More

    ಸಿಎಂಗೆ ಗೋ ಮಾಂಸ ಗಿಫ್ಟ್ ಮಾಡುವುದಾಗಿ ಸ್ಟೇಟಸ್ ಹಾಕಿದ್ದ ಮಹಿಳೆ ಅರೆಸ್ಟ್

    ದಿಸ್ಪುರ: ರಾಜ್ಯದ ಮುಖ್ಯಮಂತ್ರಿಗೆ ಗೋ ಮಾಂಸ ಗಿಫ್ಟ್ ಕೊಡುತ್ತೇನೆಂದು ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿದ್ದ ಮಹಿಳೆಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

    ಅಸ್ಸಾಂನ ನಲ್ಬಾರಿ ಜಿಲ್ಲೆಯ ಹಳ್ಳಿಯೊಂದರ ಮಹಿಳೆ ಈ ರೀತಿ ಸ್ಟೇಟಸ್ ಹಾಕಿದ್ದಳು. ಮೊದಲಿಗೆ ಸತ್ತು ಮಲಗಿದ್ದ ಗೋವಿನ ಫೋಟೋವನ್ನು ಹಾಕಿದ್ದ ಆಕೆ ನಂತರ ಮಾಂಸದ ಫೋಟೋ ಹಾಕಿ ಅದನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗಿಫ್ಟ್ ಮಾಡುವುದಾಗಿ ಬರೆದುಕೊಂಡಿದ್ದಳು. ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು.

    ಅಸ್ಸಾಂನಲ್ಲಿ ಗೋವುಗಳ ಅಕ್ರಮ ಸಾಗಣೆ ಮತ್ತು ಗೋಮಾಂಸ ಮಾರಾಟವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಾಡಿರುವ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಹಿಂದೂ, ಜೈನ, ಸಿಖ್ ಮತ್ತು ಇತರ ಸಮುದಾಯಗಳು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಅಥವಾ ಯಾವುದೇ ದೇವಾಲಯದ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲು ಮಸೂದೆಯು ಪ್ರಸ್ತಾಪಿಸಿದೆ.

    ಮಹಿಳೆಯನ್ನು ಬಂಧಿಸಿ ಕೆಲ ಹೊತ್ತಿನಲ್ಲಿ ಆಕೆಯನ್ನು ಬೇಲ್ ಮೇಲೆ ಬಿಡುಗಡೆ ಮಾಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

    ರಾಜ್ಯದಲ್ಲಿಂದು 1,653 ಕರೊನಾ ಕೇಸ್ ಪತ್ತೆ; ಈ ಎರಡು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಇದ್ದಕ್ಕಿದ್ದಂತೆ ಬಿಸಿಯಾಯ್ತು ಬಾವಿ ನೀರು! ಅಚ್ಚರಿಗೊಂಡ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts