More

    ಕೆಲಸ ಕಳೆದುಕೊಂಡ ಅಪ್ಪನಿಗಾಗಿ ಆಟೋ ಡ್ರೈವರ್​ ಆದ ಮಗಳು!

    ಶ್ರೀನಗರ: ತೊಟ್ಟಿಲು ತೂಗುವ ಕೈ ಲೋಕವನ್ನೇ ಆಳಬಹುದು ಎನ್ನುತ್ತಾರೆ. ಪೂರ್ತಿ ಕುಟುಂಬದ ಜವಾಬ್ದಾರಿ ಹೊರುವ ಶಕ್ತಿ ಹೆಣ್ಣಿಗಿದ್ದೇ ಇದೆ. ಕೆಲಸ ಕಳೆದುಕೊಂಡ ಅಪ್ಪನನ್ನು ಕಂಡು ತಾನೇ ಆಟೋ ಡ್ರೈವರ್ ಸೀಟಲ್ಲಿ ಕುಳಿತು ಜೀವನದ ಬಂಡಿ ಸಾಗಿಸುತ್ತಿರುವ ಯುವತಿಯ ಕಥೆ ಇದು.

    ಇದನ್ನೂ ಓದಿ: ಅತಿದೊಡ್ಡ ಮಾರುಕಟ್ಟೆಯಿಂದ ಹೊರಬಿತ್ತು ಹಕ್ಕಿಜ್ವರದ ರಿಪೋರ್ಟ್‌- ಚಿಕನ್‌ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌

    ಜಮ್ಮು ಕಾಶ್ಮೀರದಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಬಂಜೀತ್​ ಕೌರ್​ (21) ತಂದೆ ಶಾಲೆಯ ಬಸ್ಸೊಂದಕ್ಕೆ ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಆದರೆ ಕರೊನಾ ಲಾಕ್​ಡೌನ್​ ಬಂದ ನಂತರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆಟೋ ತೆಗೆದುಕೊಂಡು ಅದರ ಚಾಲಕನಾಗಿ ಕೆಲಸ ಮಾಡಲಾರಂಭಿಸಿದನಾದರೂ ಅದು ಆತನಿಂದ ಸಾಧ್ಯವಾಗಲಿಲ್ಲವಂತೆ. ಇದನ್ನೆಲ್ಲ ನೋಡಿದ ಬಂಜೀತ್​ ತಾನು ಆಟೋ ಕಲಿಯುವ ಹಠ ಕಟ್ಟಿ, ಅಪ್ಪನ ಸಹಾಯದಿಂದ ಆಟೋ ಓಡಿಸುವುದು ಕಲಿತಿದ್ದಾಳೆ. ನಂತರ ಅದನ್ನೇ ತನ್ನ ಕೆಲಸವನ್ನಾಗಿಸಿಕೊಂಡು ಜೀವನ ಆರಂಭಿಸಿದ್ದಾಳೆ. ಇದೀಗ ಪೂರ್ತಿ ಕುಟುಂಬದ ಆರ್ಥಿಕತೆಯನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾಳಂತೆ.

    ಇದನ್ನೂ ಓದಿ: ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ

    ನಾವು ಹೆಣ್ಣು ಮಕ್ಕಳು ಏನನ್ನಾದರೂ ಮಾಡಬಲ್ಲವೆ. ಅದರೆ ನಮ್ಮ ಗಡಿಯನ್ನು ದಾಟಿ ಯೋಚನೆ ಮಾಡುವ ಸಾಮರ್ಥ್ಯ ನಮಗಿರಬೇಕಷ್ಟೇ ಎನ್ನುತ್ತಾರೆ ಬಂಜೀತ್​. ನನ್ನ ಮಗಳು ಆಟೋ ಕಲಿಸಿಕೊಡಿ ಎಂದಾಗ ಮುಂದೆ ಆಕೆಯೇ ನಮ್ಮ ಕುಟುಂಬಕ್ಕೆ ಆಧಾರವಾಗುತ್ತಾಳೆ ಎನ್ನುವ ನಂಬಿಕೆ ನನಗಿರಲಿಲ್ಲ. ಆದರೆ ಈಗ ಅವಳನ್ನು ನೋಡಿದರೆ ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಆಕೆಯ ತಂದೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ ಪೂರ್ತಿ ರಾಜ್ಯವೇ ಬಂಜೀತ್​ಳನ್ನು ಹೆಮ್ಮೆಯಿಂದ ನೋಡಲಾರಂಭಿಸಿದೆ. (ಏಜೆನ್ಸೀಸ್​)

    ಸ್ಟಾರ್ ಹೋಟೆಲ್​ನಲ್ಲಿ ಕಲರ್-ಕಲರ್ ಕಾಗೆ ಹಾರಿಸೋದೇ ಈತನ ಟ್ಯಾಲೆಂಟ್‌! ಹಣಕ್ಕಾಗಿ ಹೀಗಾ ಮಾಡೋದು?

    ಚಿಂತೆ, ಒತ್ತಡದಲ್ಲಿದ್ದರೆ ಕರೊನಾ ಲಸಿಕೆಯೂ ಕೆಲಸ ಮಾಡುವುದಿಲ್ಲ! ವಿಜ್ಞಾನಿಗಳ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts