸಹ ಮೇಲ್ವಿಚಾರಕಿ ಎಂ.ಕವಿತಾ ಮುರಾಳ್, ಎಸ್‌ಐಆರ್‌ಡಿ ತರಬೇತಿ ಸಂಯೋಜಕ ಶೇಖರಪ್ಪ ಸಿಂದೋಗಿ ಸೇರಿ ತ್ರಿವಳಿ ತಾಲೂಕಿನ ಮೇಲ್ವಿಚಾರಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts