More

    ಕರೊನಾ ಲಸಿಕೆ ಪಡೆದ ಎರಡು ಗಂಟೆಯಲ್ಲಿ ವೃದ್ಧೆ ಸಾವು!

    ರಾಮನಗರ: ಕರೊನಾ ಲಸಿಕೆ ಪಡೆದು ಎರಡು ಗಂಟೆಗಳಲ್ಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕನಕಪುರದಲ್ಲಿ ನಡೆದಿದೆ. ರಾಜ್ಯದಲ್ಲಿ ಕರೊನಾ ಲಸಿಕೆ ನಂತರ ಸಾವನ್ನಪ್ಪಿದ ಆರನೇ ವ್ಯಕ್ತಿ ಇವರಾಗಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಾರಲವಾಡಿ ಹೋಬಳಿಯ ಪಡುವನಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ 73 ವರ್ಷದ ವೃದ್ಧೆ ಮಂಗಳವಾರದ ಬೆಳಗ್ಗೆ 11.15ರ ಸಮಯಕ್ಕೆ ಕೋವಿಶೀಲ್ಡ್​ ಲಸಿಕೆ ಪಡೆದಿದ್ದಾಳೆ. ಲಸಿಕೆ ಪಡೆದ ಅರ್ಧ ಗಂಟೆಯ ಕಾಲ ಆಕೆಯನ್ನು ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಿಕೊಳ್ಳಲಾಗಿತ್ತು. ಅದಾದ ನಂತರ ಆಕೆ ಮನೆಗೆ ಹೋಗಿದ್ದಾಳೆ. ಮಧ್ಯಾಹ್ನ 1.15ಕ್ಕೆ ಆಕೆ ಅಸುನೀಗಿರುವುದಾಗಿ ಹೇಳಲಾಗಿದೆ.

    ವೃದ್ಧೆ ವೀಕ್ಷಣಾ ಅವಧಿಯಲ್ಲಿದ್ದಾಗ, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ನಾನು ಕುಟುಂಬವನ್ನು ಭೇಟಿ ಮಾಡಿದ್ದೇನೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದುಬರಲಿದೆ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ವ್ಯಾಕ್ಸಿನೇಷನ್‌ಗಳನ್ನು ನಡೆಸಿದ್ದೇವೆ ಈವರೆಗೆ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿಯ ಪ್ರಕಾರ ಜನವರಿ 16ರಿಂದ ಈವರೆಗೆ ರಾಜ್ಯದಲ್ಲಿ ಕರೊನಾ ಲಸಿಕೆ ಪಡೆದವರ ಪೈಕಿ 21 ಜನರಿಗೆ ಗಂಭೀರ ಪರಿಣಾಮಗಳು ಉಂಟಾಗಿವೆ. ಅದರಲ್ಲಿ ಇಬ್ಬರ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪಶ್ಚಿಮ ಘಟ್ಟದಲ್ಲೇಕೆ ಮಳೆ ಹೆಚ್ಚು? ಕಾಡಿನಿಂದಾಗಿ ಮಳೆಯೋ? ಮಳೆಯಿಂದಾಗಿ ಕಾಡೋ?

    ಟಿಂಎಂಸಿ ಕೊಟ್ಟ ಶಾಕ್​ಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೇ ತೊರೆದ ಬಿಜೆಪಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts