More

    ವಿಂಬಲ್ಡನ್​ ರದ್ದುಗೊಂಡರೂ ಟೆನಿಸ್​ ಆಟಗಾರರಿಗೆ ಸಿಗಲಿದೆ ಬಹುಮಾನ!

    ಲಂಡನ್​: ಕರೊನಾ ವೈರಸ್​ ಭೀತಿಯಿಂದಾಗಿ ಈ ವರ್ಷ ಪ್ರತಿಷ್ಠಿತ ವಿಂಬಲ್ಡನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ನಡೆದಿಲ್ಲ. 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ವಿಂಬಲ್ಡನ್​ ಟೂರ್ನಿ ರದ್ದುಗೊಂಡಿದೆ. ಇದರ ನಡುವೆಯೂ, ಟೂರ್ನಿಯಲ್ಲಿ ಆಡಬೇಕಾಗಿದ್ದ ಎಲ್ಲ ಆಟಗಾರರಿಗೂ ಬಹುಮಾನ ಮೊತ್ತದ ಪಾಲು ಸಿಗಲಿದೆ ಎಂಬುದು ವಿಶೇಷ. ಇದರಿಂದಾಗಿ, ಟೂರ್ನಿ ರದ್ದುಗೊಂಡರೂ ಯಾವುದೇ ಆಟಗಾರರಿಗೆ ನಷ್ಟ ಉಂಟಾಗುವುದಿಲ್ಲ!

    ವಿಂಬಲ್ಡನ್​ ಟೂರ್ನಿಯ ಸಂಘಟಕರಾದ ಆಲ್​ ಇಂಗ್ಲೆಂಡ್​ ಕ್ಲಬ್​, ಟೂರ್ನಿಯಲ್ಲಿ ಆಡಬೇಕಾಗಿದ್ದ ಒಟ್ಟು 620 ಆಟಗಾರರಿಗೆ 93.93 ಕೋಟಿ ರೂ. (12.5 ದಶಲ ಡಾಲರ್​) ಬಹುಮಾನ ಮೊತ್ತವನ್ನು ಹಂಚಿಕೆ ಮಾಡಲು ಶುಕ್ರವಾರ ನಿರ್ಧರಿಸಿದೆ. ಟೂರ್ನಿಯ ವಿಮಾ ಮೊತ್ತದಿಂದಾಗಿ ಸಂಟಕರಿಗೆ ಈಗಾಗಲೆ ಭಾರಿ ನಷ್ಟದ ಅಪಾಯ ತಪ್ಪಿದೆ. ಇದೀಗ ವಿಮಾ ಕಂಪನಿಯ ಜತೆಗೆ ಮಾತುಕತೆ ನಡೆಸಿ ಆಟಗಾರರಿಗೂ ಅದರಲ್ಲಿ ಪಾಲು ನೀಡಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ: 71ನೇ ಜನ್ಮದಿನಕ್ಕೆ ‘ಹೃದಯ’ ಗೆದ್ದ ಸುನೀಲ್​ ಗಾವಸ್ಕರ್ ವಿಶೇಷ​ ಸೇವೆ!

    ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡಬೇಕಾಗಿದ್ದ 256 ಆಟಗಾರರಿಗೆ ತಲಾ 31 ಸಾವಿರ ಡಾಲರ್​ (23.29 ಲ ರೂ.) ಮತ್ತು ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದ್ದ 224 ಆಟಗಾರರಿಗೆ ತಲಾ 15,600 ಡಾಲರ್​ (11.72 ಲ ರೂ.) ಬಹುಮಾನವನ್ನು ವಿತರಿಸಲಾಗುವುದು. ಚಾಂಪಿಯನ್​ಷಿಪ್​ ರದ್ದುಗೊಂಡ ಕೂಡಲೇ ನಾವು, ಟೂರ್ನಿ ನಡೆಸಲು ನೆರವಾಗುವವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎಂಬ ಬಗ್ಗೆ ಚಿಂತಿಸಿದ್ದೆವು ಎಂದು ಆಲ್​ ಇಂಗ್ಲೆಂಡ್​ ಕ್ಲಬ್​ ತಿಳಿಸಿದೆ.

    ಡಬಲ್ಸ್​ನಲ್ಲಿ ಸ್ಪಧಿರ್ಸಬೇಕಿದ್ದ 120 ಆಟಗಾರರಿಗೆ ತಲಾ 7,800 ಡಾಲರ್​ (5.86 ಲ ರೂ.), ವೀಲ್​ಚೇರ್​ ಸ್ಪರ್ಧೆಯಲ್ಲಿ ಆಡಬೇಕಿದ್ದ 16 ಆಟಗಾರರಿಗೆ ತಲಾ 7,500 ಡಾಲರ್​ (7.63 ಲ ರೂ.) ಮತ್ತು ಕ್ವಾಡ್​ ವೀಲ್​ಚೇರ್​ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದ ನಾಲ್ವರಿಗೆ ತಲಾ 6,200 ಡಾಲರ್​ (4.65 ಲ ರೂ. ) ವಿತರಿಸಲಾಗುವುದು. ಈ ಸಮಯದಲ್ಲಿ ಸಾಕಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಟೆನಿಸ್​ ಅಟಗಾರರು ಕೂಡ ಅದರಲ್ಲಿ ಸೇರಿದ್ದಾರೆ. ಹೀಗಾಗಿ ನಾವು ಅವರಿಗೆ ಅವರ ವಿಶ್ವ ರ್ಯಾಂಕಿಂಗ್​ನ ಅನ್ವಯ ಬಹುಮಾನ ಮೊತ್ತವನ್ನು ಪಡೆಯುವ ಅವಕಾಶವನ್ನು ನೀಡಿದ್ದೇವೆ ಎಂದು ಆಲ್​ ಇಂಗ್ಲೆಂಡ್​ ಕ್ಲಬ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಚರ್ಡ್​ ಲೆವಿಸ್​ ತಿಳಿಸಿದ್ದಾರೆ.

    ನಮ್ಮ ವಿಮಾ ಪಾಲಿಸಿಯಿಂದಾಗಿ ನಷ್ಟ ತಪ್ಪಿಸಲು ಸಾಧ್ಯವಾಗಿರುವುದಕ್ಕೆ ಖುಷಿ ಇದೆ. 2020ರ ಟೂರ್ನಿಗೆ ನೇರಪ್ರವೇಶ ಪಡೆಯಬಹುದಾಗಿದ್ದ ಆಟಗಾರರರಿಗೆ ಈಗ ಬಹುಮಾನ ಮೊತ್ತದ ಹಂಚಿಕೆಯಿಂದ ಅವರಿಗೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದ್ದೇವೆ. 2002ರಿಂದ ಟೂರ್ನಿಯ ಶ್ರೇಯಾಂಕ ನೀಡಲು ಬಳಸುತ್ತಿರುವ ಗ್ರಾಸ್​ ಕೋರ್ಟ್​ ದಾಖಲೆಯ ಅನ್ವಯವೇ ನೇರಪ್ರವೇಶ ಪಡೆಯುವ ಅವಕಾಶ ಹೊಂದಿದ್ದ ಆಟಗಾರರಿಗೆ ಬಹುಮಾನ ಮೊತ್ತ ಸಿಗಲಿದೆ ಎಂದು ತಿಳಿಸಿದ್ದಾರೆ. 2021ರಿಂದ ಟೂರ್ನಿಯ ನೇರಪ್ರವೇಶಕ್ಕೆ ವಿಶ್ವ ರ್ಯಾಂಕಿಂಗ್​ ಪದ್ಧತಿಯೇ ಅನ್ವಯವಾಗಲಿದೆಎ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    VIDEO | ಧೋನಿ ಕ್ರಿಕೆಟ್​ ಆಡದೆ ಭರ್ತಿ ಒಂದು ವರ್ಷ, ಕೊನೆಯ ಇನಿಂಗ್ಸ್​ ಹೇಗಿತ್ತು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts