More

    ಇಂದು, ನಾಳೆ,ಯುಗಾದಿ, ಸಂಕ್ರಾಂತಿ, ದಸರಾ ಯಾವತ್ತೂ ಸಿಎಂ ಬದಲಾವಣೆ ಇಲ್ಲ ಅಂದ್ರು ಕೆ.ಎಸ್​.ಈಶ್ವರಪ್ಪ

    ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ವಿಚಾರ ಕೇಳಿಬರುತ್ತಲೇ ಇದೆ. ಹೊರತು ಇದು ಜಾರಿಯಾಗುವುದಿಲ್ಲ, ಇದರ ಅಗತ್ಯವೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹಿರಿಯ ಮಂತ್ರಿಗಳನ್ನು ಬಿಡ್ತಾರೆ. ಹಳಬರನ್ನು ಬಿಟ್ಟು, ಹೊಸಬರನ್ನು ತೆಗೆದುಕೊಳ್ಳುತ್ತಾರೆ. ಇವತ್ತು, ನಾಳೆ, ನಾಡಿದ್ದು, ಯುಗಾದಿ ಸಂಕ್ರಾಂತಿ, ದಸರಾ ಎಲ್ಲವೂ ಅಗಿದೆ. ಯಾವ ಮಂತ್ರಿಯೂ ಬದಲಾವಣೆ ಆಗಿಲ್ಲ. ಇವೆಲ್ಲಾ ಸೃಷ್ಟಿ ಅಷ್ಟೇ, ಮುಖ್ಯಮಂತ್ರಿ ಬದಲಾವಣೆ ಅನ್ನೋದು ಸಣ್ಣ ವಿಚಾರ ಅಲ್ಲ. ಹಾಗಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಸಾಕಷ್ಟು ಅಭಿವೃದ್ಧಿ ಅಗಿದೆ.ರಾಜ್ಯದ ಜನ ಮೆಚ್ಚುತ್ತಿದ್ದಾರೆ. ಕಾಂಗ್ರೆಸ್ ನವರು ಇಲ್ಲದೇ ಇರೋ ಗೊಂದಲ ಸೃಷ್ಟಿ ಮಾಡ್ತಾರೆ ಎಂದರು.

    ಪಿಎಸ್ಐ ನೇಮಕಾತಿ ಅಕ್ರಮ‌ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಿದ್ರೇ ಈ ವಿಚಾರ ಹೊರಗೆ ಬರ್ತಾ ಇರಲಿಲ್ಲ. ಮುಚ್ಚಿ ಹಾಕುತ್ತಿದ್ದರು.ನಾವು ಅದನ್ನು ಬಿಟ್ಟಿಲ್ಲ. ಅದಕ್ಕೆ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ.ಇವತ್ತು ಯಾವ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಹ ನಿಂತಿಲ್ಲ..ಜನರು ಸಹ ಸರ್ಕಾರದ ಕಾರ್ಯದ ಬಗ್ಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಎಚ್​​. ವಿಶ್ವನಾಥ್​​ ಅವರು ನನಗೆ ಮಾತ್ರ ಅಲ್ಲ, ಇಡೀ ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ: ಸಚಿವ ಎಸ್​​.ಟಿ. ಸೋಮಶೇಖರ್​​ ವ್ಯಂಗ್ಯ

    ಬಾಲಿವುಡ್​​ v/s ದಕ್ಷಿಣ ಸಿನಿಮಾ ಅಂದ್ರೇನೆ ನನಗೆ ಕೆಟ್ಟ ಕೋಪ ಬರುತ್ತೆ: ಅಕ್ಷಯ್​ ಕುಮಾರ್​ ಹೀಗಂದಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts