More

    2000 ರೂ.ನೋಟಿನ ಬಗ್ಗೆ ಬಿಗ್​​​ ಅಪ್​ಡೇಟ್ ನೀಡಿದ ಆರ್‌ಬಿಐ; ಇನ್ನೂ ಜನರ ಬಳಿಯಿರುವ ನೋಟುಗಳೆಷ್ಟು ಗೊತ್ತಾ?

    ಬೆಂಗಳೂರು: ಚಲಾವಣೆಯಿಂದ ಹೊರಗುಳಿದಿರುವ 2000 ರೂಪಾಯಿ ನೋಟುಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಮಾಹಿತಿ ನೀಡಿದೆ. 8 ತಿಂಗಳ ಹಿಂದೆ 2000 ರೂಪಾಯಿ ನೋಟುಗಳ ಅಮಾನ್ಯೀಕರಣದ ನಂತರವೂ 100% ನೋಟುಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಜನರು ಇನ್ನೂ 9330 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಹೊಂದಿದ್ದಾರೆ. ಹೌದು, ಆರ್‌ಬಿಐ ಒಟ್ಟು 2000 ರೂ.ಗಳ ನೋಟುಗಳಲ್ಲಿ ಶೇ.97.38ರಷ್ಟು ಮಾತ್ರ ಪಡೆದುಕೊಂಡಿದೆ.

    ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ ನೋಟುಗಳ ಮೇಲೆ ದೊಡ್ಡ ಘೋಷಣೆಯನ್ನು ಮಾಡಿ, ಅವುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿತು. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಒಟ್ಟು ರೂ 3.56 ಲಕ್ಷ ಕೋಟಿ ಮೌಲ್ಯದ ರೂ 2000 ನೋಟುಗಳು ಇದ್ದವು. ಅದು 29 ಡಿಸೆಂಬರ್ 2023 ರ ವೇಳೆಗೆ ರೂ 9,330 ಕೋಟಿಗೆ ಇಳಿದಿದೆ. ಡಿಸೆಂಬರ್ ಅಂತ್ಯದ ವೇಳೆಗೆ, ಅಂತಹ ಗುಲಾಬಿ ನೋಟುಗಳಲ್ಲಿ ಒಟ್ಟು 2.62 ಶೇಕಡ ಇನ್ನೂ ಚಲಾವಣೆಯಲ್ಲಿದೆ. ಈ ಅಂಕಿಅಂಶಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ.

    19 ಸ್ಥಳಗಳಲ್ಲಿ ಬದಲಾಯಿಸಿಕೊಳ್ಳಬಹುದು
    ಗ್ರಾಹಕರ ಅನುಕೂಲಕ್ಕಾಗಿ, ರಿಸರ್ವ್ ಬ್ಯಾಂಕ್ ಅಕ್ಟೋಬರ್ 8, 2023 ರವರೆಗೆ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ವಿಸ್ತರಿಸಿದೆ. ಇದರ ನಂತರವೂ ನೀವು ನೋಟು ಬದಲಾಯಿಸಲು ವಿಫಲವಾದರೆ ಚಿಂತಿಸಬೇಕಾಗಿಲ್ಲ. ರಿಸರ್ವ್ ಬ್ಯಾಂಕ್‌ನ 19 ಕಚೇರಿಗಳಿಗೆ ಹೋಗಿ ನೀವು ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

    ಬೆಂಗಳೂರು, ನವದೆಹಲಿ, ಪಾಟ್ನಾ, ಲಕ್ನೋ, ಮುಂಬೈ, ಭೋಪಾಲ್, ಜೈಪುರ, ಚಂಡೀಗಢ, ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ, ಚೆನ್ನೈ, ಗುವಾಹಟಿ, ಹೈದರಾಬಾದ್, ಜಮ್ಮು, ಕಾನ್ಪುರ, ಕೋಲ್ಕತ್ತಾ, ತಿರುವನಂತಪುರಂ ಮತ್ತು ನಾಗ್ಪುರ್ ಕರೆನ್ಸಿ ವಿನಿಮಯ ಸೌಲಭ್ಯವನ್ನು ಒದಗಿಸುವ ಆರ್‌ಬಿಐ ಕಚೇರಿಗಳು. ಇದಲ್ಲದೇ ನಿಮ್ಮ ಮನೆಯ ಸಮೀಪದಲ್ಲಿರುವ ಯಾವುದೇ ಅಂಚೆ ಕಚೇರಿಗೆ ಹೋಗಿ ನೀವು ಅಂಚೆ ಮೂಲಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

    ಕ್ಲೀನ್ ನೋಟ್ ನೀತಿ 
    ಕ್ಲೀನ್ ನೋಟ್ ನೀತಿಯ ಅಡಿಯಲ್ಲಿ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಸ್ಥಗಿತಗೊಳಿಸಿದೆ. ಈ ನೋಟುಗಳನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಯಿತು, ಆಗ ಸರ್ಕಾರವು ಆಗಿನ 500 ಮತ್ತು 1000 ರೂ ನೋಟುಗಳನ್ನು ಅಮಾನ್ಯಗೊಳಿಸಲು ನಿರ್ಧರಿಸಿತು. ಇದಾದ ನಂತರ ಆರ್‌ಬಿಐ 2018-19ನೇ ಹಣಕಾಸು ವರ್ಷದಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು.

    ತಿರುಚಿರಾಪಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟಿಸಲಿರುವ ಮೋದಿ; ಕಟ್ಟಡದ ಕಲಾಕೃತಿಗಳಲ್ಲಿ ದೇಶದ ಪರಂಪರೆ ಗೋಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts