More

    ಎಲ್ಲ ಸದಸ್ಯರ ಸಹಕಾರದಿಂದ ಪ್ರಶಸ್ತಿ

    ಬೋರಗಾಂವ: ತಂದೆಯಾದ ರಾವಸಾಹೇಬ ಪಾಟೀಲರ ಆಶೀರ್ವಾದ ಮತ್ತು ಅರಿಹಂತ ಉದ್ಯೋಗ ಸಮೂಹದ ಎಲ್ಲ ಪದಾಧಿಕಾರಿಗಳ ವಿಶೇಷ ಸಹಕಾರದಿಂದ ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪಡೆಯುವಲ್ಲಿ ಸಾಧ್ಯವಾಯಿತು ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉತ್ತಮ ಪಾಟೀಲ ಹೇಳಿದರು.

    ಇಲ್ಲಿನ ಅರಿಹಂತ ಸಭಾಂಗಣದಲ್ಲಿ ಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿ ಮಲ್ಟಿಸ್ಟೇಟ್ ವತಿಯಿಂದ ಉತ್ತಮ ಪಾಟೀಲ ಅವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿದ್ದೇನೆ. ಅರಿಹಂತ ಗ್ರೂಪ್‌ನಲ್ಲಿ ಕೆಲಸ ಮಾಡುವ ಎಲ್ಲರ ಕಷ್ಟಕ್ಕೆ ನೆರವಾಗಿದ್ದೇವೆ. ಬ್ಯಾಂಕ್, ಕೃಷಿ ಪತ್ತಿನ ಸಂಘ, ಹಾಲು ಸಂಘ, ನೂಲು ಗಿರಣಿ, ಸಕ್ಕರೆ ಕಾರ್ಖಾನೆ, ಶಾಲೆ, ಆಸ್ಪತ್ರೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಕಾರ್ಯ ಗುರುತಿಸಿ ಸರ್ಕಾರ ನನಗೆ ಪ್ರಶಸ್ತಿ ನೀಡಿತು ಎಂದರು.

    ಸಂಸ್ಥೆಯ ಉಪಾಧ್ಯಕ್ಷ ಸತೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ಪಾಟೀಲರು ಕಿರಿಯ ವಯಸ್ಸಿನಲ್ಲೇ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಅವರದು ಎಂದರು.

    ಸಂಸ್ಥೆ ಸಂಸ್ಥಾಪಕ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೋರಗಾಂವ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಂದ್ರ ಪಾಟೀಲ ಅವರನ್ನು ಅಭಿನಂದನ ಪಾಟೀಲ ಸನ್ಮಾನಿಸಿದರು. ನಿರ್ದೇಶಕ ಅಭಿನಂದನ ಪಾಟೀಲ, ಅಭಯಕುಮಾರ ಕರೋಲೆ, ಪಿರಗೊಂಡ ಪಾಟೀಲ, ಶರದಕುಮಾರ ಲಡ್ಗೆ, ಭುಜಗೊಂಡ ಪಾಟೀಲ, ಬಶುದ್ದೀನ್ ಅ್ರಾಜ್, ರಾಜು ಮಗದುಮ್ಮ, ಸಂದೀಪ ಪಾಟೀಲ, ಶಿವಾನಂದ ರಾಜಮನೆ, ಜಿಎಂ ಅಶೋಕ ಬಂಕಾಪುರೆ, ಎಎಂ ಶಾಂತಿನಾಥ ತೇರದಾಳಿ, ಕೃಷಿ ಸಂಘದ ಸಿಇಒ ಆರ್.ಟಿ. ಚೌಗುಲಾ, ಅಭಿನಂದನ ಬೇನಾಡೆ, ಅಭಯ ಖೋತ, ರಾಜೇಂದ್ರ ಬನ್ನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts