More

    ರೈತರಿಂದ ಖರೀದಿಸುವ ಹಾಲಿಗೆ ಲೀಟರ್​ಗೆ 2 ರೂಪಾಯಿ ಹೆಚ್ಚಳ; ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಒಕ್ಕೂಟಕ್ಕಿಂತಲೂ ಇಲ್ಲೇ ಹೆಚ್ಚು ದರವಂತೆ!

    ತುಮಕೂರು: ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದ್ದು ಮಾ.1ರಿಂದಲೇ ಅನ್ವಯವಾಗುವಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತುಮುಲ್ ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ, ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹಾಗೂ ಸಂಘದ ನಿರ್ವಹಣೆಗಾಗಿ ಪ್ರತಿ ಕೆ.ಜಿ. ಹಾಲಿಗೆ 0.20 ಪೈಸೆ ಹೆಚ್ಚಿಸಲಾಗಿದೆ ಎಂದರು.

    3.5 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ 27 ರೂ., ಸಂಘಗಳಿಗೆ 27.93 ರೂ. ಹಾಗೂ 4.1 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ 28.39 ರೂ., ಸಂಘಗಳಿಗೆ ರೂ. 29.32 ರೂಪಾಯಿಯಂತೆ ನೀಡಲಾಗುವುದು. ಒಕ್ಕೂಟದಲ್ಲಿ ಶೇ.96ಕ್ಕಿಂತಲೂ ಅಧಿಕ ಹಾಲು 4.1 ಜಿಡ್ಡಿನಾಂಶ ಇದ್ದು, ಸಂಘಗಳಿಗೆ 29.32 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದರು.

    ಒಕ್ಕೂಟಕ್ಕೆ ದಿನ ಒಂದಕ್ಕೆ ಅಂದಾಜು ರೂ. 16.40 ಲಕ್ಷದಂತೆ ವರ್ಷಕ್ಕೆ 435.58 ಕೋಟಿ ರೂ. ಹೆಚ್ಚುವರಿ ಖರ್ಚು ಬರಲಿದೆ. ಪ್ರಸ್ತುತ ತುಮಕೂರು ಸಹಕಾರಿ ಹಾಲು ಒಕ್ಕೂಟದ ಈ ದರ ರಾಜ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಮುಂತಾದ ಹಾಲು ಒಕ್ಕೂಟಗಳು ನೀಡುತ್ತಿರುವ ದರಗಳಿಗಿಂತ ಹೆಚ್ಚಿನದ್ದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಎಸ್.ಆರ್.ಗೌಡ, ಕೊಂಡವಾಡಿ ಚಂದ್ರಶೇಖರ್, ಹಳೆಮನೆ ಶಿವನಂಜಪ್ಪ, ಚನ್ನಮಲ್ಲಯ್ಯ ಮತ್ತಿತರರು ಇದ್ದರು.

    ಕಿರಿದಾಗುತ್ತಿರುವ ಜನನಾಂಗ: ಪುರುಷರ ಕಾಲೆಳೆದ ನಟಿ ದಿಯಾ ಮಿರ್ಜಾ!

    ಕಸಾಪ ಚುನಾವಣೆ: ಮತದಾರರ ಅಂತಿಮ ಪಟ್ಟಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts