More

    ಒಂದೇ ದಿನ ಐದು ಬಾರಿ ಹಾರ್ಟ್ ಅಟ್ಯಾಕ್! ವೈದ್ಯೋ ನಾರಾಯಣೋ ಹರಿಃ…

    ಮುಂಬೈ: ನವೀ ಮುಂಬೈನ ಅಪೊಲೊ ಆಸ್ಪತ್ರೆಯ ವೈದ್ಯರು ತುರ್ತು ಕೋಣೆಯಲ್ಲಿ (ಇಆರ್) ಐದು ಗಂಭೀರ ಹಾರ್ಟ್ ಅಟ್ಯಾಕ್ ಗೆ ತುತ್ತಾಗಿದ್ದ 61 ವರ್ಷದ ಮಹಿಳೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. “ಅವರನ್ನು ಕಾರ್ಡಿಯೋ-ಪಲ್ಮನರಿ ರಿವೈವಲ್ ಅಥವಾ ಸಿಪಿಆರ್ ಮೂಲಕ ಕಾಪಾಡಲಾಯಿತು. ನಂತರ ಅವರನ್ನು ವೆಂಟಿಲೇಟರ್ ಮೂಲಕ ಎಮರ್ಜನ್ಸಿ ರೂಮ್ ಗೆ ಸೇರಿಸಲಾಗಿದ್ದು ಹೃದಯ ಬಡಿತವನ್ನು ನಿಯಂತ್ರಿಸುವ ಇನೋಟ್ರೋಪ್ಗಳು ಮತ್ತು ಔಷಧಿಗಳನ್ನು ನೀಡಲಾಯಿತು” ಎಂದು ವೈದ್ಯರು ತಿಳಿಸಿದ್ದಾರೆ.

    ಆಕೆಯ ಹೃದಯ ಮತ್ತು ಉಸಿರಾಟವನ್ನು ಸ್ಥಿರಗೊಳಿಸಿದ ನಂತರ ಆಂಜಿಯೋಗ್ರಾಮ್ ನಡೆಸಲಾಯಿತು. ಇದು ಮಹಿಳೆಯ ಹೃದಯದ ಎರಡು ನಿರ್ಣಾಯಕ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ದೃಢಪಡಿಸಿತು. ಸಂಪೂರ್ಣ ಮೌಲ್ಯಮಾಪನ ಮತ್ತು ಪರೀಕ್ಷೆಗಳು ಮಹಿಳೆಯ ಪರಿಧಮನಿಯ ಸ್ಟೆಂಟ್ನಲ್ಲಿ ಸಂಪೂರ್ಣ ಅಡಚಣೆಯೇ ಇಷ್ಟಕ್ಕೆಲ್ಲ ಕಾರಣ ಎಂದು ಪತ್ತೆಯಾಯಿತು. ಈ ಸ್ಥಿತಿಯನ್ನು ಸ್ಟೆಂಟ್ ಥ್ರಾಂಬೋಸಿಸ್ ಎಂದು ಕರೆಯಲಾಗುತ್ತದೆ.

    ಅಪೊಲೊ ಆಸ್ಪತ್ರೆಯ ಪ್ರಾದೇಶಿಕ ಸಿಇಒ (ಪಶ್ಚಿಮ ವಲಯ) ಸಂತೋಷ್ ಮರಾಠೆ, “ಸಮಯೋಚಿತ ಚಿಕಿತ್ಸೆ ಮತ್ತು ಆರೈಕೆ ಮಹಿಳೆಯನ್ನು ತ್ವರಿತವಾಗಿ ಕಾಪಾಡಲು ಸಹಾಯ ಮಾಡಿತು. ಇಆರ್ ನಲ್ಲಿ ಸತತ ಐದು ಹೃದಯಾಘಾತಗಳ ನಂತರವೂ ರೋಗಿಯನ್ನು ಕಾಪಾಡಿದ್ದು ನಂತರದ ಚಿಕಿತ್ಸೆ ಮತ್ತು ಚೇತರಿಕೆಯು ನಮ್ಮ ಉನ್ನತ ಅರ್ಹ ಇಆರ್, ಹೃದಯ ಶಸ್ತ್ರಚಿಕಿತ್ಸೆ, ನರ್ಸಿಂಗ್ ಮತ್ತು ಅರೆವೈದ್ಯಕೀಯ ತಂಡಗಳ ಮೂಲಕ ನಮ್ಮ ಅತ್ಯಾಧುನಿಕ ಇಆರ್ ನಲ್ಲಿ ನಾವು ಒದಗಿಸುವ ಹೃದಯ ಆರೈಕೆ ಮತ್ತು ಪುನರ್ವಸತಿಯ ಅತ್ಯುನ್ನತ ಮಾನದಂಡಗಳಿಗೆ ಸಾಕ್ಷಿಯಾಗಿದೆ’’ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts