ಈ ಊರಲ್ಲೀಗ ಮೊಸಳೆ ಭಯ; ನಡುರಸ್ತೆಯಲ್ಲೂ ಕಾಣಿಸಿಕೊಂಡಿದ್ದರಿಂದ ಬೆಚ್ಚಿಬಿದ್ದ ಸವಾರರು!

ಯಾದಗಿರಿ: ಇದು ಮೊಸಳೆ ಬಂತು ಮೊಸಳೆ ಕಥೆಯಲ್ಲ, ಇಲ್ಲಿ ನಿಜಕ್ಕೂ ಮೊಸಳೆ ಬಂದಿದೆ. ಅದರಲ್ಲೂ ನಡುರಸ್ತೆಯಲ್ಲೂ ಮೊಸಳೆ ಕಾಣಿಸಿಕೊಂಡಿರುವುದರಿಂದ ವಾಹನ ಸವಾರರೂ ಬೆಚ್ಚಿ ಬೀಳುವಂತಾಗಿದೆ. ಯಾದಗಿರಿ ಜಿಲ್ಲೆಯ‌ ವಡಗೇರಾ ತಾಲೂಕಿನ ಹಾಲಗೇರಾ ರಸ್ತೆಯಲ್ಲಿ ದೊಡ್ಡ ಮೊಸಳೆಯೊಂದು ಕಂಡು ಬಂದಿದ್ದು, ಜನರು ಓಡಾಡಲೂ ಭಯ ಪಡುವಂತಾಗಿದೆ. ವಾಹನದಲ್ಲಿ ಸಾಗುತ್ತಿರುವವರಿಗೆ ರಸ್ತೆಯನ್ನು ದಾಟುತ್ತಿರುವ ಮೊಸಳೆ ಕಾಣಿಸಿದೆ. ಇನ್ನು ಈ ಪ್ರದೇಶದಲ್ಲಿ ಕೆರೆಯಿಂದ ಆಹಾರ ಅರಸಿ ಮೊಸಳೆಗಳು ಗ್ರಾಮದೊಳಕ್ಕೆ ಬರುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿವೆ. ಮೊಸಳೆ ಕಾಟದಿಂದಾಗಿ ರಾತ್ರಿ ವೇಳೆ ಸಂಚರಿಸಲೂ … Continue reading ಈ ಊರಲ್ಲೀಗ ಮೊಸಳೆ ಭಯ; ನಡುರಸ್ತೆಯಲ್ಲೂ ಕಾಣಿಸಿಕೊಂಡಿದ್ದರಿಂದ ಬೆಚ್ಚಿಬಿದ್ದ ಸವಾರರು!