More

    IPL 2024: ಎರಡು ತಿಂಗಳ ಬ್ರೇಕ್​ ಬಳಿಕ ಆರ್​ಸಿಬಿಗೆ ವಿರಾಟ್​! ಮೊದಲ ಪಂದ್ಯದಲ್ಲಿ ಸಿಗಲಿದ್ಯಾ? ಭರ್ಜರಿ ಓಪನಿಂಗ್​

    ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್​ 2024ರ ಆವೃತ್ತಿಗೆ ಈಗಾಗಲೇ ಅದ್ದೂರಿ ಚಾಲನೆ ದೊರೆತಿದ್ದು, ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು, ಗಾಯಕರ ಹಾಡು, ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆದಿದ್ದು, ಈ ಬಾರಿಯ ಐಪಿಎಲ್​ನ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್​ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ರುತುರಾಜ್​ ಗಾಯಕ್ವಡ್​ ನೇತೃತ್ವದ ಚನ್ನೈ ಸೂಪರ್ ಕಿಂಗ್ಸ್ (CSK)​ ಮುಖಾಮುಖಿಯಾಗಿ ಸೆಣಸಾಡಲಿದೆ.

    ಇದನ್ನೂ ಓದಿ: ಸತತ 3ನೇ ದಿನ ಗೂಳಿಯ ಗುಟುರು: ದಾಖಲೆ ಏರಿಕೆ ಕಂಡ ಅಮೆರಿಕ ಷೇರು ಪೇಟೆ, ಭಾರತೀಯ ಮಾರುಕಟ್ಟೆಯಲ್ಲೂ ಚೇತರಿಕೆ

    ಇನ್ನು ಕ್ರಿಕೆಟ್​ ಹಾಗೂ ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಕ್ಯಾಪ್ಟನ್​, ಐದು ಬಾರಿ ಚಾಂಪಿಯನ್ಸ್​ ಪಟ್ಟ ತಂದುಕೊಟ್ಟಂತ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವ ಈಗ ಬದಲಾವಣೆಗೊಂಡಿದ್ದು, ಸಿಎಸ್​ಕೆ ಆರಂಭಿಕ ಆಟಗಾರನಾದ ರುತುರಾಜ್​ ಗಾಯಕ್ವಡ್​ಗೆ ಕೊಡಲಾಗಿದೆ. ಈ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ರುತುರಾಜ್ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಸದ್ಯ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ವಿಷಯ.

    ಇನ್ನು ಮೊದಲ ಪಂದ್ಯಕ್ಕೆ ಎರಡು ತಿಂಗಳ ಬ್ರೇಕ್​ ನಂತರ ಎಂಟ್ರಿ ಕೊಡುತ್ತಿರುವ ವಿರಾಟ್​ ಕೊಹ್ಲಿ, ಅತ್ಯುತ್ತಮ ಪ್ರದರ್ಶನದ ಮೂಲಕ ತಂಡವನ್ನು ಫೈನಲ್​ಗೆ ಕರೆದುಕೊಂಡು ಹೋಗುವ ಭರವಸೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಇದು ಹೊಸ ಅಧ್ಯಾಯ ಎಂದು ಹೇಳಿ ಹೊಸ ಸಂಚಲನ ಸೃಷ್ಟಿಸಿರುವ ವಿರಾಟ್, ಸಿಎಸ್​ಕೆ ವಿರುದ್ಧ ಓಪನರ್​ ಆಗಿ ಕಣಕ್ಕಿಳಿಯಲಿದ್ದಾರೆ.

    ಇದನ್ನೂ ಓದಿ: ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಸಲ್ಲಿಸಲು ಡಿಸಿ ಸೂಚನೆ

    ಸಿಎಸ್​ಕೆ ಪರ ಆರಂಭಿಕ ಬ್ಯಾಟ್ಸ್​ಮನ್​ ಆಗಿ ರುತುರಾಜ್ ಹಾಗೂ ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಓಪನರ್​ ಆಗಿ ಕಣಕ್ಕಿಳಿಯಲಿದ್ದಾರೆ. ಸದ್ಯ ಇವರಿಬ್ಬರ ಮೇಲೆ ಭಾರೀ ನಿರೀಕ್ಷೆ ಮೂಡಿದ್ದು, ತಮ್ಮ ತಂಡಕ್ಕೆ ಭರ್ಜರಿ ಓಪನಿಂಗ್ ತಂದುಕೊಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts