More

    ರೈಲ್ವೇ ಇಲಾಖೆಯ ನಕಲಿ ನೇಮಕಾತಿ ಪತ್ರ ನೀಡಿ ವಂಚನೆ: ಕೆಲಸಕ್ಕೆ ಹಾಜರಾದವರಿಗೆ ನಿಮ್ಮನ್ನು ನೇಮಕವೇ ಮಾಡಿಲ್ಲ ಅಂದ್ರು ಅಧಿಕಾರಿಗಳು

    ಥಾಣೆ: ರೈಲ್ವೇ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ ಎಂದು 60 ಲಕ್ಷ ರೂ.ಗಳನ್ನು ಪಡೆದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮಹಿಳೆಯೊಬ್ಬಳು ರೈಲ್ವೇ ಇಲಾಖೆಯ ನಕಲಿ ಪತ್ರ ತಯಾರಿಸಿ, ಅದರಂತೆ 12 ಮಂದಿಗೆ ಕೆಲಸ ಎಂದು ನೇಮಕಾತಿ ಪತ್ರ ಪಡೆದು ಕೆಲಸಕ್ಕೆ ಹಾಜರಾದವರಿಗೂ ನಿಜಕ್ಕೂ ಶಾಕ್​ ಆಗಿತ್ತು. ಏಕೆಂದರೆ ಇವರು ಕೆಲಸಕ್ಕೆ ನೇಮಕಾತಿಯೇ ಆಗಿರಲಿಲ್ಲ. ಇದೊಂದು ನಕಲಿ ಪತ್ರ ಎಂದು ಅಧಿಕಾರಿಗಳು ತಿಳಿದ ಮೇಲೆಯೇ ಮಹಿಳೆಯ ಕೃತ್ಯ ಬಯಲಾಗಿದೆ.

    ನಂತರ ಕೆಲಸ ಕೊಡಿಸುವುದಾಗಿ 60 ಲಕ್ಷ ರೂ. ವಂಚಿಸಿದ್ದ ಮಹಿಳೆಯ ವಿರುದ್ಧ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ.

    12ಕ್ಕೂ ಹೆಚ್ಚು ಮಂದಿಗೆ ರೈಲ್ವೇ ಇಲಾಖೆಯ ಹೆಸರಲ್ಲಿ ಕೆಲಸ ಆಗಿದೆ ಎಂದು ಅಪಾಯಿಂಟ್​ ಮೆಂಟ್​ ಲೆಟರ್​ ಕೂಡ ನೀಡಿದ್ದಾಳೆ. ನಿಜಕ್ಕೂ ನಂಬಿ ರೈಲ್ವೆ ಕಚೇರಿಗೆ ಹೋದಾಗ ಮಹಿಳೆಯ ಬಣ್ಣ ಬಯಲಾಗಿದೆ.

    ನಕಲಿ ಸೀಲ್​ ಬಳಸಿ, ನಿಮಗೆ ಕೆಲಸವಾಗಿದೆ ಎಂದು ಜಲಗಾಂವ್​ ಜಿಲ್ಲೆಯ ಸುಶೀಲಾ ಡಿಯೋರೆ ಎಂಬ ಮಹಿಳೆ ನಂಬಿಸಿದ್ದಳು. ಕೊನೆಗೂ ಈಕೆಯ ಕೃತ್ಯ ಬಯಲಾಗಿದೆ.

    ಪ್ರಾರಂಭದಲ್ಲಿ ಒಂದಿಬ್ಬರು ವಂಚನೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಬಳಿಕ 12 ಮಂದಿಗೆ ವಂಚಿಸಿರುವುದು ಪತ್ತೆಯಾಗಿದೆ. ಈ ಬಳಿಕ ಮಹಿಳೆಯನ್ನು ಭೇಟಿ ಮಾಡಿ ಹಣ ವಾಪಸ್​ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಆಕೆ ಕೊಟ್ಟ ಚೆಕ್​ ಬೌನ್ಸ್​ ಆಗಿದ್ದರಿಂದ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts