More

    ಕಾಳ್ಗಿಚ್ಚಿಗೆ ತುರಹಳ್ಳಿಯ 2 ಎಕರೆ ಅರಣ್ಯ ನಾಶ; ಒಂದು ತಿಂಗಳಲ್ಲೇ ಈ ಕಾಡಿಗೆ 4 ಬಾರಿ ಬೆಂಕಿ!

    ಬೆಂಗಳೂರು: ನಗರದಲ್ಲಿ ಸರ್ಕಾರದ ಪ್ರತಿಷ್ಠಿತ ಯೋಜನೆ ವೃಕ್ಷೋದ್ಯಾನ ನಿರ್ಮಾಣಕ್ಕೆ ವಿರೋಧಿಸಿದ ತುರಹಳ್ಳಿ ಅರಣ್ಯಕ್ಕೆ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಬೆಂಕಿ ಬಿದ್ದಿದೆ. ಗುರುವಾರ ತಡರಾತ್ರಿ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 2 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿದೆ.

    ಮಾರ್ಚ್ ತಿಂಗಳು ಮುಗಿಯುವ ಮುನ್ನವೇ ಎಂದರೆ ಕೇವಲ 26 ದಿನಗಳಲ್ಲಿ 4 ಬಾರಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮರಗಳು ಹೆಚ್ಚು ಒತ್ತೊತ್ತಾಗಿರದ ಹಿನ್ನೆಲೆಯಲ್ಲಿ ನೈಸರ್ಗಿಕ ಕಾರಣದಿಂದ ಬೆಂಕಿ ಬೀಳುವ ಸಾಧ್ಯತೆ ಇಲ್ಲ. ಹೀಗಾಗಿ, ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿ ಮೆರೆಯುತ್ತಿದ್ದಾರೆ. ಒಂದು ಬಾರಿ ಅರಣ್ಯದ ಗಡಿಯಲ್ಲಿ ಬೆಂಕಿ ಹಚ್ಚಿದ್ದು, ಅರಣ್ಯ ಪ್ರವೇಶದ ಮೊದಲೇ ತಡೆಯಲಾಗಿತ್ತು. ಮಾ.13ರಂದು ಕಾಣಿಸಿಕೊಂಡ ಬೆಂಕಿಗೆ 1 ಎಕರೆ ಪ್ರದೇಶ ಸುಟ್ಟಿತ್ತು. ಮಾ.17ರಂದೂ ಬೆಂಕಿ ಕಾಣಿಸಿಕೊಂಡಿತ್ತು. ಈಗ ಗುರುವಾರ ತಡರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, 2 ಎಕರೆಗೂ ಅಧಿಕ ಪ್ರದೇಶದ ಕಾಡು ಸುಟ್ಟು ಹೋಗಿದೆ.

    ಗಾಳಿ ಇಲ್ಲದ್ದರಿಂದ ಕಡಿಮೆ ಹಾನಿ: ಮಾ.25ರ ರಾತ್ರಿ 11 ಗಂಟೆವರೆಗೂ ಅರಣ್ಯದ ಸುತ್ತಲೂ ಗಸ್ತು ತಿರುಗಿ ಯಾರೊಬ್ಬರೂ ಬರದಂತೆ ನಿಗಾ ವಹಿಸಲಾಗಿತ್ತು. ಊಟಕ್ಕೆಂದು ಹೋದಾಗ ರಾತ್ರಿ 11.40ಕ್ಕೆ ಬೆಂಕಿ ಬಿದ್ದಿರುವ ಘಟನೆ ಗಮನಕ್ಕೆ ಬಂದಿದೆ. ಮಾಹಿತಿ ತಿಳಿದ ತಕ್ಷಣ 12.30ರ ವೇಳೆಗೆ ಬೆಂಕಿ ನಂದಿಸಲಾಯಿತು. ಗಾಳಿ ಹೆಚ್ಚಾಗಿಲ್ಲದ ಕಾರಣ ಹೆಚ್ಚು ವ್ಯಾಪಿಸದ ಕೇವಲ 2 ಎಕರೆ ಒಣಗಿದ ಹುಲ್ಲು ಮತ್ತು ಎಲೆಗಳು ಸುಟ್ಟಿವೆ. ಮರಗಳಿಗೆ ಹೆಚ್ಚು ಹಾನಿಯಾಗಿಲ್ಲ. ನಾವು ಗಸ್ತು ಸುತ್ತಾಡಿ ಹೋದ ನಂತರವೇ ಕಾದಿದ್ದು, ಬೆಂಕಿ ಹಚ್ಚುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನಿಡಿದರು.

    ಕಾಳ್ಗಿಚ್ಚಿಗೆ ತುರಹಳ್ಳಿಯ 2 ಎಕರೆ ಅರಣ್ಯ ನಾಶ; ಒಂದು ತಿಂಗಳಲ್ಲೇ ಈ ಕಾಡಿಗೆ 4 ಬಾರಿ ಬೆಂಕಿ!

    ಇದನ್ನೂ ಓದಿ: ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

    597 ಎಕರೆ ಕಾಡಿಗೆ ಬೆಂಕಿ ಕಂಟಕ: ಸುಮಾರು 597 ಎಕರೆ ಪ್ರದೇಶದಲ್ಲಿರುವ ಕಿರು-ಅರಣ್ಯ ಪ್ರದೇಶ 1934ರಿಂದ ಈವರೆಗೂ ಅವಿಭಾದಿತವಾಗಿ ಸಂರಕ್ಷಣೆಯಾಗುತ್ತಿದೆ. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾನವನ ಹಸ್ತಕ್ಷೇಪ ಹೆಚ್ಚಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ, ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣ ಹೆಚ್ಚಾಗುತ್ತಿದೆ. 2019ರಲ್ಲಿ ಪೂರ್ತಿ ಅರಣ್ಯ ಸುಟ್ಟು ಬರಡಾಗಿತ್ತು. 2020ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಒಂದು ಬೆಂಕಿ ಪ್ರಕರಣವೂ ದಾಖಲಾಗಿರಲಿಲ್ಲ. ಆದರೆ, ಈ ವರ್ಷ ಸರ್ಕಾರ ವೃಕ್ಷೋದ್ಯಾನ ನಿರ್ಮಿಸಲು ಮುಂದಾದಾಗ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕಾವಲಿಗೆ ಸಿಬ್ಬಂದಿ ಕೊರತೆ ಇದ್ದು, ಕಾಡಿನ ಸಂರಕ್ಷಣೆ ಸವಾಲಾಗಿದೆ.

    ರೈತರಿಂದ ಖರೀದಿಸುವ ಹಾಲಿಗೆ ಲೀಟರ್​ಗೆ 2 ರೂಪಾಯಿ ಹೆಚ್ಚಳ; ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಒಕ್ಕೂಟಕ್ಕಿಂತಲೂ ಇಲ್ಲೇ ಹೆಚ್ಚು ದರವಂತೆ!

    ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

    ಈ ಊರಲ್ಲೀಗ ಮೊಸಳೆ ಭಯ; ನಡುರಸ್ತೆಯಲ್ಲೂ ಕಾಣಿಸಿಕೊಂಡಿದ್ದರಿಂದ ಬೆಚ್ಚಿಬಿದ್ದ ಸವಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts