More

    ಯಂತ್ರಕ್ಕಿಂತ ವೇಗವಾಗಿ ಹಣ ಎಣಿಸುವ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಕಕ್ಕಾಬಿಕ್ಕಿ

    ನವದೆಹಲಿ: ಹಿಂದಿನ ಕಾಲದಲ್ಲಿ ಬ್ಯಾಂಕಿನಲ್ಲಿ ಬಹುತೇಕ ಎಲ್ಲ ಕೆಲಸವನ್ನೂ ಕೈಯಾರೆ ಮಾಡಲಾಗುತ್ತಿತ್ತು. ಯಂತ್ರವನ್ನೇ ಬಳಸುತ್ತಿರಲಿಲ್ಲ. ಹಣವನ್ನು ಎಣಿಕೆ ಮಾಡುವುದರಿಂದ ಹಿಡಿದು ಗ್ರಾಹಕರ ಡೇಟಾವನ್ನು ಇಟ್ಟುಕೊಳ್ಳುವವರೆಗೆ, ಪ್ರತಿಯೊಂದು ಕೆಲಸವನ್ನು ಬ್ಯಾಂಕ್ ಉದ್ಯೋಗಿಗಳು ಕೈಯಾರೆ ಮಾಡುತ್ತಿದ್ದರು. ಕಾಲ ಬದಲಾದಂತೆ ಕಾರ್ಮಿಕರ ಕೆಲಸವನ್ನು ಸುಲಭಗೊಳಿಸಲು ಯಂತ್ರಗಳು ಬಂದಿವೆ. ಹೆಚ್ಚಿನ ಹಣ ಎಣಿಸಲು ಯಂತ್ರಗಳನ್ನು ಬಳಸಲಾಗುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಗತಕಾಲದ ಝಲಕ್ ಕಾಣಬಹುದಾಗಿದೆ.

    ಹೌದು, ಈ ವಿಡಿಯೋ ಚೀನಾದ್ದು ಎನ್ನಲಾಗಿದೆ. ಮಹಿಳೆ ಹಣವನ್ನು ಯಂತ್ರದಂತೆ ಎಣಿಸುತ್ತಿದ್ದಾಳೆ. ಕೆಲವೇ ಸೆಕೆಂಡುಗಳಲ್ಲಿ ನೋಟುಗಳ ಕಟ್ಟುಗಳನ್ನು ಎಣಿಸಿ ಮೌಲ್ಯವನ್ನು ಹೇಳುತ್ತಿದ್ದಾರೆ. ವಿಡಿಯೋ ನೋಡಿ ಇವರು ಮನುಷ್ಯನೋ ಅಥವಾ ಯಂತ್ರವೋ ಎಂದು ಬೆಚ್ಚಿ ಬೀಳುವುದಂತೂ ನಿಜ. ಏಕೆಂದರೆ ಸಾಮಾನ್ಯವಾಗಿ ಹಣವನ್ನು ಅಷ್ಟು ಬೇಗ ಎಣಿಸಲು ಸಾಧ್ಯವಿಲ್ಲ. ಆದರೆ ಆಕೆ ಅದನ್ನು ತನ್ನ ಅರ್ಹತೆಯ ಮೇಲೆ ಮಾತ್ರ ಮಾಡಿದ್ದಾಳೆ.

    ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಬಳಕೆದಾರರು ‘ಹ್ಯೂಮನ್ ಮನಿ ಕೌಂಟರ್’ ಎಂದು ಬರೆದಿದ್ದಾರೆ. ಈ 15 ಸೆಕೆಂಡುಗಳ ವೀಡಿಯೊವನ್ನು 2.3 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ, ಅಂದರೆ 23 ಲಕ್ಷ ಬಾರಿ ವೀಕ್ಷಿಸಲಾಗಿದೆ. ಅಂತೆಯೇ ಸಾವಿರಾರು ಮಂದಿ ಲೈಕ್ ಕೂಡ ಮಾಡಿದ್ದಾರೆ.

    ವಿಡಿಯೊವನ್ನು ನೋಡಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಈ ಯುವತಿ ಎಷ್ಟು ವೇಗವಾಗಿ ಹಣ ಎಣಿಸುತ್ತಿದ್ದಾಳೆ, ನನಗೆ ನಂಬಲಾಗುತ್ತಿಲ್ಲ, ಎಷ್ಟು ವರ್ಷ ಆಕೆಗೆ ಹಣ ಎಣಿಸುವ ಅನುಭವವಿದೆ? ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

    ಹಾಸನದ ಕಾಡಿನಲ್ಲಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಗಜಪಡೆ; ಅಭಿಮನ್ಯು & ಟೀಮ್ ನೋಡಲು ಬರುತ್ತಿರುವ ಜನರ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts