More

    ಬಸ್ಸನ್ನು ವೇಗವಾಗಿ ಓಡಿಸಿದ್ದಕ್ಕೆ ಬೆನ್ನುಮೂಳೆ ಮುರಿತಕ್ಕೆ ಒಳಗಾದ ಮಹಿಳೆ!

    ಪುಣೆ: ವನೌರಿಯ ಗಿರ್ಮೆ ಶಾಲೆಯ ಹತ್ತಿರ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿ ಸ್ಪೀಡ್ ಬ್ರೇಕರ್‌ ಬಳಿ ಅತಿವೇಗದಲ್ಲಿ ವಾಹನ ಚಲಾಯಿಸಿದ ಪಿಎಂಪಿಎಂಎಲ್ ಬಸ್ ಚಾಲಕನ ವಿರುದ್ಧ ವನೌರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭ ಹಿಂಭಾಗದ ಸೀಟ್​ನಲ್ಲಿ ಕುಳಿತುಕೊಂಡಿದ್ದ ಮಹಿಳೆ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.

    ಫೆಬ್ರವರಿ 16 ರಂದು ಮಧ್ಯಾಹ್ನ 3:30 ರ ಸುಮಾರಿಗೆ ಗಿರ್ಮೆ ಶಾಲೆಯ ಬಳಿ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ಅಕ್ಷಯ್ ದುಬೆ (32) ಎಂದು ಗುರುತಿಸಲಾಗಿದೆ.

    ಈತ ಅತಿವೇಗದಿಂದ ಬಂದು ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್) ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪ್ರಯಾಣಿಕ ಅಂಜುಮ್ ಮುನಾವರ್ ಸಿದ್ಧಿಕಿ (45) ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದರು. ಬಸ್ ಕೋಂಡ್ವಾದಿಂದ ಪುಣೆ ನಿಲ್ದಾಣಕ್ಕೆ ಹೋಗುತ್ತಿತ್ತು. ಈ ಸಂದರ್ಭ ದೂರುದಾರರು ತಮ್ಮ ಸಹೋದರಿ ಸಯಾರಾ (49) ಜತೆಗೆ ಬಸ್‌ನ ಹಿಂಭಾಗದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಚೀನಾದ ಜನ ಪ್ರಧಾನಿ ಮೋದಿಗೆ ಇಟ್ಟ ನಿಕ್​ನೇಮ್ ಏನು ಗೊತ್ತಾ?! 

    ದೂರುದಾರರ ಪ್ರಕಾರ, ಚಾಲಕ ಅತಿವೇಗವಾಗಿ ಚಾಲನೆ ಮಾಡುತ್ತಿದ್ದು, ಸ್ಪೀಡ್ ಬ್ರೇಕರ್ ಅನ್ನು ಹೊಡೆದಾಗ ಬಸ್ಸು ಜಿಗಿದಿದೆ. ಪರಿಣಾಮವು ಎಷ್ಟು ದೊಡ್ಡದಾಗಿದೆ ಎಂದರೆ ಅವಳು ಗಾಳಿಯಲ್ಲಿ ತೇಲಾಡಿದ್ದು ಪಕ್ಕದ ಸೀಟಿನಲ್ಲಿ ಧಡ್ಡನೆ ಬಿದ್ದರು.

    ಬೆನ್ನುಮೂಳೆ ಮುರಿತದ ಕಾರಣ ವೈದ್ಯರು ದೂರುದಾರರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದರಿಂದ ಶುಕ್ರವಾರ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಐಪಿಸಿ ಕಲಂ 338 ಮತ್ತು ಮೋಟಾರು ವಾಹನ ಕಾಯ್ದೆ ಕಲಂ 184,119/177 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts