More

    ಈ ಊರಲ್ಲೀಗ ಮೊಸಳೆ ಭಯ; ನಡುರಸ್ತೆಯಲ್ಲೂ ಕಾಣಿಸಿಕೊಂಡಿದ್ದರಿಂದ ಬೆಚ್ಚಿಬಿದ್ದ ಸವಾರರು!

    ಯಾದಗಿರಿ: ಇದು ಮೊಸಳೆ ಬಂತು ಮೊಸಳೆ ಕಥೆಯಲ್ಲ, ಇಲ್ಲಿ ನಿಜಕ್ಕೂ ಮೊಸಳೆ ಬಂದಿದೆ. ಅದರಲ್ಲೂ ನಡುರಸ್ತೆಯಲ್ಲೂ ಮೊಸಳೆ ಕಾಣಿಸಿಕೊಂಡಿರುವುದರಿಂದ ವಾಹನ ಸವಾರರೂ ಬೆಚ್ಚಿ ಬೀಳುವಂತಾಗಿದೆ.

    ಯಾದಗಿರಿ ಜಿಲ್ಲೆಯ‌ ವಡಗೇರಾ ತಾಲೂಕಿನ ಹಾಲಗೇರಾ ರಸ್ತೆಯಲ್ಲಿ ದೊಡ್ಡ ಮೊಸಳೆಯೊಂದು ಕಂಡು ಬಂದಿದ್ದು, ಜನರು ಓಡಾಡಲೂ ಭಯ ಪಡುವಂತಾಗಿದೆ. ವಾಹನದಲ್ಲಿ ಸಾಗುತ್ತಿರುವವರಿಗೆ ರಸ್ತೆಯನ್ನು ದಾಟುತ್ತಿರುವ ಮೊಸಳೆ ಕಾಣಿಸಿದೆ.

    ಇನ್ನು ಈ ಪ್ರದೇಶದಲ್ಲಿ ಕೆರೆಯಿಂದ ಆಹಾರ ಅರಸಿ ಮೊಸಳೆಗಳು ಗ್ರಾಮದೊಳಕ್ಕೆ ಬರುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿವೆ. ಮೊಸಳೆ ಕಾಟದಿಂದಾಗಿ ರಾತ್ರಿ ವೇಳೆ ಸಂಚರಿಸಲೂ ಗ್ರಾಮಸ್ಥರು ಹಿಂಜರಿಯುವಂತಾಗಿದೆ. ಇಲ್ಲಿನ ಗೋಡಿಹಾಳ, ಅರ್ಜುಣಗಿ‌ ಸೇರಿ ಹಲವು ಗ್ರಾಮಸ್ಥರಿಗೆ ಮೊಸಳೆ ಕಾಟ ಎದುರಾಗಿದ್ದು, ಅವುಗಳನ್ನು ಸೆರೆ ಹಿಡಿದು ರಕ್ಷಣೆ ಒದಗಿಸುವಂತೆ ಇಲ್ಲಿನ ಜನರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ರೈತರಿಂದ ಖರೀದಿಸುವ ಹಾಲಿಗೆ ಲೀಟರ್​ಗೆ 2 ರೂಪಾಯಿ ಹೆಚ್ಚಳ; ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಒಕ್ಕೂಟಕ್ಕಿಂತಲೂ ಇಲ್ಲೇ ಹೆಚ್ಚು ದರವಂತೆ!

    ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts