More

    ಚಿರತೆ ದಾಳಿಗೆ ಮೂರನೇ ಬಲಿ; ಮನೆ ಬಳಿಯೇ ಮಹಿಳೆಯ ಸಾವು..

    ಮೈಸೂರು: ರಾಜ್ಯದಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವ, ಸಾಕುಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಚಿರತೆ ದಾಳಿಗೆ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.

    ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಈ ಘಟನೆ ನಡೆದಿದೆ. ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮ (60) ಚಿರತೆ ದಾಳಿಯಿಂದಾಗಿ ಸಾವಿಗೀಡಾದ ಮಹಿಳೆ. ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಈಗಾಗಲೇ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದು, ಇದು ಮೂರನೇ ಸಾವು.

    ಸಿದ್ದಮ್ಮ ಮನೆಯ ಆಚೆಗೆ ಇದ್ದ ಸೌದೆ ತೆಗೆದುಕೊಳ್ಳಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ. ಸಿದ್ದಮ್ಮ ಮೇಲೆರಗಿದ ಚಿರತೆ ಆಕೆಯನ್ನು ಒಂದಷ್ಟು ದೂರ ಎಳೆದೊಯ್ದಿದ್ದು, ಅದನ್ನು ನೋಡಿದ ಗ್ರಾಮಸ್ಥರು ಜೋರಾಗಿ ಕಿರುಚಾಡಿದ್ದರಿಂದ ಚಿರತೆ ಆಕೆಯ ದೇಹವನ್ನು ಬಿಟ್ಟು ಓಡಿಹೋಗಿದೆ. ಸಿದ್ದಮ್ಮ ಸಾವಿಗೀಡಾದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದು ಗಂಟೆಗಳು ಕಳೆದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

    ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ‘ಓಂ’ ಇದ್ದ ಹಾಳೆಯಲ್ಲಿ ಶುಭಾಶಯ ಬರೆಯಲು ಒಪ್ಪದ ತನ್ವೀರ್ ಸೇಠ್!; ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ ತಕರಾರು

    ‘ಸತ್ತು ಹೋದವ’ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ!; ಆಗಿದ್ದಾದರೂ ಏನು, ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts