More

    ವಾಮಾಚಾರ ನೆಪದಲ್ಲಿ ವಿಧವೆ ಬಳಿ 8.12 ಕೋಟಿ ಹಣ ಪೀಕಿದ, ಖಾಸಗಿ ವಿಡಿಯೋ ಇಟ್ಟುಕೊಂಡು ಹಿಂಸಿಸಿದ!

    ಬೆಂಗಳೂರು: ಗಂಡನನ್ನು ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದ ಶ್ರೀಮಂತ ಮನೆತನದ ಮಹಿಳೆಯೊಬ್ಬರನ್ನು ಯಾಮಾರಿಸಿದ ಕಾರು ಚಾಲಕ ಮಾಟ-ಮಂತ್ರದ ನೆಪದಲ್ಲಿ ಬರೋಬ್ಬರಿ 8.12 ಕೋಟಿ ರೂಪಾಯಿ ಲಪಟಾಯಿಸಿದ್ದಾನೆ.

    ಹೊರಮಾವು ಮುಖ್ಯರಸ್ತೆಯ ನಿವಾಸಿ 57 ವರ್ಷದ ಮಹಿಳೆ ವಂಚನೆಗೊಳಗಾದವರು. ಉದ್ಯಮಿಯಾಗಿದ್ದ ಈಕೆಯ ಪತಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರು. ದಂಪತಿಗೆ ಓರ್ವ ಮಗನಿದ್ದಾನೆ. ಆರೋಪಿ ಮುನಿರಾಜು 2005ರಲ್ಲಿ ಇವರ ಮನೆಯಲ್ಲಿ ಕಾರು ಚಾಲಕನಾಗಿ ಕೆಸಕ್ಕೆ ಸೇರಿದ್ದ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯ ಪತಿಯನ್ನು ಚಿಕಿತ್ಸೆಗಾಗಿ ಮುನಿರಾಜು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಕೆಲ ವರ್ಷಗಳಲ್ಲೇ ಪತಿ ಅನಾರೋಗ್ಯದಿಂದ ಮೃತಪಟ್ಟರು. ಈ ನಡುವೆ ಕ್ಯಾನ್ಸರ್​ಗೆ ತುತ್ತಾಗಿದ್ದ ಮಹಿಳೆಯ ಸಹೋದರಿಯನ್ನೂ ಮುನಿರಾಜುವೇ ಆಸ್ಪತ್ರೆಗೆ ಕರೆದೊಯ್ದು ಮನೆ ಮಂದಿಯ ವಿಶ್ವಾಸ ಗಿಟ್ಟಿಸಿಕೊಂಡಿದ್ದ.

    ಪತಿಯನ್ನು ಕಳೆದುಕೊಂಡ ಮಹಿಳೆಯ ಆಸ್ತಿ ನಿರ್ವಹಣೆ ಮಾಡಲು ಮುನಿರಾಜು ಸಹಾಯ ಪಡೆದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮುನಿರಾಜು ಆ ಮಹಿಳೆ ಜತೆ ಆತ್ಮೀಯ ಒಡನಾಟ ಹೊಂದಿದ್ದ. ನಂತರ ‘ನಿಮ್ಮ ಮನೆಯಲ್ಲಿ ಸಮಸ್ಯೆಯಿದ್ದು, ಮಾಟ ಮಾಡಿಸಿದರೆ ಸಮಸ್ಯೆ ಬಗೆಹರಿಯಲಿದೆ. ನನಗೆ ಪರಿಚಯವಿರುವ ಒಬ್ಬ ಜೋತಿಷ್ಯರಿದ್ದಾರೆ. ಅವರ ಬಳಿ ಹೋದರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಆದರೆ, ಅವರು ಹೇಳಿದಂತೆ ಕೇಳಬೇಕಾಗುತ್ತದೆ’ ಎಂದಿದ್ದ. ಇದನ್ನು ನಂಬಿದ ಮಹಿಳೆ ಆತ ಹೇಳಿದಂತೆ ಕೇಳುತ್ತಿದ್ದರು.

    ಇದನ್ನೂ ಓದಿರಿ ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

    ಅದರಂತೆ 2007ರಲ್ಲಿ ಕಾಕ್ಸ್​ಟೌನ್​ನಲ್ಲಿರುವ ಬ್ರಹ್ಮ ಎಂಬುವವರ ಜೋತಿಷ್ಯಾಲಯಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ. ಮುನಿರಾಜು ಜತೆ ಸೇರಿಕೊಂಡ ರಾಮು, ಬ್ರಹ್ಮ ಎಂಬುವವರು ವಿವಿಧ ಪೂಜಾ ಕೈಂಕರ್ಯ ಮಾಡಿಸಬೇಕು ಎಂದೇಳಿ ಮಹಿಳೆಯಿಂದ ಹಣ ಲಪಟಾಯಿಸಿದ್ದರು. ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ಮಹಿಳೆ ಹಲವೆಡೆ ಆಸ್ತಿ ಮಾರಾಟ ಮಾಡಿ ಆರೋಪಿಗಳಿಗೆ ಹಂತ-ಹಂತವಾಗಿ ಒಟ್ಟು 8.12 ಕೋಟಿ ರೂ. ನೀಡಿದ್ದರು. ಜತೆಗೆ ಮಹಿಳೆಯಿಂದ ಅರ್ಧ ಕೆಜಿ ಚಿನ್ನಾಭರಣವನ್ನೂ ಮುನಿರಾಜು ಪೀಕಿದ್ದ. ಇಷ್ಟು ಸಾಲದೆಂಬಂತೆ ಹಲವು ಬಾರಿ ಚೆಕ್​ ಪಡೆದು ಹಣ ಡ್ರಾ ಮಾಡಿಸಿಕೊಂಡಿದ್ದ. ಮತ್ತೆ ಮಾಟ ಮಾಡಿಸಬೇಕೆಂಬ ನೆಪವೊಡ್ಡಿ ಮುನಿರಾಜು ಮತ್ತು ಇತರರು ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆಗೆ ಆರೋಪಿಗಳ ಮೇಲೆ ಅನುಮಾನ ಬಂದು ಹಣ ಕೊಡಲು ನಿರಾಕರಿಸಿದ್ದರು.

    ಇಷ್ಟಕ್ಕೆ ಸುಮ್ಮನಾಗದ ಕಾರು ಚಾಲಕ ಮುನಿರಾಜು, ದೈಹಿಕ ಹಾಗೂ ಮಾನಸಿಕವಾಗಿ ಮಹಿಳೆಗೆ ಚಿತ್ರಹಿಂಸೆ ಕೊಡಲು ಆರಂಭಿಸಿದ್ದ. ಸಾಲದ್ದಕ್ಕೆ ಮಹಿಳೆ ಜತೆ ಆತ್ಮೀಯವಾಗಿದ್ದ ವೇಳೆ ಅವರಿಗೆ ತಿಳಿಯದಂತೆ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದ ಖಾಸಗಿ ದೃಶ್ಯವನ್ನು ತೋರಿಸಿ ಬ್ಲ್ಯಾಕ್​ಮೇಲ್​ ಮಾಡಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ಆತಂಕಗೊಂಡ ಮಹಿಳೆ ಮತ್ತೆ ಆತನಿಗೆ ಹಣ ಕೊಡಲು ಆರಂಭಿಸಿದ್ದಳು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಖಾಸಗಿ ವಿಡಿಯೋ ಹಾಗೂ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದ. ನೊಂದ ಮಹಿಳೆ ಬೇರೆ ದಾರಿ ಕಾಣದೇ ಕೆಲ ವರ್ಷಗಳ ಬಳಿಕ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೆಬ್ಬಾಳ ಠಾಣೆ ಪೊಲೀಸರು ಕಾರು ಚಾಲಕ ಮುನಿರಾಜು, ಜೋತಿಷಿ ಬ್ರಹ್ಮ ಸೇರಿ 22 ಮಂದಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ನಾನು ದಂಡ ಕಟ್ಟಿದ್ದೀನಿ, ಇನ್ನು 24 ಗಂಟೆ ಮಾಸ್ಕ್ ಹಾಕಲ್ಲ..!

    ಸಬ್​ರಿಜಿಸ್ಟ್ರಾರ್​ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?

    ಮದುವೆಗೆ ಒಲ್ಲೆ ಎಂದವಳನ್ನು ಹೊತ್ತೊಯ್ದ ದುಷ್ಕರ್ಮಿಗೆ ಯುವತಿ ಚಳ್ಳೆಹಣ್ಣು ತಿನ್ನಿಸಿದ್ದೇ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts