More

    ಕೇನ್ ವಿಲಿಯಮ್ಸನ್ ಜೀವನಶ್ರೇಷ್ಠ 251 ರನ್ ಸಾಧನೆ

    ಹ್ಯಾಮಿಲ್ಟನ್: ನಾಯಕ ಕೇನ್ ವಿಲಿಯಮ್ಸನ್ (251 ರನ್, 412 ಎಸೆತ, 34 ಬೌಂಡರಿ, 2 ಸಿಕ್ಸರ್) ಜೀವನಶ್ರೇಷ್ಠ ಬ್ಯಾಟಿಂಗ್ ಸಾಧನೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.

    2 ವಿಕೆಟ್‌ಗೆ 243 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ ತಂಡ, ಚಹಾ ವಿರಾಮದ ಬಳಿಕ 7 ವಿಕೆಟ್‌ಗೆ 519 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ವೆಸ್ಟ್ ಇಂಡೀಸ್ ಎಚ್ಚರಿಕೆಯ ಆರಂಭ ಪಡೆದಿದ್ದು, ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ. ವಿಂಡೀಸ್ ತಂಡ ಸದ್ಯ 470 ರನ್ ಹಿನ್ನಡೆಯಲ್ಲಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 271 ರನ್ ಗಳಿಸಬೇಕಾಗಿದೆ.

    97 ರನ್‌ನಿಂದ ದಿನದಾಟ ಆರಂಭಿಸಿದ ಕೇನ್ ವಿಲಿಯಮ್ಸನ್, ದಿನದ 3ನೇ ಓವರ್‌ನಲ್ಲೇ ಬೌಂಡರಿ ಸಿಡಿಸಿ ಶತಕ ಪೂರೈಸಿದರು. ಬಳಿಕ ತನ್ನ 22ನೇ ಟೆಸ್ಟ್ ಶತಕವನ್ನು 3ನೇ ದ್ವಿಶತಕವನ್ನಾಗಿ ಪರಿವರ್ತಿಸಿದ್ದು, ಮಾತ್ರವಲ್ಲದೆ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 250ರ ಗಡಿ ದಾಟಿದರು. ಅಜೇಯ 242 ರನ್ ಅವರ ಹಿಂದಿನ ಗರಿಷ್ಠ ಗಳಿಕೆಯಾಗಿತ್ತು.

    ನ್ಯೂಜಿಲೆಂಡ್: 145 ಓವರ್‌ಗಳಲ್ಲಿ 7 ವಿಕೆಟ್‌ಗೆ 519 ಡಿಕ್ಲೇರ್ (ಕೇನ್ ವಿಲಿಯಮ್ಸನ್ 251, ಟೇಲರ್ 38, ನಿಕೋಲ್ಸ್ 7, ಬ್ಲಂಡೆಲ್ 14, ಜೇಮಿಸನ್ 51*. ಸೌಥಿ 11*, ರೋಚ್ 114ಕ್ಕೆ 3, ಗ್ಯಾಬ್ರಿಯೆಲ್ 89ಕ್ಕೆ 3, ಜೋಸೆಫ್​ 99ಕ್ಕೆ 1), ವೆಸ್ಟ್ ಇಂಡೀಸ್: 26 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 (ಬ್ರಾಥ್‌ವೇಟ್ 20*, ಕ್ಯಾಂಪ್‌ಬೆಲ್ 22*).

    ತಂದೆಯ ನಿಧನದ ನಡುವೆಯೂ ಟೆಸ್ಟ್ ಆಡಿದ ವಿಂಡೀಸ್ ವೇಗಿ ಕೇಮಾರ್ ರೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts