More

    ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಗೆ ಸಿಎಂ ಸಹಮತ: ಸಚಿವ ಶ್ರೀರಾಮುಲು

    ಕಲಬುರಗಿ: ಜನರ ಬೇಡಿಕೆಯಂತೆ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆಯನ್ನು ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಾರಿಗೆ‌ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ‌ ಬಿ.ಶ್ರೀರಾಮುಲು ಅವರು ಹೇಳಿದರು.

    ಮಂಗಳವಾರ ಕಲಬುರಗಿ ನಗರದ ಆರ್.ಟಿ‌.ಕ್ರಾಸ್ ಬಳಿ 9.50 ಕೋಟಿ ರೂ. ವೆಚ್ಚದಲ್ಲಿ ನೂತನ ಜಂಟಿ ಸಾರಿಗೆ ಆಯುಕ್ತರ ಕಚೇರಿ, ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವ ಸಲುವಾಗಿ ಮುಖ್ಯ ಮಂತ್ರಿಗಳ ಭೇಟಿ ಮಾಡಿ ಚರ್ಚಿಸುವೆ ಎಂದರು.

    ಹೊಸ ಕಟ್ಟಡವು 1.05 ಎಕರೆ ವಿಸ್ತೀರ್ಣದಲ್ಲಿ ನೆಲ‌ ಮಹಡಿ, ಮೊದಲನೇ ಮತ್ತು ಎರಡನೇ ಮಹಡಿಯೊಂದಿಗೆ ನಿರ್ಮಾಣವಾಗುತ್ತಿದ್ದು, ಜಂಟಿ ಸಾರಿಗೆ ಆಯುಕ್ತರ ಕಚೇರಿ, ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹೊಂದಿದೆ.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಲಬುರಗಿ ಜನತಾ ಬಜಾರ್ ಅಧ್ಯಕ್ಷ ದತ್ತು ಪಡ್ನಿಸ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತ ಟಿ.ಹೆಚ್.ಎಂ.ಕುಮಾರ, ಅಪರ ಸಾರಿಗೆ ಆಯುಕ್ತರಾದ ಮಾರುತಿ ಸಾಂಬ್ರಾಣಿ, ಬಿ.ಪಿ.ಉಮಾಶಂಕರ, ಸಿ. ಮಲ್ಲಿಕಾರ್ಜುನ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪಾ, ಸಿ.ಟಿ.ಎಂ. ವಿ.ಎಸ್.ಸಂತೋಷಕುಮಾರ,ಕಲಬುರಗಿ ವಿಭಾಗದ ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ನೂರ್ ಮೊಹಮ್ಮದ್‌ ಭಾಷಾ ಇದ್ದರು.

    ಕಳೆದ ಮೂರು ವರ್ಷದಲ್ಲಿ ಆನೆ ದಾಳಿಗೆ ಬಲಿಯಾದವರೆಷ್ಟು: ಸರ್ಕಾರ ನೀಡಿರುವ ವರದಿ ಹೇಳೋದೇನು?

    ಮದ್ಯಕ್ಕಾಗಿ ಡಾಬಾ ಮಾಲೀಕನ ಜತೆ ಜಗಳ: ಕುಡಿದ ಮತ್ತಿನಲ್ಲಿ ಅನುಚಿತ ವರ್ತನೆ ತೋರಿದ ಪೇದೆ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts