More

    ಪರಸಂಗ ಹೊಂದಿದ್ದ ಮಹಿಳೆಗೆ ಪಂಚಾಯ್ತಿ ಕಟ್ಟೆ ಕೊಟ್ಟಿದ್ದು ಎಂಥ ಶಿಕ್ಷೆ?

    ನವದೆಹಲಿ: ವಿಚಿತ್ರವಾದ ಸನ್ನಿವೇಶವೊಂದರಲ್ಲಿ ಮಧ್ಯಪ್ರದೇಶದ ಝಬುವಾದ ಪಾರಾ ಪೊಲೀಸ್​ ಹೊರಠಾಣೆಯ ವ್ಯಾಪ್ತಿಗೆ ಬರುವ ರಣವಾಸ್​ ಗ್ರಾಮದ ಪಂಚಾಯ್ತಿ ಕಟ್ಟೆಯ ಸದಸ್ಯರು ಪರಸಂಗ ಹೊಂದಿದ್ದ ಮಹಿಳೆಗೆ ತನ್ನ ಪತಿಯನ್ನು ಹೊತ್ತುಕೊಂಡು ಹೋಗುವ ಶಿಕ್ಷೆ ವಿಧಿಸಿದೆ.

    ಪಂಚಾಯ್ತಿ ಕಟ್ಟೆಯ ನಿರ್ಣಯದಂತೆ ಆಕೆ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಗ್ರಾಮವನ್ನು ಒಂದು ಸುತ್ತು ಹಾಕುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದೀಗ ಇಂಥ ಅಮಾನವೀಯ ಶಿಕ್ಷೆ ನೀಡಿದ ಪಂಚಾಯ್ತಿ ಕಟ್ಟೆಯ ಸದಸ್ಯರು ಸೇರಿ ರಣವಾಸ್​ ಗ್ರಾಮದ ಒಟ್ಟು 7 ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಕುಖ್ಯಾತ ಬೈಕ್​ ಕಳ್ಳನ ಸೆರೆ, ಕದ್ದ ವಾಹನಗಳ ಮಾರಾಟ ವಿಧಾನ ಕೇಳಿದ್ರೆ ಶಾಕ್​ ಆಗ್ತೀರಿ

    ತನ್ನ ಪತ್ನಿ ಗ್ರಾಮದ ಮತ್ತೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಪತಿ ಪಂಚಾಯ್ತಿ ಕಟ್ಟೆಯಲ್ಲಿ ದೂರಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ಪಂಚಾಯ್ತಿದಾರರು ಆ ಮಹಿಳೆ ವಿರುದ್ಧದ ಆರೋಪ ಸಾಬೀತಾಗಿದೆ. ಆದ್ದರಿಂದ, ಪರಸಂಗ ಬಿಟ್ಟು ಪತಿಯೊಂದಿಗೆ ಬಾಳ್ವೆ ಮಾಡುವುದನ್ನು ಮುಂದುವರಿಸಬೇಕು. ಪರಸಂಗ ಹೊಂದಿದ್ದಕ್ಕಾಗಿ ಪತಿಯನ್ನು ಹೆಗಲ ಮೇಲೆ ಹೊತ್ತು ಗ್ರಾಮವನ್ನು ಒಂದು ಸುತ್ತು ಹಾಕಿ ಬರಬೇಕು ಎಂಬ ಹುಕುಂ ಅನ್ನು ಜಾರಿ ಮಾಡಿದ್ದರು.

    ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ತಿಂಗಳು ಕೂಡ ಇದೇ ಗ್ರಾಮದ ಪಂಚಾಯ್ತಿ ಕಟ್ಟೆ ಬೇರೊಬ್ಬ ಮಹಿಳೆಗೆ ಇದೇ ಬಗೆಯ ಶಿಕ್ಷೆ ವಿಧಿಸಿತ್ತು.

    ಆಗಸ್ಟ್​ 5ರಂದು ಅಯೋಧ್ಯೆ, ಜಮ್ಮು-ಕಾಶ್ಮಿರದಲ್ಲಿ ಉಗ್ರದಾಳಿಯ ಸಂಭವ; ಭದ್ರತೆ ಮತ್ತಷ್ಟು ಬಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts