ಎಚ್​​. ವಿಶ್ವನಾಥ್​​ ಅವರು ನನಗೆ ಮಾತ್ರ ಅಲ್ಲ, ಇಡೀ ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ: ಸಚಿವ ಎಸ್​​.ಟಿ. ಸೋಮಶೇಖರ್​​ ವ್ಯಂಗ್ಯ

SomaShekhar
Published on

ಮೈಸೂರು: ವಿಶ್ವನಾಥ್ ಕೇವಲ ನನಗೆ ಮಾತ್ರ ಪ್ರಶ್ನೆ ಕೇಳುವುದಿಲ್ಲ ಸಲಹೆ ಕೊಡುವುದಿಲ್ಲ.ಅವರು ದೇಶ ಹಾಗೂ ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ ಸಲಹೆ ಕೊಡುತ್ತಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಈಗ ಕೊಟ್ಟಿರುವ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ.ಅವರು ಮೈಸೂರು ಉಸ್ತುವಾರಿ ಆದಾಗ ಎಷ್ಟು ಸಭೆ ಮಾಡಿದ್ದರು.ಎಷ್ಟು ಬಾರಿ ತಾಲೂಕಿನ ಪ್ರವಾಸ ಮಾಡಿದ್ದರು ನನಗೆ ಗೊತ್ತಿಲ್ಲ.ನಾನು ಯಾರು ಮಾಡದಷ್ಟು ಜಿಲ್ಲೆಯ ತಾಲೂಕು, ಹಳ್ಳಿಗಳಿಗೆ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇದನ್ನು ವಿಶ್ವನಾಥ್ ಕೇಳಿ ತಿಳಿದುಕೊಳ್ಳಲಿ ಎಂದರು.

ಚುನಾವಣಾ ನೀತಿ ಸಂಹಿತಿ ಹಿನ್ನಲೆ ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ.

ಜಿಲ್ಲಾಧಿಕಾರಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.ಸಭೆ ಮಾಡಬಾರದು ಸ್ಥಳ ಪರಿಶೀಲನೆಗೆ ಹೋಗಬಾರದು. ಇದು ಸ್ಪಷ್ಟವಾಗಿ ನೀತಿ ಸಂಹಿತೆಯಲ್ಲಿ ಇದೆಸಂಸದರು ಸಚಿವರು ಆಗಿದ್ದ ಎಚ್ ವಿಶ್ವನಾಥ್ ಅವರಿಗೆ ಇದು ಗೊತ್ತಿರಬೇಕಿತ್ತು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net