More

    ಶಮಿ ಸುಮ್ಮನಿದ್ರೂ ಬಿಡದ ಹಸಿನಾ! ಒಳ್ಳೆ ಆಟವಾಡಿದ್ರೆ ಸಾಲದು… ಮಾಜಿ ಗಂಡನಿಗೆ ಹಿಗ್ಗಾಮುಗ್ಗಾ ಕ್ಲಾಸ್​

    ನವದೆಹಲಿ: ಪ್ರಸಕ್ತ ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಮೊಹಮ್ಮದ್​ ಶಮಿ, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್​ನಲ್ಲಿ​ ಮಿಂಚಿರುವ ಶಮಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.

    ಇದೀಗ ತಂಡದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್​ ಕಬಳಿಸಿ ಅತಿ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನ. 15ರಂದು ನಡೆದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಕೇವಲ 57 ರನ್​ ನೀಡಿ ಬರೋಬ್ಬರಿ 7 ವಿಕೆಟ್​ ಕಬಳಿಸಿದರು. ಈ ಮೂಲಕ ಟೀಮ್​ ಇಂಡಿಯಾದ ನಿರ್ಣಾಯಕ ಬೌಲರ್​ ಆಗಿ ಶಮಿ ಹೊರಹೊಮ್ಮಿದ್ದಾರೆ.

    ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಶಮಿ, ವೈವಾಹಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಅನುಭವಿಸಿದ್ದಾರೆ. ಶಾಂತ ಸ್ವಭಾವದ ಶಮಿ ಅವರನ್ನು ಅವರ ಮಾಜಿ ಪತ್ನಿ ಹಸಿನಾ ಜಹಾನ್ ಬಿಟ್ಟು ಬಿಡದೇ ಕಾಡುತ್ತಿದ್ದಾರೆ. ಎಲ್ಲಿಯೂ ತಮ್ಮ ಮಾಜಿ ಪತ್ನಿ ಬಗ್ಗೆ ಶಮಿ ಮಾತನಾಡದಿದ್ದರೂ, ಹಸಿನಾ ಮಾತ್ರ ಶಮಿ ಅವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುತ್ತಲೇ ಇದ್ದಾರೆ.

    ನ. 2ರಂದು ಶ್ರೀಲಂಕಾ ವಿರುದ್ಧ ಮಿಂಚಿನ ಬೌಲಿಂಗ್​ ದಾಳಿ ಮಾಡಿದ್ದ ಶಮಿ, ಕೇವಲ 18 ರನ್​ಗೆ 5 ವಿಕೆಟ್​ ಕಬಳಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದ ಹಸಿನಾ, ಶಮಿ ಚೆನ್ನಾಗಿ ಆಡಿದರೆ, ಭಾರತ ತಂಡದಲ್ಲಿ ಉಳಿದರೆ ಮತ್ತು ಚೆನ್ನಾಗಿ ಸಂಪಾದನೆ ಮಾಡಿದರೆ, ಅದು ನನ್ನ ಮತ್ತು ನನ್ನ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿ ಇರಿಸುತ್ತದೆ. ನಾನು ಭಾರತ ತಂಡಕ್ಕೆ ಶುಭ ಕೋರುತ್ತೇನೆ ಹೊರತು ಶಮಿಗೆ ಒಳ್ಳೆಯದಾಗಲಿ ಎಂದು ಬಯಸುವುದಿಲ್ಲ. ಆತ ಚೆನ್ನಾಗಿ ಆಡಿದ್ದಷ್ಟೂ ನನಗೆ ಲಾಭ, ಆತನ ಯಶಸ್ಸೇ ನನಗೆ ಬಂಡವಾಳ ಎನ್ನುವ ಅರ್ಥದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು.

    ಸಂತೋಷದ ಜೀವನ ನಡೆಸಬಹುದಿತ್ತು
    ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಶಮಿ, 57 ರನ್​ಗೆ 7 ವಿಕೆಟ್​ ಪಡೆದಿದ್ದಕ್ಕೆ ಮತ್ತೆ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಹಸಿನಾ, ಒಳ್ಳೆಯ ಆಟಗಾರನಂತೆ ಒಳ್ಳೆಯ ವ್ಯಕ್ತಿಯಾಗಿದ್ದರೆ ನಾವು ಒಳ್ಳೆಯ ಜೀವನವನ್ನು ಸಾಗಿಸಬಹುದಿತ್ತು. ಒಳ್ಳೆಯ ವ್ಯಕ್ತಿವಾಗಿದ್ದರೆ, ನನ್ನ ಮಗಳು, ನನ್ನ ಪತಿ ಮತ್ತು ನಾನು ಸಂತೋಷದ ಜೀವನ ನಡೆಸಬಹುದಿತ್ತು. ಅವರೊಬ್ಬ ಉತ್ತಮ ಆಟಗಾರ ಮಾತ್ರವಲ್ಲದೆ ಉತ್ತಮ ಪತಿ ಮತ್ತು ಉತ್ತಮ ತಂದೆಯೂ ಆಗಿದ್ದರೆ ಅದು ತುಂಬಾ ಗೌರವದ ವಿಷಯವಾಗಿರುತ್ತಿತ್ತು. ಆದರೆ, ಶಮಿಯ ತಪ್ಪುಗಳಿಂದ, ದುರಾಸೆಗಳಿಂದ ಮತ್ತು ಕೊಳಕು ಮನಸ್ಸಿನಿಂದಾಗಿ ನಾವು ಮೂವರು ಪರಿಣಾಮ ಎದುರಿಸುತ್ತಿದ್ದೇವೆ. ಆದಾಗ್ಯೂ ತನ್ನ ನಕಾರಾತ್ಮಕ ಅಂಶಗಳನ್ನು ಹಣದ ಮೂಲಕ ಮರೆಮಾಡಲು ಶಮಿ ಪ್ರಯತ್ನಿಸುತ್ತಿದ್ದಾರೆ ಎಂದು ಹಸಿನಾ ಟೀಕಾ ಪ್ರಹಾರ ನಡೆಸಿದ್ದಾರೆ.

    ನ್ಯೂಜಿಲೆಂಡ್​ ವಿರುದ್ಧ 7 ವಿಕೆಟ್​ ಪಡೆದಿದ್ದು ವಿಶೇಷ ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಸಿನಾ, ಯಾವುದೇ ವಿಶೇಷ ಇಲ್ಲ ಎಂದು ನನಗನಿಸುತ್ತದೆ. ಆದರೆ, ಭಾರತ ಸೆಮಿ ಫೈನಲ್​ನಲ್ಲಿ ಗೆದ್ದಿದ್ದು ಒಳ್ಳೆಯದು ಅನಿಸುತ್ತದೆ. ಅದೇ ರೀತಿ ಫೈನಲ್​ ಪಂದ್ಯವನ್ನು ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹಸಿನಾ ತಿಳಿಸಿದ್ದಾರೆ.

    ಅಂದಹಾಗೆ ಮೊಹಮ್ಮದ್ ಶಮಿ 2014ರ ಜೂನ್ 6ರಂದು ಹಸಿನ್ ಜಹಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 4 ವರ್ಷಗಳ ನಂತರ ಶಮಿಗೆ ಪತ್ನಿ ಡಿವೋರ್ಸ್ ನೀಡಿದ್ದಾರೆ. ಜಹಾನ್​ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.

    ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ, ಮಾಜಿ ಪತ್ನಿಯ ಸ್ಫೋಟಕ ಹೇಳಿಕೆ

    ಮೊಹಮ್ಮದ್​ ಶಮಿಯ 2ನೇ ಹೆಂಡ್ತಿಯಾಗಲು ನಾನು ರೆಡಿ ಆದ್ರೆ ಒಂದು ಷರತ್ತು ಎಂದು ಖ್ಯಾತ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts